


ರಾಜ್ಯ ವಿಧಾನಸಭಾ ಅಧ್ಯಕ್ಷ ಮತ್ತು ಸ್ಥಳಿಯ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರ ವಿರುದ್ಧ ಅವಹೇಳನಕಾರಿ ಪ್ರಕಟಣೆ ಮಾಡಿದ ಆರೋಪದ ಮೇಲೆ ಬಿ.ಜೆ.ಪಿ.ಯ ಯುವ ಮೋರ್ಚಾ ಮಾಜಿ ಅಧ್ಯಕ್ಷ ಹರೀಶ್ ಗೌಡರ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಬಿ.ಜೆ.ಪಿ.ಮುಖಂಡರು ದೂರು ನೀಡಿದ್ದಾರೆ.
ಸಿದ್ಧಾಪುರ ಪೊಲೀಸ್ ಠಾಣೆಗೆ ದೂರು ನೀಡಿರುವ ಬಿ.ಜೆ.ಪಿ.ಯ ಕೆಲವು ಮುಖಂಡರು ಹರಳಿಕೊಪ್ಪದ ಹರೀಶ್ ಗೌಡರ್ ಫೇಸ್ ಬುಕ್ ಮತ್ತು ವ್ಯಾಟ್ಸಾಪ್ ಗಳಲ್ಲಿ ವಿಧಾನಸಭಾ ಅಧ್ಯಕ್ಷರ ವಿರುದ್ಧ ಮಾನಹಾನಿಕಾರಕ ತೇಜೋವಧೆಯ ವಿಷಯಗಳನ್ನು ಪ್ರಕಟಿಸಿದ್ದಾನೆ. ಇದರಿಂದ ಕಾಗೇರಿಯವರ ವ್ಯಕ್ತಿತ್ವಕ್ಕೆ ಕುಂದಾಗುವ ಜೊತೆಗೆ ಸಾಮಾಜಿಕ ಸ್ವಾಸ್ಥ್ಯಕ್ಕೂ ಧಕ್ಕೆಯಾಗಿದೆ. ಜಾತಿ,ಜಾತಿಗಳ ನಡುವೆ ವೈಷಮ್ಯ ಹುಟ್ಟುಹಾಕುವ ಈ ಕ್ರೀಯೆಯಿಂದ ಶಾಸಕರ ಅಭಿಮಾನಿಗಳಿಗೆ ನೋವಾಗಿದ್ದು ಹರೀಶ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.

ಸಿದ್ಧಾಪುರ ಪೊಲೀಸ್ ಠಾಣಾಧಿಕಾರಿಗಳಿಗೆ ನೀಡುವ ಈ ದೂರಿನ ಸಮಯದಲ್ಲಿ ವಿಜೇತ್ ಗೌಡರ್,ರಾಘವೇಂದ್ರ ಶಾಸ್ತ್ರಿ,ಭಗವಾನ್ ನಾಯ್ಕ,ಗುರುರಾಜ್ ಶಾನಭಾಗ,ರಾಜೇಂದ್ರ ಕಿಂದ್ರಿ ಸೇರಿದಂತೆ ಕೆಲವರು ಉಪಸ್ಥಿತರಿದ್ದರು.
