

ಅರ್ಧಕ್ಕರ್ಧ ನಾಟಿ ಮಾಡದ ಭತ್ತದ ಪ್ರದೇಶ, ಮದ್ದು ಕಾಣದ ಅಡಿಕೆ ತೋಟ, ಮಳೆಯಿಂದ ಆನೆ ಹೊಕ್ಕಂತಾದ ಬಾಳೆ ಬೆಳೆಯುವ ಪ್ರದೇಶ ಈ ವಿಚಿತ್ರ ಸನ್ನಿವೇಶಕ್ಕೆ ಮೂಖಾಮುಖಿಯಾದ ರೈತ ಸರ್ಕಾರದ ಬೆಳೆವಿಮೆ,ಹವಾಮಾನ ಆಧಾರಿತ ಬೆಳೆವಿಮೆಯ ಪರಿಹಾರದ ನಿರೀಕ್ಷೆಯಲ್ಲಿದ್ದಾನೆ.
ತುಸು ಕಡಿಮೆಯಾದ ಕರಾವಳಿ,ಮಲೆನಾಡಿನ ಮಳೆ ಸ್ಥಳಿಯರಿಗೆ ಹಿತಾನುಭವ ನೀಡತೊಡಗಿದೆ. ಈ ವರ್ಷಾವಧಿಗೆ ಮೊದಲೇ ಪ್ರಾರಂಭವಾಗಿದ್ದ ಮುಂಗಾರು ಮಳೆ ಕೃಷಿಕರಿಗೆ ಗೊಂದಲ ಹುಟ್ಟಿಸಿತ್ತು. ಬಿತ್ತನೆಗೆ ಅನುಕೂಲವಾಗದೆ ನಂತರ ಮಳೆಯ ಆರ್ಭಟದಲ್ಲಿ ಕೃಷಿಕ್ಷೇತ್ರ ಹಸನು ಮಾಡಲಾರದೆ ಕಂಗೆಟ್ಟಿದ್ದ ರೈತನಿಗೆ ಜುಲೈ,ಆಗಸ್ಟ್ ನ ಮಳೆ ಸಂಕಷ್ಟ ತಂದಿಟ್ಟಿತ್ತು.ಜುಲೈ ತಿಂಗಳಲ್ಲಿ ಭತ್ತದ ಬಿತ್ತನೆ, ನಾಟಿ ಕೆಲಸ ಮಾಡುತಿದ್ದ ರೈತರಿಗೆ ಈ ವರ್ಷದ ಮಳೆ ಈ ಕೆಲಸಗಳಿಗೆ ಅನುಕೂಲ ಮಾಡಿಕೊಡಲಿಲ್ಲ.
ಇದೇ ಅವಧಿಯಲ್ಲಿ ಅಡಿಕೆ ಗೊನೆಗಳಿಗೆ ಕೊಳೆ ಮದ್ದು ಸಿಂಪಡಿಸುತಿದ್ದ ಅಡಿಕೆ ಬೆಳೆಗಾರರಿಗೆ ಅವಶ್ಯ ಸಮಯದಲ್ಲಿ ಅಡಿಕೆಗೆ ಮದ್ದು ಸಿಂಪಡನೆ ಮಾಡಲು ಅನುಕೂಲವಾಗಲಿಲ್ಲ. ಆಗಸ್ಟ್ ತಿಂಗಳ ಮಧ್ಯಾಂತರದ ನಂತರ ನಿಂತು ನೋಡಿದರೆ ಈ ವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಡಿಕೆಗಿಂತ ೨೫ ಶೇ ಕಡಾ ಹೆಚ್ಚುವರಿ ಮಳೆ ಈಗಾಗಲೇ ಸುರಿದಿದೆ. ಪ್ರತಿವರ್ಷ ಈ ಅವಧಿಯಲ್ಲಿ ನೂರಕ್ಕೆ ಪ್ರತಿಶತ ೯೦ ರಷ್ಟು ಬಿತ್ತನೆಯಾಗುತಿದ್ದ ಭತ್ತದ ಬೆಳೆ ಪ್ರದೇಶದಲ್ಲಿ ಈ ವರ್ಷ ಅರ್ಧಕ್ಕರ್ಧ ಬಿತ್ತನೆ,ನಾಟಿ ಕೆಲಸ ಮುಗಿದಿಲ್ಲ.
ಆಗಷ್ಟ್ ತಿಂಗಳಲ್ಲಿ ನೂರಕ್ಕೆ ನೂರರಷ್ಟು ಕೊಳೆ ಮದ್ದು ಸಿಂಪಡಿಸುತಿದ್ದ ಅಡಿಕೆ ಬೆಳೆಗಾರ ಈ ವರ್ಷ ಸೂಕ್ತ ಸಮಯದಲ್ಲಿ ಮದ್ದು ಸಿಂಪಡಣೆ ಮಾಡದೆ ಅಡಿಕೆಗೊನೆಗಳು ಕೊಳೆಗೆ ತುತ್ತಾಗಿವೆ.

ಅವಶ್ಯ,ಅಗತ್ಯ ಸಮಯದಲ್ಲಿ ಕೃಷಿ ಚಟುವಟಿಕೆಗಳಿಗೆ ಅಡ್ಡಿ ಮಾಡಿದ ಮಳೆ ಈಗ ತುಸು ನಿಂತಿದೆ. ಆದರೆ ವಿಳಂಬವಾದ ಕೃಷಿ ಚಟುವಟಿಕೆ ಈ ವರ್ಷಕ್ಕೆ ಹಾನಿಯ ಮುನ್ಸೂಚನೆ ನೀಡಿದೆ.
ಬಿತ್ತನೆಯಾಗದ ಭತ್ತ ದ ಗದ್ದೆಗಳು, ಮದ್ದು ಹೊಡೆಯದ ಅಡಿಕೆ ತೋಟಗಳು ಈ ವರ್ಷ ರೈತನ ಕೈ ಹಿಡಿಯುವ ಸಾಧ್ಯತೆ ಕ್ಷೀಣಿಸಿದೆ.ಹಿಂಗಾರು ಮಳೆಯ ಈ ಅವಧಿಯಲ್ಲಿ ಪ್ರತಿವರ್ಷ ಖುಷಿಯಿಂದ ಇರುತಿದ್ದ ರೈತ ಈ ವರ್ಷ ಮುಂದೇನು ಎನ್ನುವ ಆತಂಕದಲ್ಲಿದ್ದಾನೆ. ವಾರ್ಷಿಕ ಕೃಷಿ ಚಟುವಟಿಕೆಗಳ ಸರಾಸರಿ ಪ್ರಗತಿ ಲೆಕ್ಕದಲ್ಲಿ ಕೂಡಾ ಸರ್ಕಾರದ ವರದಿ ನಿರಾಶಾದಾಯಕವಾಗಿದೆ.
ಅರ್ಧಕ್ಕರ್ಧ ನಾಟಿ ಮಾಡದ ಭತ್ತದ ಪ್ರದೇಶ, ಮದ್ದು ಕಾಣದ ಅಡಿಕೆ ತೋಟ, ಮಳೆಯಿಂದ ಆನೆ ಹೊಕ್ಕಂತಾದ ಬಾಳೆ ಬೆಳೆಯುವ ಪ್ರದೇಶ ಈ ವಿಚಿತ್ರ ಸನ್ನಿವೇಶಕ್ಕೆ ಮೂಖಾಮುಖಿಯಾದ ರೈತ ಸರ್ಕಾರದ ಬೆಳೆವಿಮೆ,ಹವಾಮಾನ ಆಧಾರಿತ ಬೆಳೆವಿಮೆಯ ಪರಿಹಾರದ ನಿರೀಕ್ಷೆಯಲ್ಲಿದ್ದಾನೆ. ಆದರೆ ಈ ವಿಮಾ ಪರಿಹಾರಗಳು ಸಿಗುವುದು ಮುಂದಿನ ವರ್ಷಕ್ಕೆ ಈ ಅನಿವಾರ್ಯತೆಯಲ್ಲಿ ಸರ್ಕಾರ ಬೆಳೆನಷ್ಟದ ಸರ್ಕಾರದ ವಿಶೇಶ ಪ್ಯಾಕೇಜ್ ಗೆ ಆಗ್ರಹಿಸಿದ್ದಾನೆ.ಸರ್ಕಾರ ರೈತನ ಸಂಕಷ್ಟ ಅರಿತುಪ್ಯಾಕೇಜ್ ನ ಪರಿಹಾರದ ಭರವಸೆ ನೀಡುವುದೇ ಈಗಿರುವ ತಾತ್ಕಾಲಿಕ ಪರಿಹಾರವಾಗಿದೆ.

