


ತ್ಯಾರ್ಸಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಮಂಜುನಾಥ ಮಾರುತಿ ನಾಯ್ಕ, ಸುಮಂತ್ ಹೆಗಡೆ, ಸೌಜನ್ಯ ಗೌಡರ್, ಅಂಕಿತಾ ಶಿವಾನಂದ ನಾಯ್ಕ, ದೇವರಾಜ ನಾಯ್ಕ, ಐಶ್ವರ್ಯ ಗೌಡರ್, ಆಶಾ ಗೊಂಡ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ರಚನಾ ಗೌಡರ್, ಹೇಮಾವತಿ ಗೊಂಡ, ಗೀತಾ ಉಮೇಶ ಗೊಂಡ, ಲೀಲಾ ಸೀತಾರಾಮ ನಾಯ್ಕ ಇವರನ್ನು ಸಮೃದ್ಧಿ ಯುವ ಬಳಗದ ಸದಸ್ಯರು ಗ್ರಾಮಸ್ಥರ ಸಮ್ಮುಖದಲ್ಲಿ ಸನ್ಮಾನಿಸಿದರು.
ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಮಾರುತಿ ಎಸ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಊರಿನ ಹಿರಿಯರಾದ ಮಾರುತಿ ನಾಯ್ಕ, ಶಾಲೆಯ ಶಿಕ್ಷಕರಾದ ಇಂದಿರಾ ನಾಯ್ಕ, ಉಷಾ ಕೊಡಿಯಾ, ಸಮೃದ್ಧಿ ಯುವ ಬಳಗದ ಅಧ್ಯಕ್ಷ ಮಂಜುನಾಥ ಗೌಡರ್, ಉಪಾಧ್ಯಕ್ಷ ಬಾಲಚಂದ್ರ ನಾಯ್ಕ, ಅಶೋಕ ಆರ್ ನಾಯ್ಕ ಉಪಸ್ಥಿತರಿದ್ದರು. ಬಳಗದ ಸದಸ್ಯ ಹಾಗೂ ರೈಲ್ವೆ ಉದ್ಯೋಗಿ ನವೀನ್ ಆರ್ ನಾಯ್ಕ ನಿರೂಪಿಸಿದರು.

ಮಾಜಿ ಯೋಧರಿಗೆ ಸನ್ಮಾನ-
ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಿದ್ಧಾಪುರ ತಾಲೂಕಿನ ಮಾ.ಹಿ.ಪ್ರಾ.ಶಾಲೆ ಬಾಲಿಕೊಪ್ಪಮತ್ತು ಹಿ.ಪ್ರಾ.ಶಾಲೆ ಅವರಗುಪ್ಪಾಗಳಲ್ಲಿ ಮಾಜಿ ಯೋಧರನ್ನು ಸನ್ಮಾನಿಸಿ ಗೌರವಿಸಲಾಯಿತು.ಬಾಲಿಕೊಪ್ಪ ಎಮ್.ಎಚ್.ಪಿ.ಎಸ್. ನಲ್ಲಿ ಮಾಜಿಯೋಧ ಕುಮಾರಗೌಡರ್ ಮತ್ತು ಕರಾಟೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಪಡೆದ ಆನಂದ ನಾಯ್ಕರನ್ನು ಸನ್ಮಾನಿಸಿ ಗೌರವಿಸಲಾಯಿತು.


ಅವರಗುಪ್ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತ ಯೋಧರಾದ ದಿನೇಶ್ ಕುಮಾರ್ ತರಳಿ ಮತ್ತು ಕೃಷ್ಣ ನಾಯ್ಕ ರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕು.ಸುಹಾಸ್ ಮಾಳ್ಕೋಡಗೆ ಅಸಾಧಾರಣ ಪ್ರತಿಭಾ ಪುರಸ್ಕಾರ
ಸಿದ್ದಾಪುರ; ಪಟ್ಟಣದ ಐತಿಹಾಸಿಕ ನೆಹರು ಮೈದಾನದಲ್ಲಿ ನಡೆದ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ತಾಲೂಕಿನ ಕೋಲಶಿರ್ಸಿಯ ಕು.ಸುಹಾಸ್ ನಾಗರಾಜ ನಾಯ್ಕ ಮಾಳ್ಕೋಡ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡುವ ಜಿಲ್ಲಾ ಮಟ್ಟದ ಅಸಾಧಾರಣ ಪ್ರತಿಭಾ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಲಾಯಿತು. ರೂ.೧೦ ಸಾವಿರ ನಗದು ಪುರಸ್ಕಾರದೊಂದಿಗೆ ಪ್ರಶಸ್ತಿ ಪತ್ರವನ್ನು ನೀಡಿ ಸನ್ಮಾನಿಸಲಾಯಿತು.
೨೦೨೦-೨೧ ನೇ ಸಾಲಿನ ಪುರಸ್ಕಾರಕ್ಕೆ ಆಯ್ಕೆಯಾದ ಕು.ಸುಹಾಸ್ ನಾಯ್ಕಗೆ ಜಿಲ್ಲಾಡಳಿತ ಪರವಾಗಿ ತಹಶೀಲ್ದಾರ ಸಂತೋಷ ಕೆ.ಭಂಡಾರಿ ಪ್ರಶಸ್ತಿ ಪ್ರದಾನ ಮಾಡಿದರು. ತಾಲೂಕ ಪಂಚಾಯತ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ ವಿ.ರಾವ್, ಪೊಲೀಸ್ ನಿರೀಕ್ಷರಾದ ಕುಮಾರ.ಲೆ, ಪಟ್ಟಣ ಪಂಚಾಯತ ಅಧ್ಯಕ್ಷೆ ಚಂದ್ರಕಲಾ ಸುರೇಶ ನಾಯ್ಕ, ಕ್ಷೇತ್ರ ಶೀಕ್ಷಣಾಧಿಕಾರಿ ಸದಾನಂದ ಸ್ವಾಮಿ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಓ ಪೂರ್ಣಿಮ ಆರ್.ದೊಡ್ಮನಿ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಕುಮಾರ ಡಿ.ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.




ಸಿದ್ದಾಪುರ; ತಾಲೂಕಿನ ಕೋಲಶಿರ್ಸಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೭೬ ನೇ ಸ್ವಾತಂತ್ರ್ಯೋ ತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ರಾಜ್ಯ ವಕೀಲರ ಸಂಘದ ಮಾಜಿ ಅಧ್ಯಕ್ಷ ನಾಡಿನ ಖ್ಯಾತ ವಕೀಲರಾದ ಜಯಕುಮಾರ ಪಾಟೀಲ್ ಧ್ವಜಾರೋಹಣ ಕಾರ್ಯಕ್ರಮವನ್ನು ಶಾಲೆಯ ಆವಾರದಲ್ಲಿ ನೆರವೇರಿಸಿದರು.
ನಂತರ ವಿದ್ಯಾರ್ಥಿಗಳು ಊರಿನಲ್ಲಿ ಪ್ರಭಾತಫೇರಿಯನ್ನು ನಡೆಸಿಕೊಟ್ಟರು. ಸಭಾ ಕಾರ್ಯಕ್ರಮದಲ್ಲಿ ಊರಿನ ವೀರ ಯೋಧರಾದ ಮಾಜಿ ಸೈನಿಕರಾದ ನಿರಂಜನ ನಾಯ್ಕ ಮತ್ತು ಅಣ್ಣಪ್ಪ ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಲೆಯ ಅಭಿವೃದ್ಧಿಗೆ ಕೈಜೋಡಿಸಿ ಸಹಕಾರ ನೀಡಿದ ಧಾನಿಗಳಾದ ಗ್ರಾ.ಪಂ ಉಪಾಧ್ಯಕ್ಷ ಕೆ.ಆರ್.ವಿನಾಯಕ, ಸ್ಥಳೀಯರಾದ ಚಂದ್ರಹಾಸ ಎಂ.ನಾಯ್ಕ, ವಾಸು ನಾಯ್ಕ, ಆನಂದ ಎಚ್.ನಾಯ್ಕ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಕುಮಾರ ನಾಯ್ಕ, ಉಪಾಧ್ಯಕ್ಷೆ ದಿವ್ಯಾ ನಾಯ್ಕ, ಗ್ರಾ.ಪಂ ಸದಸ್ಯ ಜಿ.ಬಿ.ನಾಯ್ಕ, ಮುಖ್ಯ ಶಿಕ್ಷಕಿ ಸುಮನಾ ಶೇಟ್ ವೇದಿಕೆಯಲ್ಲಿದ್ದರು.ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಿತು. ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು , ಶಿಕ್ಷಕರು ಪಾಲ್ಗೊಂಡರು. ಮುಖ್ಯ ಶಿಕ್ಷಕಿ ಸುಮನಾ ಶೇಟ್ ಸ್ವಾಗತಿಸಿದರು.ಶಿಕ್ಷಕಿ ಸವಿತಾ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.ಭಾಗ್ಯಶ್ರೀ ಹೆಗಡೆ ವಂದಿಸಿದರು.
