ಶಿರಳಗಿ ಗ್ರಾಮಪಂಚಾಯತದಲ್ಲಿ ಅಮೃತಮಹೋತ್ಸವ
ಸಿದ್ದಾಪುರ
ಭಾರತದ ಸ್ವಾತಂತ್ರö್ಯದ ಅಮೃತಮಹೋತ್ಸವದ ನಿಮಿತ್ತ ತಾಲೂಕಿನ ಶಿರಳಗಿಯ ಸರಕಾರಿ ಪ್ರೌಢಶಾಲೆಯಲ್ಲಿ ಶಿರಳಗಿ ಗ್ರಾಮಪಂಚಾಯತ,ಸೇವಾ ಸಹಕಾರಿ ಸಂಘ, ಹಾಲು ಉತ್ಪಾದಕರ ಸಂಘ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಸಾಧಕರಿಗೆ ಸನ್ಮಾನ, ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪುರಸ್ಕಾರ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಗ್ರಾಮಪಂಚಾಯತ ಅಧ್ಯಕ್ಷೆ ಲತಾ ಆರ್.ನಾಯ್ಕ ಅಧ್ಯಕ್ಷತೆವಹಿಸಿದ್ದರು. ನಿವೃತ್ತ ಸೇನಾಧಿಕಾರಿ ವಿನಾಯಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ರಾಮಚಂದ್ರ ಕೆ.ನಾಯ್ಕ, ನಾರಾಯಣ ಕೆ.ನಾಯ್ಕ, ರವೀಂದ್ರ ಆರ್.ಹೆಗಡೆ, ಗಂಗಾಧರ ಕೊಳಗಿ,ಈರ ಕೆ.ನಾಯ್ಕ, ಕೆರೆಸ್ವಾಮಿ ಎಂ.ಗೌಡರ್, ಸೋಮಶೇಖರ ಎಸ್.ಗೌಡರ್, ರಘುನಂದನ ಎಸ್.ಭಟ್ ಇವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ.ಯಲ್ಲಿ ಪ್ರೌಢಶಾಲೆಗೆ ಮೊದಲ ೩ ಸ್ಥಾನಗಳನ್ನು ಪಡೆದ ಜೀವನ ನಾಯ್ಕ, ಮಾನಸ ನಾಯ್ಕ, ಮಾನ್ಯ ಎನ್.ಚೆನ್ನಯ್ಯ ಇವರನ್ನುಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.
ಗ್ರಾಮಪಂಚಾಯತ ಅಧ್ಯಕ್ಷೆ ಲತಾ ಆರ್.ನಾಯ್ಕ, ಉಪಾಧ್ಯಕ್ಷ ಶ್ರೀಕಾಂತ ಎಲ್. ಭಟ್ಟ, ಮುಖ್ಯ ಅತಿಥಿ ಗಂಗಾಧರ ಕೊಳಗಿ ಮಾತನಾಡಿದರು. ಸನ್ಮಾನಿತರ ಪರವಾಗಿ ಈರ ಕೆ.ನಾಯ್ಕ ಮಾತನಾಡಿದರು. ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪರಶುರಾಮಕೆ.ನಾಯ್ಕ,ಎಸ್.ಡಿ.ಎಂ.ಸಿ.ಅಧ್ಯಕ್ಷ ಆರ್.ಜಿ.ನಾಯ್ಕ ಕೋಡ್ಸರ,ತಾಲೂಕು ಸೇವಾದಳದ ಅಧ್ಯಕ್ಷ ನಾಗರಾಜ ಭಟ್ಟ ಕೆಕ್ಕಾರ,ಪ್ರೌಢಶಾಲಾ ಮುಖ್ಯ ಶಿಕ್ಷಕಿ ಪ್ರೇಮಲತಾ ಹಾಗೂ ಗ್ರಾಪಂ ಸದಸ್ಯರು, ಊರ ನಾಗರಿಕರು, ಶಿಕ್ಷಕರು ಉಪಸ್ಥಿತರಿದ್ದರು.
ಪಿ.ಡಿ.ಓ.ಗೌರೀಶ ಹೆಗಡೆ ಸ್ವಾಗತಿಸಿದರು.ಪ್ರೌಢಶಾಲಾ ಶಿಕ್ಷಕಿ ಉಷಾ ನಿರೂಪಿಸಿದರು. ಗೋವಿಂದಪ್ಪ ವಂದಿಸಿದರು.
ಬಾಳೇಸರದಲ್ಲಿ ಅಮೃತಮಹೋತ್ಸವ
ಸಿದ್ದಾಪುರ
ತಾಲೂಕಿನ ಬಾಳೇಸರದಲ್ಲಿ ಸ್ವಾತಂತ್ರೊö್ಯÃತ್ಸವದ ಅಮೃತಮಹೋತ್ಸವವನ್ನು ಪ್ರಾಥಮಿಕ ಶಾಲೆಯಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ಊರಿನ ಹಿರಿಯ, ಶಾಲಾ ಸಂಸ್ಥಾಪಕರಲ್ಲಿ ಓರ್ವರಾದ ಶಂಕರ ಭಟ್ಟ ಮಸಗುತ್ತಿ ದಂಪತಿಗಳು ಅಮೃತಮಹೋತ್ಸವದ ಸವಿ ನೆನಪಿಗೆ ಶಾಲೆಗೆ ಎರಡು ಸ್ಮಾರ್ಟ ಟಿ.ವಿ.ಗಳನ್ನು ದೇಣಿಗೆಯಾಗಿ ನೀಡಿ ಕಾರ್ಯಕ್ರಮ ಉದ್ಘಾಟಿಸಿದರು. ಶಂಕರ ಭಟ್ಟ ದಂಪತಿಗಳನ್ನು ಹಾಗೂ ಇನ್ನೊಂದು ಟಿ.ವಿ. ನೀಡಿದ ಸೀತಾರಾಮ ಎಮ್.ಭಟ್ಟ ತಂಗರ‍್ಮನೆಯವರನ್ನು ಸನ್ಮಾನಿಸಲಾಯಿತು.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಭಾಸ್ಕರ ಹೆಗಡೆ ತಂಗರ‍್ಮನೆ ಮಾತನಾಡಿದರು.ಸಿ.ಆರ್.ಪಿ.ಗಣೇಶ ಕೊಡಿಯಾ, ಗ್ರಾಪಂ ಸದಸ್ಯರಾದ ಶ್ರೀಲಕ್ಷಿö್ಮÃ ಹೆಗಡೆ, ಶ್ಯಾಮಲಾ ಹಸ್ಲರ್ ಮಾತನಾಡಿದರು. ಮುಖ್ಯಾಧ್ಯಾಪಕ ರಾಜು ನಾಯ್ಕ ಸ್ವಾಗತಿಸಿದರು. ಶಿಕ್ಷಕರಾದ ಚೇತನಾ ಹೆಗಡೆ, ಭಾರತಿ ಹೆಗಡೆ, ಕುಮಾರ ಎಂ.ನಿರ್ವಹಿಸಿದರು. (kpc)