ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ ಆರೋಪದ ಮೇಲೆ ಬುಧವಾರ ಬಿ.ಜೆ.ಪಿ. ಪಕ್ಷದಿಂದ ಉಚ್ಛಾಟಿತರಾಗಿದ್ದ ಬಿ.ಜೆ.ಪಿ. ಯುವಮೊರ್ಚಾ ಮಾಜಿ ತಾಲೂಕಾಧ್ಯಕ್ಷ ಹರೀಶ್ ಗೌಡರ್ ರನ್ನು ಸಿದ್ದಾಪುರ ಪೊಲೀಸರು ಬಂಧಿಸಿರುವುದಾಗಿ ಸುದ್ದಿಯಾಗಿದೆ. ಕೆಲವು ದಿವಸಗಳಿಂದ ಶಿರಸಿ-ಸಿದ್ದಾಪುರದ ಮೂಲಭೂತ ಸಮಸ್ಯೆಗಳು,ಸಾರ್ವಜನಿಕರ ಅಹವಾಲುಗಳನ್ನು ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಮಾಡುತಿದ್ದ ಹರೀಶ್ ಗೌಡರ್ ಇತ್ತೀಚೆಗೆ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆಯವರ ಬಹುಪ್ರಸಾರದ ಚಿತ್ರಪಟವೊಂದನ್ನು ರೀ ಪೋಸ್ಟ್ ಮಾಡಿದ್ದರು ಎನ್ನಲಾಗಿದ್ದು.
ಸಾಮಾಜಿಕ ಜಾಲತಾಣಗಳಲ್ಲಿ ಹರೀಶ್ ವಿಶ್ವೇಶ್ವರ ಹೆಗಡೆಯವರ ವಿರುದ್ಧ ಅಪಪ್ರಚಾರ ಮಾಡಿ ತೇಜೋವಧೆ ಮಾಡಿತಿದ್ದಾರೆ ಎಂದು ಅವರ ಅಭಿಮಾನಿಗಳು ಸಿದ್ಧಾಪುರದಲ್ಲಿ ಪೊಲೀಸ್ ದೂರು ದಾಖಲಿಸಿದ್ದರು.
ಈ ಪ್ರಕರಣದ ಹಿಂದೆ ರಾಜಕೀಯ ದ್ವೇಶ, ಬಣರಾಜಕೀಯದ ಮೇಲಾಟಗಳಿದ್ದು ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಕಾರ್ಯಾಚರಿಸುತ್ತಿರುವ ಒಂದು ಬಣದ ವಿರುದ್ಧ ಇನ್ನೊಂದು ಬಣದ ರಾಜಕೀಯ ಮೇಲಾಟ ಈ ಬೆಳವಣಿಗೆಗೆ ಕಾರಣ ಎನ್ನಲಾಗಿದೆ.