

ನಾಲ್ಕು ವರ್ಷಗಳಿಂದ ಬೇಡ್ಕಣಿ ಕಾಲೇಜು ರಸ್ತೆಯಲ್ಲಿ ನಡೆಯುತಿದ್ದ ಪಾಸ್ಟ್ ಫುಡ್ ಅಂಗಡಿಯೊಂದು ಶುಕ್ರವಾರ ಮುಂಜಾನೆಯ ಸಮಯಕ್ಕೆ ಧಗಧಗನೆ ಉರಿದು ಬೂದಿಯಾದ ಪ್ರಕರಣ ಹಲವು ವಿಚಾರಗಳ ಚರ್ಚೆಗೆ ಕಾರಣವಾಗಿದೆ.

ಸರ್ಕಾರಿ ಪದವಿ ಕಾಲೇಜ್ ಸಿದ್ಧಾಪುರದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ನಿತ್ಯ ಅಲ್ಪೋಪಹಾರ ಒದಗಿಸುತಿದ್ದ ಅಂಗಡಿ ಬೇಡ್ಕಣಿಯ ಶ್ರೀಧರ ನಾಯ್ಕರಿಗೆ ಸಂಬಂಧಿಸಿದೆ. ಈ ಅಂಗಡಿ ಬಗ್ಗೆ ಕೆಲವು ಸ್ಥಳಿಯರ ವಿರೋಧಗಳಿದ್ದ ಬಗ್ಗೆ ಮಾಹಿತಿ ನೀಡುವ ಸ್ಥಳೀಯರು ಈ ಹಿಂದೆ ಇದೇ ಅಂಗಡಿಯಲ್ಲಿ ಕಳ್ಳತನ ನಡೆದಿತ್ತು. ಈಗ ಮಧ್ಯ ರಾತ್ರಿಯಲ್ಲಿ ಸಿಲಿಂಡರ್ ಸ್ಫೋಟವಾಗಿದೆ ಎನ್ನುವ ಅಂಶ ನಂಬಲು ಸೂಕ್ತವಲ್ಲ. ಏಕಾಏಕಿ ಸಿಲಿಂಡರ್ ಸ್ಫೋಟವಾಗುವ ಸಾಧ್ಯತೆ ಕಡಿಮೆ ಇರುವುದರಿಂದ ಕೆಲವು ಸ್ಥಳೀಯ ಕಿಡಿಗೇಡಿಗಳು ಈ ಕೃತ್ಯದ ಹಿಂದಿರಬಹುದು ಎಂದು ಸಂಶಯಿಸಿರುವ ಅವರು ಈ ಪ್ರಕರಣದ ಸೂಕ್ತ ತನಿಖೆಗೆ ಒತ್ತಾಯಿಸಿದ್ದಾರೆ.


