

ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳದೆ ಬ್ರಟೀಷರಿಗೆ ಸ್ಸಾರಿ ಎಂದಿದ್ದ ಬಿ.ಜೆ.ಪಿ.ಗಳು ಇಂದು ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾತನಾಡುತಿದ್ದಾರೆ. ದೇಶದ ವಿಭಜನೆಗೆ ಕಾರಣವಾದ ಹಿಂದೂ ಮಹಾಸಭಾ ಮತ್ತು ಮುಸ್ಲಿಂ ಲೀಗ್ ಕಾಂಗ್ರೆಸ್ ನ ನವಭಾರತದ ಕನಸಿಗೆ ಬೆಂಕಿ ಇಟ್ಟರು ಇವರೆಲ್ಲಾ ಈಗ ಕಾಂಗ್ರೆಸ್ ಟೀಕಿಸುತ್ತಾ ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾತನಾಡುತಿದ್ದಾರೆ. ಈ ಮತೀಯವಾದಿಗಳಿಗೆ ಭಾರತ ಸ್ವಾತಂತ್ರ್ಯ,ಅಖಂಡ ಭಾರತದ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ ಎಂದು ಎಐಸಿಸಿ ವಕ್ತಾರ ಸುಧೀರ್ ಮೊರಳ್ಳಿ ಪ್ರಶ್ನಿಸಿದರು.

ಸಿದ್ಧಾಪುರದಲ್ಲಿ ಕಾಂಗ್ರೆಸ್ ಸಂಘಟಿಸಿದ್ದ ಏಕತೆಗಾಗಿ ಪಾದಯಾತ್ರೆ ಕಾರ್ಯಕ್ರಮದ ಸಭೆಯಲ್ಲಿ ವಿಶೇಶ ವಕ್ತಾರರಾಗಿ ಮಾತನಾಡಿದ ಅವರು ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡುತ್ತಲೇ ಅಹಿಂಸೆಯಿಂದ ಸ್ವಾತಂತ್ರ್ಯ ಗಳಿಸಿದ ದೇಶ ಭಾರತವೊಂದೇ. ಈ ಸತ್ಯಾಗ್ರಹದ ಹೋರಾಟದ ಹಿಂದಿನ ಶಕ್ತಿಗಳು ಮಹಾತ್ಮಾಗಾಂಧಿ ಮತ್ತು ಕಾಂಗ್ರೆಸ್ ಎಂದು ವಿವರಿಸಿದರು. ದೇಶವನ್ನು ಅಭಿವೃದ್ಧಿ ಮಾಡದೆ ಬಡವರಿಗೆ ವಾಸದ ಮನೆ ಕೊಡದೆ ಹರ್ಘರ್ ತಿರಂಗಾ ಎನ್ನುವ ಈಗಿನ ಭಾರತದ ಗುಜರಾತ್ ಜೋಡಿ ಖಾದಿ ಬದಲು ಪಾಲಿಸ್ಟರ್ ಧ್ವಜ ಮಾರಾಟ ಮಾಡುವ ಮೂಲಕ ಧ್ವಜ ಸಂಹಿತೆ ಮತ್ತು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿ ದೇಶಪ್ರೇಮದ ಹೆಸರಿನಲ್ಲಿ ವ್ಯಾಪಾರ ವ್ಯವಹಾರ ಮಾಡುತ್ತಿದೆ ಎಂದು ಆರೋಪಿಸಿದರು.
.

ಸತ್ಯ ಅಹಿಂಸೆಯಿಂದ ಸ್ವಾತಂತ್ರ್ಯ ಬಂದಿಲ್ಲ ಎನ್ನುವ ಸಂವಿಧಾನ ಬದಲಿಸುವ ಅನಂತ ಹೆಗಡೆ ಅವರ ಅಜ್ಜ ಅಡಿಕೆ ಕತ್ತರಿಸಿದ ಅಡಕತ್ತರಿಯ ಶಬ್ಧಕ್ಕೆ ಹೆದರಿ ಬ್ರಟೀಷರು ದೇಶ ಬಿಟ್ಟು ಹೋದರೆ ಎಂದು ಪ್ರಶ್ನಿಸಿದರು. ದಯೆ,ಅಹಿಂಸೆ,ಸತ್ಯಾಗ್ರಹದಿಂದ ಗಳಿಸಿದ ಸ್ವಾತಂತ್ರ್ಯ ವನ್ನು ವ್ಯಾಪಾರಿಗಳು ಲಾಭಕ್ಕೆ ಬಳಸಿಕೊಳ್ಳುತ್ತಿರುವುದು ಈ ದೇಶದ ದುರಂತ ಎಂದು ಅವರು ಹರಿಹಾಯ್ದರು.
ಸಭಾ ಕಾರ್ಯಕ್ರಮ ಉದ್ಘಾಟಿಸಿದ ಏಐಸಿಸಿ ಕಾರ್ಯದರ್ಶಿ ಐವಾನ್ ಡಿಸೋಜಾ ಲಾಭ,ಸ್ವಾರ್ಥದ ಮತೀಯವಾದಿಗಳಿಂದ ಈ ದೇಶದ ಅಖಂಡತೆ,ಸ್ವಾತಂತ್ರ್ಯ ಉಳಿಸುವ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಕರ್ತವ್ಯ ಎಂದು ಭಾವಿಸಬೇಕು ಎಂದರು.
