

೧೮೫೭ ರ ಸಿಪಾಯಿ ದಂಗೆ ಮೊದಲು ದೇಶದ ಹಲವು ಭಾಗಗಳಲ್ಲಿ ಬ್ರಟೀಷರ ವಿರುದ್ಧ ಬಂಡಾಯವೆದ್ದಿದ್ದ ದೇಶಪ್ರೇಮಿಗಳಲ್ಲಿ ಟಿಪ್ಪುಸುಲ್ತಾನ್,ರಾಣಿ ಕಿತ್ತೂರ್ ಚೆನ್ನಮ್ಮ ಮತ್ತು ಗಲಗಲಿಯ ಬೇಡರು ಸೇರುತ್ತಾರೆ. ಇದು ಸ್ವಾತಂತ್ರ್ಯ ಹೋರಾಟದಲ್ಲಿ ಕನ್ನಡಿಗರ ಪ್ರಾಮುಖ್ಯತೆಗೆ ಸಾಕ್ಷಿ ಎಂದು ಪತ್ರಕರ್ತ ಕನ್ನೇಶ್ವರ ನಾಯ್ಕ ಕೋಲಶಿರ್ಸಿ ಹೇಳಿದರು.
ಅವರು ಸಾಗರ ತಾಲೂಕಿನ ಸೈದೂರು ಶಾಂತವೇರಿ ಗೋಪಾಲಗೌಡ ಪ್ರೌಢ ಶಾಲೆಯಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯ ಅಮೃತಮಹೋತ್ಸವ ವಿಶೇಶ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಲ್ಲಾ ಕಾಲಗಳಲ್ಲೂ ಸತ್ಯ ಹೇಳುವವರು, ಸುಳ್ಳು ಪ್ರಚಾರ ಮಾಡುವವರು ಇರುತ್ತಾರೆ. ಇಂದಿನ ಆಡಳಿತದಲ್ಲಿ ರೈತರು ಹೊಲಮನೆ ರಕ್ಷಣೆಗೆ ಇಟ್ಟುಕೊಳ್ಳುವ ಪರವಾನಗಿ ಸಹಿತ ಬಂದೂಕಿನ ವಾರ್ಷಿಕ ತೆರಿಗೆಯನ್ನು ಹೆಚ್ಚಿಸಲಾಗಿದೆ. ಲೈಸನ್ಸ್ ಹೊಂದಿದ ರೈತ ಬಂದೂಕಿನ ಪರವಾನಗಿಯನ್ನು ಪ್ರತಿವರ್ಷ ನವೀಕರಿಸಬೇಕು. ರೈತನ ಭೂಮಿ ಹಕ್ಕು,ಕೃಷಿ ಉತ್ಫನ್ನ ಮಾರುಕಟ್ಟೆ ನಿಯಮಗಳಲ್ಲಿ ಬದಲಾವಣೆ ತಂದು ರೈತರಿಗೆ ದ್ರೋಹ ಬಗೆದು ಉದ್ಯಮಿಗಳಿಗೆ ಸಹಕರಿಸಲಾಗುತ್ತದೆ. ಹಿಂದೆ ಕೂಡಾ ಬ್ರಟೀಷರ ತೆರಿಗೆ ನೀತಿ, ರೈತವಿರೋಧ, ಶಸ್ತ್ರಾಸ್ತ್ರ ಕಾನೂನುಗಳಂಥ ಜನವಿರೋಧಿ ಕಾಯಿದೆ ಕಾನೂನುಗಳ ವಿರುದ್ಧವೇ ಸ್ವಾತಂತ್ರ್ಯ ಹೋರಾಟ ಮೊದಲ್ಗೊಂಡು ಬಲವಾದದ್ದು ಎಂದು ಪ್ರತಿಪಾದಿಸಿದರು.
ಗಾಂಧಿ ಭಾರತಕ್ಕೆ ರಾಷ್ಟ್ರಪಿತ ಆದರೆ ಮಹಾತ್ಮಾಗಾಂಧಿ ಮತ್ತು ಡಾ. ಅಂಬೇಡ್ಕರ್ ಅಂತರರಾಷ್ಟ್ರೀ ಯ ನಾಯಕರು ಗಾಂಧಿಜಿ ಜಗತ್ತಿಗೆ ಶಾಂತಿ. ಅಹಿಂಸೆ,ಸತ್ಯಾಗ್ರಹಗಳ ಕೊಡುಗೆ ನೀಡಿದ ವಿಶ್ವನಾಯಕ. ಪ್ರಪಂಚದಲ್ಲಿ ಸತ್ಯ, ಅಹಿಂಸೆ, ಸತ್ಯಾಗ್ರಹಗಳಿಂದ ಸ್ವತಂತ್ರವಾದ ದೇಶ ಭಾರತವೊಂದೇ ಎಂಬುದು ನಮ್ಮ ಹೆಗ್ಗಳಿಕೆ ಎಂದರು.

ಸುರೇಶ್ ಕೆ.ಎಚ್.ಸ್ವಾಗತಿಸಿದರು. ಕನ್ನಪ್ಪ ಮಾಸ್ತರ್ ಮಾತನಾಡಿದರು,ಶಿವಾನಂದ ಎಚ್.ಕೆ.ನಿರೂಪಿಸಿದರು. ಮುಖ್ಯೋಪಾಧ್ಯಾಯ ಎಸ್.ಕೆ.ನಾಯ್ಕ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮಕ್ಕೆ ಪ್ರೇಮಾ ನಾಯ್ಕ ವಂದಿಸಿದರು.
