ಸಿದ್ದಾಪುರ: ತಾಲೂಕಿನ ಕಾನಗೋಡು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿಯ ಶಿರಸಿ- ಸಿದ್ದಾಪುರ ಮುಖ್ಯ ರಸ್ತೆ ಮಂಡ್ಲಿಕೋಪ್ಪದಿಂದ ಗೊರಟನಮನೆಗೆ ಹೋಗುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಓಡಾಡಲು ಆಗದ ಸ್ಥಿತಿ ನಿರ್ಮಾಣವಾಗಿದೆ.
ಈ ಗ್ರಾಮದಲ್ಲಿ 9 ಮನೆಗಳು ಇದ್ದು ಸುಮಾರು 35 ಜನರು ವಾಸವಾಗಿರುತ್ತಾರೆ. ಇಲ್ಲಿಯ ಜನರು ಮುಖ್ಯ ರಸ್ತೆಗೆ ಬರಬೇಕೆಂದರೆ ಮೂರು ಕಿಲೋಮೀಟರ್ ಕಾಡಿನಲ್ಲಿ ನಡೆದು ಬರಬೇಕಾಗುತ್ತದೆ. ಮಳೆಗಾಲದಲ್ಲಿ ವಾಹನಗಳು ಓಡಾಡುವುದು ಕಷ್ಟಸಾಧ್ಯ ವಾದುದು. ಇದರಿಂದ ಶಾಲಾ ಮಕ್ಕಳು, ಮಹಿಳೆಯರು, ವೃದ್ಧರು ತುಂಬಾ ಕಷ್ಟ ಪಡಬೇಕಾಗಿದೆ. ಅನಾರೋಗ್ಯ ಸಂಭವಿಸಿದರೆ ಅವರ ಪರಿಸ್ಥಿತಿ ಹೇಳತೀರದು.
ಈ ಭಾಗದಲ್ಲಿ ಅಕ್ರಮವಾಗಿ ಮರಳುಗಾಡಿಗಳು ರಾತ್ರಿಹಗಲೆನ್ನದೆ ಓಡಾಡುತ್ತಿವೆ. ಮರಳು ಮಾಫಿಯಾ ತುಂಬಾ ಇರುವುದರಿಂದ ಇಲ್ಲಿ ಮರಳು ಗಾಡಿಯವರು ಯಾವುದೇ ಅಧಿಕಾರಿಗಳ ಭಯ ಇಲ್ಲದೆ ದಿನ ನಿತ್ಯ ಯಥೇಚ್ಛ ವಾಗಿ ಮರಳು ಸಾಗಣೆ ಮಾಡುತ್ತಾರೆ. ಇದರಿಂದ ರಸ್ತೆ ತುಂಬಾ ಹದಗೆಟ್ಟಿದೆ. ಮಳೆಗೆ ನೀರು ರಸ್ತೆಯ ಮೇಲೆ ಹರಿದು ರಸ್ತೆಗಳು ಕೆಸರು ಗದ್ದೆಯಂತಾಗಿವೆ.ಇಲ್ಲಿ ನಡೆದುಕೊಂಡು ಹೋಗುವುದಕ್ಕೂ ಅಸಾಧ್ಯವಾಗಿದೆ. ಇನ್ನು ವಾಹನ ಸಂಚಾರವಂತೂ ಸಾಧ್ಯವೇ ಇಲ್ಲ. ಮೂರು ಕಿಮೀ ಹೋಗಬೇಕೆಂದರೆ ಅದು ದೊಡ್ಡ ಸಾಹಸವನ್ನೆ ಮಾಡಬೇಕು. ಇಲ್ಲಿ ಮರಳು ಸಾಗಾಣಿಕೆ ಮಾಡುತ್ತಿರುವವರನ್ನು ಕೇಳುವವರಿಲ್ಲವಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಇತ್ತಕಡೆ ನೋಡುತ್ತಿಲ್ಲಾ.
ಊರಿಗೆ ನಿಮ್ಮ ಪಂಚಾಯತದಿಂದ ಯಾವುದೇ ಸೌಲಭ್ಯ ಸಿಕ್ಕಿಲ್ಲ ಎನ್ನುವ ಬೇಸರ ಗ್ರಾಮಸ್ಥರಲ್ಲಿದೆ. ಒಂದೇ ಮನೆ ಇರುವಲ್ಲಿ ಲಕ್ಷಗಟ್ಟಲೆ ಹಣ ಹಾಕಿ ಎರಡು ಮೂರು ಕಿಮೀ ರಸ್ತೆ ಮಾಡಿದ ಉದಾಹರಣೆ ಗಳಿವೆ. ಆದರೆ ಜನ ಪ್ರತಿನಿಧಿಗಳಿಗೆ ನಮ್ಮ ರಸ್ತೆ ಕಾಣುತ್ತಿಲ್ಲವೇ?. ಈ ಹಿಂದೆ ರಸ್ತೆ ಮಾಡುವಂತೆ ಗ್ರಾಮ ಪಂಚಾಯತಿಗೆ ಹಲವು ಬಾರಿ ಅರ್ಜಿ ನೀಡಿದ್ದೇವೆ. ಅಧ್ಯಕ್ಷರು ಉಪಾಧ್ಯಕ್ಷರಿಗೂ ಮಾಹಿತಿ ನೀಡಿದ್ದೇವೆ. ಆದರೆ ಯಾವುದಕ್ಕೂ ಯಾರು ಸ್ಪಂದಿಸಿಲ್ಲ. ಕಳೆದ ವರ್ಷ 20000 ಕರ್ಚು ಮಾಡಿ ರಸ್ತೆ ರಿಪೇರಿ ಮಾಡಿಕೊಂಡಿದ್ದೇವೆ ಎಂದು ಬೇಸರಿಸಿರುವ ಅವರು
ಮಂಡ್ಲಿಕೊಪ್ಪದಿಂದ – ಗೊರಟನಮನೆವರೆಗೆ ರಸ್ತೆ ನಿರ್ಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹೆಗ್ಗರಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹುಲ್ಲು0ಡೆ ಯಿಂದ ಮಗೆಜಡ್ಡಿಗೆ ಸಂಪರ್ಕ ನೀಡುವ ರಸ್ತೆ ಯು ಸಂಪೂರ್ಣ ಹದಗೆಟ್ಟು ಹೋಗಿದ್ದು ಸಾರ್ವಜನಿಕರು ವಿದ್ಯಾರ್ಥಿ ಗಳು ಹಲವಾರು ರೀತಿಯ ಸಮಸ್ಯೆ ಎದುರಿಸುವಂತಾಗಿದೆ ಕೂಡಲೇ ಸೂಕ್ತ ಕ್ರಮ ಕೈ ಗೊಂಡು ಸಮಸ್ಯೆ ಬಗೆಹರಿಸುವಂತೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ.
ಬೇಸಿಗೆಯಲ್ಲಿ ಪಂಚಾಯತ್ ದವರು ಮಣ್ಣು ಹಾಕಿ ರಸ್ತೆದುರಸ್ಥಿ ಮಾಡಿದ್ದರು ರಸ್ತೆಗೆ ಪೈಪ್ ಅಳವಡಿಸಲು ಸ್ಥಳೀಯರು ಹೇಳಿದ್ದರು ಒತ್ತಾಯ ಕೂಡ ಮಾಡಿದ್ದರು ಆದರೂ ಸಹ ಪೈಪ್ ಅಳವಡಿಸದೆ ಇರುವುದರಿಂದ ಈ ರೀತಿಯ ಸಮಸ್ಯೆ ಗಳು ಎದುರಾಗಿವೆ
ಮಳೆಗಾಲ ದಲ್ಲಿ ಉಂಟಾದ ಸಮಸ್ಯೆ ಬಗ್ಗೆ ಹಲವಾರು ಬಾರಿ ತಿಳಿಸಿದ್ದರು ಸೌಜನ್ಯ ಕ್ಕೂ ಬಂದು ನೋಡಲಿಲ್ಲ ಬೇಸಿಗೆಯಲ್ಲಿ ನಡೆಸಿದ ನಡೆದ ಕಾಮಗಾರಿ ಮಾಹಿತಿಯನ್ನು ಹಾಕದೆ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಸ್ಥಳೀಯ ಸಾರ್ವಜನಿಕ ರು ಆರೋಪಿಸಿದ್ದಾರೆ ಕೂಡಲೇ ಸಂಬಂಧ ಪಟ್ಟವರು ಗಮನ ಹರಿಸಬೇಕು ಎಂದು ಒತ್ತಾಯ ಮಾಡಿದ್ದಾರೆ ಇದನ್ನು ಹೇಳೋಣ ಎಂದರೆ ಪಂಚಾಯತ್ ದಲ್ಲಿ ಬಿಲ್ ಕಲೆಕ್ಟರ್ ಕಂಪ್ಯೂಟರ್ ಒಪರೇಟರ್ ಬಿಟ್ಟರೆ ಸಿಬ್ಬಂದಿಗಳು ಅಧಿಕಾರಿಗಳು ಕಛೇರಿ ಯಲ್ಲಿ ಲಭ್ಯ ಇಲ್ಲದೆ ಇರುವುದರಿಂದ ಜನರ ಸಮಸ್ಯೆ ಆಲಿಸಲು ಯಾರು ಇಲ್ಲದಂತಾಗಿದ್ದು ಸಾರ್ವಜನಿಕರು ಗೋಳಾಡುವ ಪರಿಸ್ಥಿತಿ ನಿರ್ಮಾಣ ವಾಗಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ