

ಸಿದ್ದಾಪುರ : ಸಾಮಾಜಿಕ ಜಾಲತಾಣದಲ್ಲಿ ಸ್ಥಳೀಯ ಶಾಸಕಕಾಗೇರಿ ಯವರಿಗೆ ಅವಹೇಳನ ಮಾಡಲಾಗಿದೆ ಎಂದು ಹರೀಶ್ ಗೌಡರ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಮಾರುತಿ ನಾಯ್ಕ್ ಹೊಸೂರ್ ದೂರು ನೀಡಿದ್ದಾರೆ ಈ ರೀತಿ ಪೋಸ್ಟ್ ಹಾಕುತ್ತಿರುವುದರಿಂದ ಕೋಮು ದ್ವೇಷ, ಜಾತಿಗಳ ನಡುವೆ ವೈಶಮ್ಯ ಉಂಟುಮಾಡುವ ಸಾಧ್ಯತೆ ಗಳಿವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ ಈ ಕುರಿತು ಕಲಂ 295,505,ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ವಾಸ್ತವವೇನೆಂದರೆ…ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಸ್ಥಳೀಯ ಬಿ.ಜೆ.ಪಿ.ಘಟಕಕ್ಕೆ ಅಷ್ಟಕ್ಕಷ್ಟೇ. ಹಿಂದಿನ ಆಪ್ತ ಕೆ.ಜಿ.ನಾಯ್ಕ ರನ್ನು ದೂರಸರಿಸಿ ಹೊಸ ಪಡೆ ಕಟ್ಟತೊಡಗಿದ ಕಾಗೇರಿ ವಾಸ್ತವದಲ್ಲಿ ಸ್ಥಳೀಯ ಘಟಕ ನಿಯಂತ್ರಿಸುವ ಕೆ.ಜಿ.ನಾಯ್ಕರನ್ನು ಹಿಂದೆ ಹಾಕಲು ಯಶಸ್ವಿಯಾಗಿಲ್ಲ. ಈ ಒಳಗುದುಮುರಗಿ ಪರಣಾಮ ಕೆ.ಜಿ.ನಾಯ್ಕ ಮತ್ತು ಅವರ ಬಣದ ವಿರುದ್ಧ ಕೆಲಸಮಾಡುವ ಹೊಸ ಬಿ.ಜೆ.ಪಿ. ಬಣ ಸ್ಥಳಿಯ ಮಂಡಳದ ಕೆಲವು ಪ್ರಮುಖರನ್ನು ಅಪರಾಧಿ ಮಾಡಲು ಮಾಸ್ಟರ್ ಪ್ಲಾನ್ ರೂಪಿಸಿದೆ. ಇದರ ಪ್ರಕಾರ ರಾಜ್ಯ ವಿಧಾನಸಭಾ ಅಧ್ಯಕ್ಷರಿಗೆ ಅವಮಾನ ಮಾಡಿ ತೇಜೋವಧೆ ಮಾಡುವ ಯತ್ನದಲ್ಲಿ ಅವರ ಪ್ರಮುಖ ವಿರೋಧಿಗಳಿದ್ದಾರೆ ಎಂದು ಬಿಂಬಿಸುವುದಾಗಿತ್ತು. ಆದರೆ ಈ ತಂತ್ರದಲ್ಲಿ ಹರೀಶ್ ಗೌಡರನ್ನು ಅಂದರ್ ಮಾಡುವಲ್ಲಿ ಕಾಗೇರಿ ಬಣ ಯಶಸ್ವಿಯಾದಂತಾಗಿದೆ. ವಿಚಿತ್ರವೆಂದರೆ ಹರೀಶ್ ಗೌಡರ್ ಬಂಧನಕ್ಕೆ ಕಾರಣ ಎನ್ನಲಾಗಿರುವ ಫೇಸ್ ಬುಕ್ ಪೊಸ್ಟ್ ಕನಿಷ್ಟ ೫ ವರ್ಷ ಹಳೆಯದು. ಈ ಚಿತ್ರ,ಪೋಸ್ಟ್ ಕಡಿಮೆಯೆಂದರೂ ಈಗಾಗಲೇ ಸಾವಿರಾರು ಬಾರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್,ರೀಪೋಸ್ಟ್ ಆಗಿ ಶೇರ್ ಆಗಿ ಹಂಚಿಕೆಯಾದ ಹಳೆಯ ಚಿತ್ರ!
ಕು.ಸುಹಾಸ್ ಮಾಳ್ಕೋಡಗೆ ‘ಅಸಾಧಾರಣ ಪ್ರತಿಭಾ ಪ್ರಶಸ್ತಿ’
ಸಿದ್ದಾಪುರ; ತಾಲೂಕಿನ ಕೋಲಶಿರ್ಸಿಯ ಕು.ಸುಹಾಸ್ ನಾಗರಾಜ ನಾಯ್ಕ ಮಾಳ್ಕೋಡ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡುವ ೨೦೨೦-೨೧ ನೇ ಸಾಲಿನ ಅಸಾಧಾರಣ ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾನೆ. ಅ.೧೫ ರಂದು ನಡೆಯುವ ಸ್ವಾತಂತ್ರೊö್ಯÃತ್ಸವದ ಕಾರ್ಯಕ್ರಮದಲ್ಲಿ ನಗದು ಪುರಸ್ಕಾರದೊಂದಿಗೆ ಪ್ರಶಸ್ತಿ ಪತ್ರವನ್ನು ನೀಡಿ ಸನ್ಮಾನಿಸಲಾಗುತ್ತಿದೆ.
ಪಟ್ಟಣದ ಪ್ರಶಾಂತಿ ಪ್ರೌಢಶಾಲೆಯ ೮ ನೇ ತರಗತಿಯ ವಿದ್ಯಾರ್ಥಿಯಾಗಿರುವ ಕು.ಸುಹಾಸ್ ನಾಯ್ಕ ಮಾಳ್ಕೋಡ ಸೃಜನಾತ್ಮಕ ಕಲೆಗಳಾದ ಚಿತ್ರಕಲೆ, ಜೇಡಿಮಣ್ಣಿನ ಕಲೆ, ಕರಕುಶಲ ಕಲಾಕೃತಿಗಳ ರಚನೆಯಲ್ಲಿ ಬಾಲ್ಯದಲ್ಲಿಯೇ ಆಸಕ್ತಿಯನ್ನು ಬೆಳೆಸಿಕೊಂಡಿದ್ದಾನೆ.ರಾಜ್ಯಮಟ್ಟದ ಕಲಾಭೂಷಣ ಪುರಸ್ಕಾರ, ಕಲಾಶ್ರೀ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾನೆ. ೨ ನೇ ತರಗತಿಯಲ್ಲಿ ಇರುವಾಗ ಶಿಕ್ಷಣ ಇಲಾಖೆ ನಡೆಸುವ ಪ್ರತಿಭಾ ಕಾರಂಜಿ ಸ್ಪರ್ಧೆಯ ಚಿತ್ರಕಲೆಯಲ್ಲಿ ಆಯ್ಕೆಯಾಗುವ ಮೂಲಕ ತನ್ನಲ್ಲಿಯ ಕಲಾಶಕ್ತಿಯನ್ನು ಹೆಚ್ಚಿಸಿಕೊಂಡಿದ್ದಾನೆ. ನಂತರದಲ್ಲಿ ನಿರಂತರವಾಗಿ ಈವರೆಗೂ ತಾಲೂಕು ಹಾಗೂ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾನೆ. ಈತ ಭಾಗವಹಿಸಿದ್ದ ಎಲ್ಲಾ ಚಿತ್ರಕಲಾ ಸ್ಪರ್ಧೆಗಳಲ್ಲಿಯೂ ಬಹುಮಾನಗಳನ್ನು ಪಡೆದುಕೊಂಡಿರುವುದು ಇವನ ಸಾಧನೆಗೆ ಹಿಡಿದ ಕನ್ನಡಿಯಾಗಿದೆ.
ಕಳೆದ ಎರಡು ವರ್ಷಗಳ ಹಿಂದೆ ಜಿಲ್ಲಾಮಟ್ಟದಲ್ಲಿ ನಡೆದ ‘ಕಲಾಶ್ರೀ’ ಆಯ್ಕೆ ಶಿಬಿರದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಿ ರಾಜ್ಯಮಟ್ಟದ ಕಲಾಶ್ರೀ ಸ್ಪರ್ಧೆಗೆ ಆಯ್ಕೆಯಾಗಿರುವುದು ಬಹುದೊಡ್ಡ ಸಾಧನೆಯಾಗಿದೆ.ಈ ಹಿಂದೆ ಶಾಂತಿ ಮತ್ತು ಮಾನವೀಯತೆ ರಾಷ್ಟ್ರೀಯ ಅಭಿಯಾನ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಆಯ್ಕೆಯಾಗಿದ್ದ.ಅಂತರಾಷ್ಟಿçÃಯ ಚಿಂತನ ಚಿತ್ರಕಲಾ ಸ್ಪರ್ಧೆಯಲ್ಲಿ ರಾಷ್ಟçಮಟ್ಟದಲ್ಲಿ ಮೊದಲನೇ ರ‍್ಯಾಂಕ್ ಪಡೆದಿದ್ದಾನೆ. ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಪೆಢರೇಶನ ನವದೆಹಲಿ ನಡೆಸಿದ ಬೆಳಗಾಂವ ವಿಭಾಗಮಟ್ಟದ ಸ್ಪರ್ಧೆಯಲ್ಲಯೂ ಆಯ್ಕೆಯಾಗಿದ್ದಾನೆ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಏರ್ಪಡಿಸಿದ ರಾಜ್ಯಮಟ್ಟದ ಸ್ಪರ್ಧೆಯಲ್ಲಿಯೂ ಭಾಗವಹಿಸಿ ಫಲಿತಾಂಶದ ನಿರೀಕ್ಷೆಯಲ್ಲಿದ್ದಾನೆ.
ಕು.ಸುಹಾಸ್ ತನ್ನ ವಯಸ್ಸಿಗೆ ಮೀರಿದ ಪ್ರತಿಭೆಯನ್ನು ಹೊಂದಿದ್ದು ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದಾನೆ. ತಾಲೂಕಿನ ಸುತ್ತಮುತ್ತ ಯಾವುದೇ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದರೂ ಬಹುಮಾನ ಕಟ್ಟಿಟ್ಟ ಬುತ್ತಿ ಎನ್ನುವಷ್ಟರಮಟ್ಟಿಗೆ ಭರವಸೆಯನ್ನು ಮೂಡಿಸಿದ್ದಾನೆ.ಚಿತ್ರಕಲೆಯಲ್ಲಿ ವಿಶೇಷವಾದ ಆಸಕ್ತಿಯನ್ನು ಹೊಂದಿರುವ ಈತ ರಾಷ್ಟç ನಾಯಕರುಗಳ ಹಾಗೂ ಸ್ನೇಹಿತರು, ಬಂಧುಗಳ ಜನ್ಮದಿನದಂದು ಅವರ ಚಿತ್ರವನ್ನು ಬರೆದು ಶುಭಹಾರೈಸುವ ಪರಿಪಾಠ ಬೆಳೆಸಿಕೊಂಡಿದ್ದಾನೆ.
………………
ಕಲಾಭೂಷಣ ಪುರಸ್ಕಾರ; ರಾಣಿಬೆನ್ನೂರಿನ ಕಾಗದ ಸಾಂಗತ್ಯ ವೇದಿಕೆ ಆಯೋಜಿಸಿದ ರಾಜ್ಯಮಟ್ಟದ ಮಕ್ಕಳ ಚಿತ್ರಕಲಾ ಸ್ಪರ್ಧೆ-೨೦೨೦ ರಲ್ಲಿ ಭಾಗವಹಿಸಿದ ೧೮೬೮ ಮಕ್ಕಳಲ್ಲಿ ವಿಭಿನ್ನತೆಯಿಂದ ಕೂಡಿದ ಚಿತ್ರವನ್ನು ರಚಿಸಿದ ಕಾರಣಕ್ಕೆ ‘ಕಲಾಭೂಷಣ ಪುರಸ್ಕಾರಕ್ಕೆ’ ಕು.ಸುಹಾಸ್ ನಾಯ್ಕನನ್ನು ಆಯ್ಕೆ ಮಾಡಲಾಗಿದೆ.ತನ್ನ ೯ನೇ ವಯಸ್ಸಿನಲ್ಲಿಯೇ ಚಿತ್ರಕಲಾ ಪ್ರದರ್ಶನದಲ್ಲಿ ಕಲಾಕೃತಿಗಳ ಪ್ರದರ್ಶನ ಮಾಡಿರುತ್ತಾನೆ.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
