

ಬೆಳಗಾವಿ ವಿಭಾಗದ ಸ್ವಾಭಿಮಾನಿ ಸಾರ್ವಜನಿಕ ಶಾಲೆ 2022 ಪ್ರಶಸ್ತಿಯ ಆಯ್ಕೆ ಸಮೀತಿ ಮಂಗಳವಾರ ಸಿದ್ದಾಪುರದ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬಾಲಿ ಕೊಪ್ಪ ವನ್ನು ಭೇಟಿ ಮಾಡಿತು.

ಆಯ್ಕೆ ಸಮೀತಿಯ ಸದಸ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹ ಕಾರ್ಯದರ್ಶಿ ವಾ ಲಟರ್ ಹೆಚ್ ಡಿಮೆಲ್ಲೋ ನೇತೃತ್ವದ ಸಮೀತಿ ಶಾಲೆಯ ಸಂಪೂರ್ಣ ಪರಿವೀಕ್ಷಣೆ ನಡೆಸಿ ಆಯ್ಕೆ ಸಮೀತಿಯ ಮಾನದಂಡಗಳ ಪ್ರಕಾರ ಶಾಲೆ ಹೊಂದಿರುವ ವೈಶಿಷ್ಟ್ಯ ಗಳ ದಾಖಲೀಕರಣ ನಡೆಸಿತು. ಸರ್ಕಾರಿ ಶಾಲೆಯಾಗಿ ಸೀಮಿತ ಅವಕಾಶಗಳಲ್ಲಿ ಶಾಲೆ ಸಾಧಿಸಿದ ಪ್ರಗತಿಯ ಬಗ್ಗೆ ಸಮೀತಿ ಮೆಚ್ಚುಗೆ ವ್ಯಕ್ತಪಡಿಸಿತು.

ಸಿದ್ದಾಪುರ:ಪಟ್ಟಣ ವ್ಯಾಪ್ತಿಯ ರವೀಂದ್ರ ನಗರದಲ್ಲಿರುವ ಅಂಬೇಡ್ಕರ್ ಭವನದ ಪಕ್ಕದಲ್ಲಿರುವ ವಾಚನಾಲಯವು ಬಂದ್ ಆಗಿದ್ದು, ಅದನ್ನು ಪುನಃ ತೆರೆದು, ಮೇಲ್ವಿಚಾರಕರನ್ನು ನೇಮಿಸಲು ಮತ್ತು ಪೌರ ಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳಿಗೆ ಬೆಳಗಿನ ಉಪಹಾರ ನೀಡಲು ಪಟ್ಟಣ ಪಂಚಾಯಿತಿ ಸಭಾ ಭವನದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆ ಯಲ್ಲಿ ನಿರ್ಣಯಿಸಲಾಯಿತು
ವಿಶೇಷ ಅನುದಾನದ ಅಡಿಯಲ್ಲಿ 11 ಕಾಮಗಾರಿಗಳು ಮಂಜುರಾಗಿದ್ದು, ಅವುಗಳಲ್ಲಿ 9 ಕಾಮಗಾರಿಗಳು ಪೂರ್ಣಗೊಂಡಿದ್ದು 2 ಮುಕ್ತಾಯದ ಹಂತದಲ್ಲಿವೆ. ಕಾಮಗಾರಿಯನ್ನು ಪೂರ್ಣಗೊಳಿಸಲು ಗುತ್ತಿಗೆದಾರರು ಸಮಯಾವಕಾಶ ಕೇಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದಾಗ, ಹಿರಿಯ ಸದಸ್ಯರಾದ ಕೆ ಜಿ ನಾಯ್ಕ ಹಣಜೀಬೈಲ್ ಮತ್ತು ಮಾರುತಿ ನಾಯ್ಕ ಆಕ್ಷೇಪ ವ್ಯಕ್ತಪಡಿಸಿ, ನಡೆದಿರುವ ಕಾಮಗಾರಿಗಳು ದೋಷಪೂರಿತವಾಗಿವೆ. ಪಟ್ಟಣದ ಶ್ರೇಯಸ್ ಆಸ್ಪತ್ರೆ ಎದುರಿನ ರಸ್ತೆಯ ಕಾಂಕ್ರೀಟ್ ಈಗಾಗಲೇ ಕಿತ್ತು ಬರುತ್ತಿದೆ. ಪಟ್ಟಣದಲ್ಲಿ ನಿರ್ಮಿಸಿರುವ ಕೆಲ ಒಳ ಚರಂಡಿಗಳು ಸರಿಯಾಗಿಲ್ಲ. ಕಾಮಗಾರಿಯ ಗುಣಮಟ್ಟದ ತನಿಖೆಯಾಗಬೇಕು. ಅಲ್ಲಿಯವರೆಗೂ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಲು ಸಾಧ್ಯವಿಲ್ಲ. ಮಳೆಗಾಲದಲ್ಲಿ ರಸ್ತೆ ಕೆಲಸಗಳ ಗುತ್ತಿಗೆಯನ್ನು ಏಕೆ ನೀಡಲಾಗಿದೆ ಎಂದು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.
ಪಟ್ಟಣದಲ್ಲಿ ಅನಧಿಕೃತವಾಗಿ ರಾರಾಜಿಸುತ್ತಿರುವ ಬ್ಯಾನರ್ ಮತ್ತು ಹೋಲ್ಡಿಂಗ್ಸ್ ಗಳ ಬಗ್ಗೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದಾಗ ಮುಖ್ಯ ಅಧಿಕಾರಿ ಕುಮಾರ್ ನಾಯ್ಕ್ ಮಾತನಾಡಿ ನನ್ನ ಗಮನಕ್ಕೆ ಬಂದ ಅನಧಿಕೃತ ಫಲಕಗಳನ್ನು ತೆರೆವುಗೊಳಿಸಿದ್ದೇನೆ. ಮತ್ತೊಮ್ಮೆ ಪರಿಶೀಲಿಸಿ ಅನಧಿಕೃತ ಫಲಕಗಳನ್ನು ತೆರವುಪಡಿಸಿ ಸಂಬಂಧಿಸಿದವರಿಗೆ ದಂಡ ವಿಧಿಸಲಾಗುವುದು ಎಂದು ವಿವರಣೆ ನೀಡಿದರು.
ಸಭೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ನಾಯ್ಕ, ಉಪಾಧ್ಯಕ್ಷ ರವಿ ಕುಮಾರ್ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ವಿನಯ್ ಹೊನ್ನೆಗುಂಡಿ ಹಾಗೂ ಇತರ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.


