

ಸಿದ್ದಾಪುರದ ನಿವೃತ್ತ ಸೈನಿಕರ ಸಂಘ ಹಾಗೂ ಗೆಳೆಯರ ಬಳಗದ ವತಿಯಿಂದ ಪಟ್ಟಣದಲ್ಲಿ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲಾಯಿತು, ರಾಮಕೃಷ್ಣ ಹೆಗಡೆ ವ್ರತ್ತದಲ್ಲಿ ಆರಂಭ ವಾದ ಪಂಜಿನ ಮೆರವಣಿಗೆಗೆ ಡಾ ಶೀಧರ ವೈದ್ಯ ಚಾಲನೆ ನೀಡಿದರು ಮೆರವಣಿಗೆ ಯು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಂಚರಿಸಿತು ಮೆರವಣಿಗೆ ಯಲ್ಲಿಕರಾಟೆ ತರಬೇತಿ ವಿದ್ಯಾರ್ಥಿ ಗಳು ಗಮನ ಸೆಳೆದರು ಈ ಸಂದರ್ಭದಲ್ಲಿ ನಿವೃತ್ತ ನೌಕರರು, ನಿವ್ರತ್ತ ಸೈನಿಕರು ಪ ಪಂ ಸದಸ್ಯರು, ಹಿರಿಯ ನಾಗರಿಕರು ಸಾರ್ವಜನಿಕ ರು ಉಪಸ್ಥಿತರಿದ್ದರು.

https://www.facebook.com/samaajamukhi.net


ನೀರಿನೊಳಗೆ ‘ಕಾರ್ಗಿಲ್ ವೀರ’ ವಿಕ್ರಮ್ ಬಾತ್ರಾ ಚಿತ್ರ ಬಿಡಿಸಿದ ಕಲಾವಿದ: ಯುಆರ್‌ಎಫ್ ವಿಶ್ವ ದಾಖಲೆ


ತಿರುವನಂತಪುರಂ (ಕೇರಳ): ಕಾರ್ಗಿಲ್ ವಿಜಯ್ ದಿವಸ್ ಆಚರಣೆಯ ನಿಮಿತ್ತ ಕೇರಳದ ತಿರುವನಂತಪುರಂನ ಪಂಗೋಡ್ ಮಿಲಿಟರಿ ಸ್ಟೇಷನ್ನಲ್ಲಿ ಕಲಾವಿದ ‘ದಾ ವಿನ್ಸಿ’ ಸುರೇಶ್ ಪರಮವೀರ ಚಕ್ರ ಪುರಸ್ಕೃತ, ಹುತಾತ್ಮ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಭಾವಚಿತ್ರವನ್ನು ನೀರಿನಲ್ಲಿ ಟೈಲ್ಸ್ ಬಳಸಿ ಬಿಡಿಸಲಾಗಿದ್ದು, ಯುಆರ್‌ಎಫ್ (ಯುನಿವರ್ಸಲ್ ರೆಕಾರ್ಡ್ಸ್ ಫೋರಂ) ವಿಶ್ವ ದಾಖಲೆಗೆ ಪಾತ್ರವಾಗಿದೆ. ನೀರಿನೊಳಗೆ 1,500 ಚದರ ಅಡಿ ವಿಕ್ರಮ್ ಬಾತ್ರಾ ಅವರ ಭಾವಚಿತ್ರ ಪೂರ್ಣಗೊಳಿಸಲು ಎಂಟು ಗಂಟೆಗಳ ಸಮಯ ತೆಗೆದುಕೊಳ್ಳಲಾಯಿತು. ಸ್ಥಳದಲ್ಲಿ ಉಪಸ್ಥಿತರಿದ್ದ ಯುಆರ್‌ಎಫ್ ಅಧಿಕಾರಿಗಳು ಪ್ರಮಾಣಪತ್ರವನ್ನು ಕಲಾವಿದ ಸುರೇಶ್ ಅವರಿಗೆ ವಿತರಿಸಿದರು.
