ಯಲ್ಲಾಪುರದಲ್ಲಿ ಹೊಸ ಏಡಿ ಪತ್ತೆ, ಇದು ದೇಶದ 75ನೇ ಪ್ರಭೇದ
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ‘ದ್ವಿವರ್ಣ’ ಎಂಬ ಹೊಸ ಜಾತಿಯ ಏಡಿ ಪ್ರಭೇದ ಪತ್ತೆಯಾಗಿದ್ದು, ಕಾಕತಾಳೀಯವೆಂಬಂತೆ, ದೇಶವು 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದ ದಿನವಾದ ಆಗಸ್ಟ್ 15ರಂದು ಈ ದ್ವಿವರ್ಣಕ್ಕೆ…
ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ‘ದ್ವಿವರ್ಣ’ ಎಂಬ ಹೊಸ ಜಾತಿಯ ಏಡಿ ಪ್ರಭೇದ ಪತ್ತೆಯಾಗಿದ್ದು, ಕಾಕತಾಳೀಯವೆಂಬಂತೆ, ದೇಶವು 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದ ದಿನವಾದ ಆಗಸ್ಟ್ 15ರಂದು ಈ ದ್ವಿವರ್ಣಕ್ಕೆ ವೈಜ್ಞಾನಿಕವಾಗಿ ದೇಶದ 75ನೇ ಏಡಿ ಪ್ರಬೇಧ ಎಂಬ ಮನ್ನಣೆ ಸಿಕ್ಕಿದೆ.
ಯಲ್ಲಾಪುರ ಸಮೀಪದ ಪುಟ್ಟ ಹಳ್ಳಿಯ ವನ್ಯಜೀವಿ ಉತ್ಸಾಹಿ ಹಾಗೂ ಛಾಯಾಗ್ರಾಹಕ ಗೋಪಾಲ ಕೃಷ್ಣ ಹೆಗಡೆ ಹಾಗೂ ಕದ್ರಾ ಮೂಲದ ಫಾರೆಸ್ಟ್ ಗಾರ್ಡ್ ಪರಶುರಾಮ ಭಜಂತ್ರಿ ಅವರು ಭರೆಯ ಅರಣ್ಯದಲ್ಲಿ ಈ ವಿಶಿಷ್ಟ, ಆಕರ್ಷಕ ಬಣ್ಣಗಳ ಸಿಹಿನೀರಿನ ಏಡಿಯನ್ನು ಪತ್ತೆ ಹಚ್ಚಿದ್ದಾರೆ.
https://imasdk.googleapis.com/js/core/bridge3.525.0_en.html#goog_581530538
ಆವಿಷ್ಕಾರವಾದ ಒಂದು ವರ್ಷದ ನಂತರ, ಬಿಳಿ ತಲೆ ಮತ್ತು ನೇರಳೆ ದೇಹವನ್ನು ಹೊಂದಿರುವ ಡ್ಯುಯಲ್-ಟೋನ್ ಏಡಿಗೆ ಘಟಿಯಾನ ದ್ವಿವರ್ಣ ಎಂದು ಹೆಸರಿಸಲಾಗಿದೆ.
ಸ್ಥಳೀಯ ತಜ್ಞರ ಪ್ರಕಾರ, ಏಡಿಯು ಪಶ್ಚಿಮ ಘಟ್ಟಗಳ ಕಲ್ಲಿನ ಹೊರಪದರದ ಜಲಮೂಲಗಳ ನಡುವೆ ವಾಸಿಸುತ್ತದೆ. “ಇದು ವಿಶಿಷ್ಟವಾದ ಏಡಿಗಳಲ್ಲಿ ಒಂದಾಗಿದೆ” ಎಂದು ಹೆಗ್ಡೆ ಮಾಧ್ಯಮಗಳಿ ಗೆ ತಿಳಿಸಿದ್ದಾರೆ.
ಈ ಅಪರೂಪದ ಏಡಿಯನ್ನು ಪತ್ತೆಹಚ್ಚಿದ್ದಕ್ಕಾಗಿ ಭಾರತೀಯ ಭೌಗೋಳಿಕ ಸಮೀಕ್ಷೆಯಿಂದ ಹೆಗಡೆ ಮತ್ತು ಭಜಂತ್ರಿ ಅವರಿಗೆ ‘ನಾಗರಿಕ ವಿಜ್ಞಾನಿಗಳು’ ಎಂಬ ಬಿರುದು ಪ್ರದಾನ ಮಾಡಲಾಗಿದೆ.
ಸುಮಾರು 3 ಇಂಚು ಉದ್ದ ಮತ್ತು 2 ಇಂಚು ಅಗಲವಿರುವ ಈ ದ್ವಿವರ್ಣ ಏಡಿ ಪಾಚಿ ಮತ್ತು ಸಣ್ಣಪುಟ್ಟ ಹುಳುಗಳನ್ನು ಸೇವಿಸುತ್ತದೆ, ಜೂನ್ 30, 2021 ರಂದು ನಾವು ಮೊದಲ ಬಾರಿಗೆ ಏಡಿಯನ್ನು ನೋಡಿದ್ದೇವೆ ಎಂದು ಹೆಗ್ಡೆ ಮತ್ತು ಭಜಂತ್ರಿ ಹೇಳಿದ್ದಾರೆ. (kpc)