ಜಾರಿ ಬಿದ್ದರೂ ಯಾಕೀ ನಗು, ಚಾಚು ತಪ್ಪದೇ ದಿನವೂ ಸಿಗು’: ಮೋಡಿ ಮಾಡಿದ ಕಂಬ್ಳಿಹುಳ ಸಿನಿಮಾ ಹಾಡು
ನವಿರಾದ ಪ್ರೇಮಕಥೆಯುಳ್ಳ ಕಂಬ್ಳಿಹುಳ ಸಿನಿಮಾದ ಮೊದಲ ವಿಡಿಯೊ ಹಾಡು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ.
ಬೆಂಗಳೂರು: ನವಿರಾದ ಪ್ರೇಮಕಥೆಯುಳ್ಳ ಕಂಬ್ಳಿಹುಳ ಸಿನಿಮಾದ ಮೊದಲ ವಿಡಿಯೊ ಹಾಡು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ.
ಜಾರಿ ಬಿದ್ದರೂ ಯಾಕೀ ನಗು, ಚಾಚು ತಪ್ಪದೇ ದಿನವೂ ಸಿಗು…ಎಂಬ ಹಾಡಿನಲ್ಲಿ ನಟಿ ಅಶ್ವಿತಾ ಆರ್ ಹೆಗಡೆ ಮತ್ತು ನಟ ಅಂಜನ್ ನಾಗೇಂದ್ರ ತುಂಟ ಪ್ರೇಮಿಗಳಾಗಿ ಕಾಣಿಸಿಕೊಂಡಿದ್ದಾರೆ.
ಒಂದು ದಿನದೊಳಗೆ ೨೭ ಸಾವಿರಕ್ಕೂ ಹೆಚ್ಚು ಮಂದಿ ಈ ಹಾಡನ್ನು ವೀಕ್ಷಿಸಿದ್ದು, ಉತ್ತಮ ಪ್ರತಿಕ್ರಿಯೆ ದೊರಕಿದೆ. ಇನ್ನು ಹಾಡಿನ ಮಧ್ಯೆ ಬರುವ ಸಂಭಾಷಣೆಗಳು ಹಾಗೂ ಕೋರಸ್ ಹಾಡನ್ನು ಮತ್ತಷ್ಟು ಸುಂದರಗೊಳಿಸಿದೆ.
ಮಲಯಾಳಿ ಕುಟ್ಟಿ ಪಾತ್ರದಲ್ಲಿ ನಟಿಸಿರುವ ಅಶ್ವಿತಾ ಆರ್ ಹೆಗಡೆ ಹಾಗೂ ಅಂಜನ್ ನಾಗೇಂದ್ರ ರಂಗಭೂಮಿ ಕಲಾವಿದರಾಗಿದ್ದು, ಪಾತ್ರಕ್ಕೆ ಜೀವ ತುಂಬಿದ್ದಾರೆ. ಇನ್ನು ಈ ಹಾಡಿಗೆ ಗಾಯಕ ವಿಜಯ್ ಪ್ರಕಾಶ್ ಹಾಗೂ ಸಂಗೀತ ರವೀಂದ್ರನಾಥ್ ಧ್ವನಿಯಾಗಿದ್ದಾರೆ. ಈ ಸಿನಿಮಾಕ್ಕೆ ಶಿವಪ್ರಸಾದ್ ಅವರ ಸಂಗೀತ ಮತ್ತಷ್ಟು ಇಂಬು ನೀಡಿದೆ.
ಗ್ರೇ ಸ್ಕ್ವೇರ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ಈ ಸಿನಿಮಾವನ್ನು ಜೋಡಿ ಕುದುರೆ, ಗೋಣಿ ಚೀಲ ಕಿರುಚಿತ್ರಗಳ ನಿರ್ದೇಶಕ ನವನ್ ಶ್ರೀನಿವಾಸ್ ನಿರ್ದೇಶಿಸಿದ್ದಾರೆ. ಸತೀಶ್ ರಾಜೇಂದ್ರ ಛಾಯಾಗ್ರಾಹಕರಾಗಿದ್ದು, ಮಲೆನಾಡಿನ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಜಿತೇಂದ್ರ ನಾಯಕ ಮತ್ತು ರಾಘವೇಂದ್ರ ಟಿಕೆ ಸಂಕಲನಕಾರರಾಗಿದ್ದಾರೆ.
ಇನ್ನು ಈ ಸಿನಿಮಾದ ಬಗ್ಗೆ ನಟ ಪೃಥ್ವಿ ಅಂಬರ್, ನಿರ್ದೇಶಕ ಸಿಂಪಲ್ ಸುನಿ ಸೇರಿದಂತೆ ಹಲವು ಗಣ್ಯರು ಮೆಚ್ಚುಗೆಯ ಮಾತುಗಳನ್ನಾಡಿದ್ದು, ಈ ತಂಡಕ್ಕೆ ಶಕ್ತಿ ತುಂಬಿದಂತಾಗಿದೆ.