ಬಿಜೆಪಿ ಜೊತೆಗಿನ ಮೈತ್ರಿ ಕಡಿದುಕೊಂಡು ಆರ್ ಜೆಡಿ ಜೊತೆಗೂಡಿ ಮಹಾಘಟಬಂಧನ್ ಸರ್ಕಾರ ರಚನೆ ಮಾಡಿರುವ ಜೆಡಿಯು ಮುಖ್ಯಸ್ಥ ಹಾಗೂ ಬಿಹಾರ ಸಿಎಂ ನಿತೀಶ್ ಕುಮಾರ್, 2014ರಲ್ಲಿ ಗೆದ್ದವರು 2024ರಲ್ಲಿ ಗೆಲ್ಲುತ್ತಾರೆಯೇ? ಎಂದು ಬಿಜೆಪಿ ಮತ್ತು ಪ್ರಧಾನಿ ಮೋದಿ ಅವರಿಗೆ ಸವಾಲೆಸೆದಿದ್ದಾರೆ.
ಪಾಟ್ನಾ: ಬಿಜೆಪಿ ಜೊತೆಗಿನ ಮೈತ್ರಿ ಕಡಿದುಕೊಂಡು ಆರ್ ಜೆಡಿ ಜೊತೆಗೂಡಿ ಮಹಾಘಟಬಂಧನ್ ಸರ್ಕಾರ ರಚನೆ ಮಾಡಿರುವ ಜೆಡಿಯು ಮುಖ್ಯಸ್ಥ ಹಾಗೂ ಬಿಹಾರ ಸಿಎಂ ನಿತೀಶ್ ಕುಮಾರ್, 2014ರಲ್ಲಿ ಗೆದ್ದವರು 2024ರಲ್ಲಿ ಗೆಲ್ಲುತ್ತಾರೆಯೇ? ಎಂದು ಬಿಜೆಪಿ ಮತ್ತು ಪ್ರಧಾನಿ ಮೋದಿ ಅವರಿಗೆ ಸವಾಲೆಸೆದಿದ್ದಾರೆ.
ಬುಧವಾರ ಎಂಟನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರವು 2024 ರ ಲೋಕಸಭೆ ಚುನಾವಣೆಯಲ್ಲಿ ತನ್ನ ಭವಿಷ್ಯದ ಬಗ್ಗೆ “ಚಿಂತನೆ” ಮಾಡಬೇಕಾಗಿದೆ. 2014ರಲ್ಲಿ ಗೆದ್ದವರು 2024ರಲ್ಲಿ ಗೆಲ್ಲುತ್ತಾರೆಯೇ? ಎಂದು ಹೇಳಿದ್ದಾರೆ.
ರಾಜ್ಯಪಾಲ ಫಾಗು ಚೌಹಾಣ್ ಅವರು ಪ್ರಮಾಣ ವಚನ ಬೋಧಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರ್, ‘ಹೊಸ ಸರ್ಕಾರವು ಪೂರ್ಣಾವಧಿಯಲ್ಲಿ ಉಳಿಯುವುದಿಲ್ಲ ಎಂಬ ಬಿಜೆಪಿಯ ಹೇಳಿಕೆಯನ್ನು ತಳ್ಳಿಹಾಕಿದರು. ಅಲ್ಲದೆ ಬಿಜೆಪಿ “2015ರ ವಿಧಾನಸಭೆಯ ನಂತರ ಅವರು ಇದ್ದ ಜಾಗಕ್ಕೆ ಹಿಂತಿರುಗುತ್ತಾರೆ” ಎಂದು ವ್ಯಂಗ್ಯ ಮಾಡಿದರು.
2024ಕ್ಕೆ ಎಲ್ಲರೂ (ವಿರೋಧ ಪಕ್ಷಗಳು) ಒಂದಾಗಬೇಕೆಂದು ನಾನು ಬಯಸುತ್ತೇನೆ. ನಾವೂ ವಿರೋಧ ಪಕ್ಷಕ್ಕೆ ಬಂದಿದ್ದೇವೆ. ದೇಶಾದ್ಯಂತ ಸಂಚರಿಸಿ ಪ್ರತಿಪಕ್ಷಗಳನ್ನು ಬಲಪಡಿಸುತ್ತೇವೆ. ಮುಂದೆ ನಾವು ಎಲ್ಲವನ್ನೂ ಮಾಡುತ್ತೇವೆ. ಇಡೀ ಪ್ರತಿಪಕ್ಷಗಳು ಒಗ್ಗಟ್ಟಿನಿಂದ ಮುನ್ನಡೆಯಲು ಮತ್ತು ಯೋಜನೆಯನ್ನು ಸಿದ್ಧಪಡಿಸಲು ನಾವು ಬಯಸುತ್ತೇವೆ. ಅವರು 2014 ರಲ್ಲಿ ಬಹುಮತ ಪಡೆದಿದ್ದರು. ಆದರೆ ಈಗ 2024 ಬಂದಿದೆ ಎಂದು ಹೇಳಿದರು.
ಅಂತೆಯೇ ಪ್ರಧಾನಿ ಹುದ್ದೆ ಅಭ್ಯರ್ಥಿೃ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿತೀಶ್, ಅಂತಹ ಯಾವುದೇ ಹುದ್ದೆಗೆ (ಪ್ರಧಾನಿ ಹುದ್ದೆ) ನಾನು ಸ್ಪರ್ಧಿಯಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಸಖ್ಯ ತೊರೆಯಲು ಕಾರಣ ವಿವರಿಸಿದ ನಿತೀಶ್, ‘ರಾಜ್ಯದಲ್ಲಿ ಜೆಡಿಯು ಪಕ್ಷವನ್ನು ದುರ್ಬಲಗೊಳಿಸುವ ಕೆಲಸಗಳು ನಡೆದಿದ್ದವು. ಇದೇ ಕಾರಣಕ್ಕೆ ನಮ್ಮ ಶಾಸಕರು, ನಾಯಕರು ಬಿಜೆಪಿ ಸಖ್ಯ ತೊರೆಯುವಂತೆ ಹೇಳುತ್ತಿದ್ದರು. ಅವರಿಗೆ ಬೆಂಬಲ ನೀಡಿದ ಹೊರತಾಗಿಯೂ ನಮ್ಮನ್ನೇ ಉರುಳಿಸುವ ಅವರ ಪ್ರಯತ್ನಗಳು ಸರಿಯಲ್ಲ. ಹೀಗಾಗಿ ನಾವು ನಮ್ಮ ಹಳೆಯ ಸ್ಥಾನಕ್ಕೆ ಮರಳಿದ್ದೇವೆ ಎಂದು ಹೇಳಿದರು. ಇದೇ ವೇಳೆ ಮಾಜಿ ಪ್ರಧಾನಿ ವಾಜಪೇಯಿ ಅವರನ್ನು ನೆನೆಸಿಕೊಂಡ ನಿತೀಶ್, ವಾಜಪೇಯಿ ಮೈತ್ರಿ ಪಕ್ಷಗಳನ್ನು ತುಂಬಾ ಪ್ರೀತಿಸುತ್ತಿದ್ದರು. ನಾವು ಅವರನ್ನು ಮರೆಯಲು ಸಾಧ್ಯವಿಲ್ಲ. ಆ ಸಮಯದಲ್ಲಿ ಅದು ಬೇರೆ ವಿಷಯವಾಗಿತ್ತು. ಅಟಲ್ ಜೀ ಮತ್ತು ಅಂದಿನ ಜನರ ಪ್ರೀತಿಯನ್ನು ಮರೆಯಲು ಸಾಧ್ಯವಿಲ್ಲ. ಆದರೆ ಆ ಪ್ರೀತಿ ಈಗಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ನಾನು ಏನೂ ಹೇಳುವುದಿಲ್ಲ ಎಂದು ಹೇಳಿದರು.