

ಸಿದ್ಧಾಪುರ,ಶಿರಸಿ,ತಾಲೂಕುಗಳಲ್ಲಿ ವ್ಯಹಾರ ನಡೆಸುವ ಸಿದ್ಧಾಪುರ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರ ಮಾರಾಟ ಸಂಘ ಈ ವರ್ಷ ೭ಕೋಟಿ ೭೯ ಲಕ್ಷ೧೨ ಸಾವಿರದ೫೫೮ ರೂಪಾಯಿ ನಿವ್ವಳ ಲಾಭ ಗಳಿಸಿದೆ.
ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಟಿ.ಎಂ.ಎಸ್. ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಸಂಸ್ಥೆಯು ೭೫ ವರ್ಷಗಳನ್ನು ಪೂರೈಸಿದ್ದು ಸಂಘದ ೩೫೪೪ ಶೇರುದಾರ ಸದಸ್ಯರು ಮತ್ತು ೩೯೦೦ ನಾಮಮಾತ್ರ ಸದಸ್ಯರ ವ್ಯವಹಾರದಿಂದ ಈ ಪ್ರಗತಿ ಸಾಧ್ಯವಾಗಿದೆ ಎಂದರು.
ಆ.೨೩ ರ ಮಂಗಳವಾರ ಶಿರಸಿಯಲ್ಲಿ,೨೪ ರ ಬುಧವಾರ ಕಾನಸೂರಿನಲ್ಲಿ ೨೬ ರ ಶನಿವಾರ ಸಿದ್ಧಾಪುರದಲ್ಲಿ ವಾರ್ಷಿಕ ಸರ್ವಸಾಧಾರಣ ಸಭೆಗಳು ನಡೆಯಲಿವೆ. ಇದರ ಅಂಗವಾಗಿ ಸಿದ್ಧಾಪುರದ ಸಭೆಯ ನಂತರ ಚಕ್ರಚಂ ಡಿಕೆ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದರು.
ಟಿ.ಎಂ.ಎಸ್. ನೀಡಿರುವ ಮಾಧ್ಯಮ ಪ್ರಕಟಣೆ ಹೀಗಿದೆ.
ಸಿದ್ದಾಪುರ ತಾಲೂಕಿನ ಅಡಿಕೆ ವಹಿವಾಟಿನ ಹೆಮ್ಮೆಯ ಸಹಕಾರಿ ಸಂಸ್ಥೆಯಲ್ಲೊಂದಾದ ನಮ್ಮ ಸಂಘವು ೨೦೨೧-೨೨ ಸಾಲಿನಲ್ಲಿ ರೂ.೭,೭೯,೧೨,೫೫೮.೧೦ ನಿವ್ವಳ ಲಾಭ ಗಳಿಸಿದ್ದು, ನಿಧಿಗಳನ್ನು ತೆಗೆದಿರಿಸಿದ ನಂತರದಲ್ಲಿ ರೂ. ೫,೮೮,೨೨,೦೬೮.೩೮ ರಷ್ಟು ನಿಕ್ಕಿ ಲಾಭ ಗಳಿಸಿರುತ್ತದೆ. ೧೯೪೭ ರ ಸ್ವಾತಂತ್ರö್ಯ ಸಂಭ್ರಮದ ಕಾಲದಲ್ಲಿ ಸ್ಥಾಪಿಸಲ್ಪಟ್ಟ ನಮ್ಮ ಸಂಸ್ಥೆಯು ೭೫ ಸಾರ್ಥಕ ವಸಂತಗಳನ್ನು ಪೂರೈಸುತ್ತಿದೆ. ಈ ೭೫ ವರ್ಷಗಳ ಪಯಣದಲ್ಲಿ ಹಲವಾರು ಏಳು-ಬೀಳುಗಳನ್ನು ಕಂಡ ಸಂಘವು, ಇಂದು ಸದೃಢವಾಗಿದೆ. ಸಂಘದ ನಿಷ್ಠಾವಂತ ಹಾಗೂ ಅಭಿಮಾನಿ ಸದಸ್ಯರ ಸಂಪೂರ್ಣ ಸಹಕಾರ, ಅನುಭವಿ ಆಡಳಿತ ಮಂಡಳಿಯ ಸದಸ್ಯರ ಮಾರ್ಗದರ್ಶನ ಹಾಗೂ ಸೇವಾ ಮನೋಭಾವ ಹಾಗೂ ಕರ್ತವ್ಯನಿಷ್ಠೆಯ ಸಿಬ್ಬಂದಿಗಳ ಕಾಯಕದಿಂದ ಸಂಘವು ಉತ್ತಮ ಲಾಭಗಳಿಸಿ ಅಭಿವೃದ್ದಿ ಪಥದಲ್ಲಿ ಮುನ್ನಡೆಯುತ್ತಿದೆ.
ಪ್ರಸ್ತುತ ಸಂಘದಲ್ಲಿ ೩೫೪೪ ಶೇರುದಾರ ಸದಸ್ಯರಿದ್ದು, ೩.೨೪ ಕೋಟಿ ಶೇರು ಬಂಡವಾಳ ಹೊಂದಿರುತ್ತದೆ. ಸುಮಾರು ೩೯೦೦ ನಾಮಮಾತ್ರ ಸದಸ್ಯರಿದ್ದು, ೨೦೨೧-೨೨ನೇ ಸಾಲಿನಲ್ಲಿ ರೂ ೧೯೭ ಕೋಟಿ ವಹಿವಾಟು ನಡೆಸಲಾಗಿದೆ. ಸಂಚಿತ ನಿಧಿಗಳ ಮೊತ್ತ ರೂ. ೪೩.೪೮ ಕೋಟಿಯಷ್ಟಿದೆ. ರೂ. ೮೯.೩೨ ಕೋಟಿ ಠೇವುಗಳನ್ನು ಸಂಗ್ರಹಿದ್ದು, ದುಡಿಯುವ ಬಂಡವಾಳವು ರೂ ೨೦೦.೬೬ ಕೋಟಿ ತಲುಪಿರುತ್ತದೆ. ವಿಕ್ರಿಯಿಸಿದ ಮಹಸೂಲು ರೂ. ೧೮೨.೧೦ ಕೋಟಿಯಾಗಿದ್ದು, ವರದಿಯ ವರ್ಷದಲ್ಲಿ ಕೇಂದ್ರ ಕಚೇರಿಯಲ್ಲಿ ರೂ. ೩.೫೭ ಕೋಟಿ, ಕಾನಸೂರ ಶಾಖೆಯಲ್ಲಿ ೧.೩೬ ಕೋಟಿ, ಮಾರಾಟ ಮಳಿಗೆ ಶಿರಸಿಯಲ್ಲಿ ರೂ. ೭೦.೦೨ ಲಕ್ಷ, ಕೃಷಿ ವಿಭಾಗದಲ್ಲಿ ರೂ.೧೫.೧೯ ಲಕ್ಷ, ದವಸಧಾನ್ಯ ವಿಭಾಗದಲ್ಲಿ ರೂ.೧೩.೬೪ ಲಕ್ಷ, ನಿಯಂತ್ರಣ ವಿಭಾಗದಲ್ಲಿ ರೂ.೩.೬೨ ಲಕ್ಷ, ದವಸಧಾನ್ಯ ಎಪಿಎಮ್‌ಸಿ ವಿಭಾಗದಲ್ಲಿರೂ ೧೯.೯೬ ಸಾವಿರ ಲಾಭಗಳಿಸಿದ್ದು, ಔಷಧಿ ವಿಭಾಗದಲ್ಲಿ ರೂ.೧.೨೧ ಲಕ್ಷ, ಅಡಿಕೆ ಖರೀದಿ ವಿಭಾಗದಲ್ಲಿರೂ ೩.೫೬ ಲಕ್ಷ ಹಾಗೂ ಅಕ್ಕಿ ಗಿರಣಿ ವಿಭಾಗದಲ್ಲಿ ರೂ.೨.೮೯ ಲಕ್ಷ ಹಾನಿ ಅನುಭವಿಸಿದ್ದು, ಒಟ್ಟಾರೆ ರೂ. ೫.೮೮ ಕೋಟಿ ನಿಕ್ಕಿ ಲಾಭಗಳಿಸಿರುತ್ತದೆ.
ರೈತರ ಅನುಕೂಲಕ್ಕಾಗಿ ಸಂಘವು ಕೇಂದ್ರ ಕಚೇರಿಯಲ್ಲಿ ವಿಶಾಲವಾದ ವ್ಯಾಪಾರಂಗಣವನ್ನು ನಿರ್ಮಿಸಲಾಗಿದೆ. ಕಾನಸೂರ ಶಾಖೆಯಲ್ಲ್ಲಿ ಗೋದಾಮು ಹಾಗೂ ವ್ಯಾಪಾರಂಗಣದ ಕಾಮಗಾರಿಯು , ಅಕ್ಕಿಗಿರಣಿಯಲ್ಲಿ ಭತ್ತದ ಚೀಲವನ್ನು ದಾಸ್ತಾನಿಡಲು ಗೋದಾಮು ಕಾಮಗಾರಿಯು ಮುಕ್ತಾಯದ ಹಂತದಲ್ಲಿದೆ. ಕೇಂದ್ರ ಕಚೇರಿಯಲ್ಲಿ ವಾಹನ ಶೆಡ್ ಹಾಗೂ ಕಾಂಪೌAಡ್ ನಿರ್ಮಾಣ ಮಾಡಲಾಗಿದೆ. “ಕಟ್ಟಡ ನಿರ್ಮಾಣ ಸಾಮಗ್ರಿಗಳ ವಿಭಾಗವನ್ನು” ಕಿರಾಣಿ ಎ.ಪಿ.ಎಂ.ಸಿ ಯಾರ್ಡನ ಹಿಂದೆ ನಿರ್ಮಿಸಲಾಗಿದ್ದು, ಶೀಘ್ರದಲ್ಲಿಯೇ ಆರಂಭವಾಗಲಿದೆ. ಕೇಂದ್ರಕಛೇರಿ ಹಾಗೂ ಕಾನಸೂರ ಶಾಖೆಯಲ್ಲಿ ಹಸಿ ಅಡಿಕೆ ಟೆಂಡರ್ ಮುಖಾಂತರ ಕೂಲಿಕಾರರ ಅಭಾವದಿಂದ ಆಗುವ ಸಮಸ್ಯೆಗಳನ್ನು ತಪ್ಪಿಸಲು ಪ್ರಯತ್ನಿಸಲಾಗಿದೆ. ಹಾಗೂ ಜನರಿಗೂ ಇದರಿಂದ ಉತ್ತಮ ದರಗಳು ಲಭಿಸುತ್ತಿದೆ. ಸದರಿ ಆರ್ಥಿಕ ವರ್ಷದಲ್ಲಿ ಸಂಘವು “ಸದಸ್ಯರ ಕ್ಷೇಮ ನಿಧಿ ಯೋಜನೆ” ಅಡಿಯಲ್ಲಿ ಸದಸ್ಯರ ಆರೋಗ್ಯ ವೆಚ್ಚವನ್ನು ಯೋಜನೆಯ ನಿಬಂಧನೆಗೊಳಪಟ್ಟು ಭರಣ ಮಾಡಿಕೊಟ್ಟಿದೆ. ಟೆಲಿಗ್ರಾಂ ಮೂಲಕ ಸದಸ್ಯರ ಖಾತೆ ಮಾಹಿತಿ ಹಾಗೂ ಅಡಕೆ ದರಗಳ ಮಾಹಿತಿಯನ್ನು ಸಂದೇಶಗಳ ಮೂಲಕ ತಲುಪಿಸುತ್ತಿದೆ. ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಪರಿಕಲ್ಪನೆಯೊಂದಿಗೆ ನೂತನವಾಗಿ ‘’ಟಿ.ಎಮ್.ಎಸ್ ವ್ಯಾಲೇಟ್’’ ನ್ನು ಪರಿಚಯಿಸಲಾಗುತ್ತಿದೆ. ಸದಸ್ಯರ ಮಹಸೂಲ ವಿಕ್ರಿಯ ಮೇಲೆ ಪ್ರತಿ ಕ್ವಿಂಟಲ್ ಗೆ ಹಮಾಲಿ, ಸಾಗಾಣಿಕಾ ವೆಚ್ಚ ಸಹಿತ ರೂ. ೫೦ /- ವಿಕ್ರಿ ಪ್ರೋತ್ಸಾಹನವನ್ನು ನೀಡಲಾಗುತ್ತಿದೆ. ಬ್ರಾಡ್ ವೇ ಕಂಪನಿಯ ಸಹಯೋಗದೊಂದಿಗೆ ಸದಸ್ಯರಿಗೆ ಇಂಟರ್-ನೆಟ್ ಸೇವೆಯನ್ನು ಅತ್ಯಂತ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ.
ಉತ್ತಮ ವ್ಯಾವಹಾರಿಕ ಪೈಪೋಟಿಯನ್ನು ಎದುರಿಸಲು ಸಂಘವು ಇನ್ನೂ ಹಲವು ಯೋಜನೆಗಳನ್ನು ರೂಪಿಸುತ್ತಿದ್ದು, ಸದಸ್ಯರ ಅನುಕೂಲಕ್ಕಾಗಿ ಶೀಘ್ರದಲ್ಲಿಯೇ ಸೇವಾ ವಿಭಾಗವನ್ನು (ಕರೆನ್ಸಿ, ರಿಚಾರ್ಜ, ಟಿಕೇಟ್ ಬುಕ್ಕಿಂಗ್ ಹಾಗೂ ಇನ್ನಿತರ ಸೇವೆ )ಆರಂಭಿಸಲಾಗುತ್ತಿದೆ. ಕಿರಾಣಿ ಎಪಿಎಮ್‌ಸಿ ವಿಭಾಗದ ಎದರುಗಡೆ ಹಣ್ಣು ಮತ್ತು ತರಕಾರಿ ಮಾರಾಟವನ್ನು ಪ್ರಾರಂಭಿಸಲಾಗುತ್ತಿದೆ. ಸಂಘದ ವತಿಯಿಂದ ಪೆಟ್ರೋಲ್ ಬಂಕ್ ಆರಂಭಿಸುವ ಉದ್ದೇಶದಿಂದ ನಿವೇಶನವನ್ನು ಖರೀದಿಸಲಾಗಿದೆ.
ಕೆಲವು ಆಯ್ದ ಹಿರಿಯ ಸದಸ್ಯರನ್ನು, ಹಾಗೂ ಎಸ್.ಎಸ್.ಎಲ್.ಸಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸಹಕಾರಿ ಸಭೆ ಹಾಗೂ ಸರ್ವ ಸಾಧಾರಣ ಸಭೆಯ ದಿನದಂದು ಸನ್ಮಾನಿಸಲಾಗುತ್ತಿದೆೆ. ಸದಸ್ಯರಿಗೆ ಎಲ್ಲಾ ಅಗತ್ಯತೆಗಳನ್ನು ಪೂರೈಸುವ ಯೋಜನೆ ಯೋಚನೆಯಲ್ಲಿದೆ. ಯಾವತ್ತೂ ಕೃಷಿ ಹುಟ್ಟುವಳಿಗಳನ್ನು ಸಂಘದ ಮುಖಾಂತರವೇ ವಿಕ್ರಿಸಲು ಹಾಗೂ ಸಂಘದಲ್ಲಿ ಲಭ್ಯವಿರುವ ಕಿರಾಣಿ ಜೀನಸುಗಳು, ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ, ಕೃಷಿ ಉಪಕರಣಗಳು, ಜನೌಷಧಗಳು ಮತ್ತು ಇನ್ನಿತರ ವಸ್ತುಗಳನ್ನು ಖರೀದಿಸುವ ಮೂಲಕ ಸಂಘದ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ
ದಿನಾಂಕ ೨೩-೦೮-೨೦೨೨ ನೇ ಮಂಗಳವಾರ ಮದ್ಯಾಹ್ನ ೩.೦೦ ಗಂಟೆಗೆ ಶಿರಸಿ ಮಾರಾಟ ಮಳಿಗೆಯಲ್ಲಿ ಹಾಗೂ ದಿನಾಂಕ ೨೪-೦೮-೨೦೨೨ ನೇ ಬುಧವಾರ ಕಾನಸೂರ ಶಾಖೆಯಲ್ಲಿ ಸಹಕಾರಿ ಸಭೆಯನ್ನು ಕರೆಯಲಾಗಿದೆ. ದಿನಾಂಕ ೨೬-೦೮-೨೦೨೨ ನೇ ಶುಕ್ರವಾರ ಮಧ್ಯಾಹ್ನ ೩-೦೦ ಘಂಟೆಗೆ ಸಂಘದ ವ್ಯಾಪಾರಾಂಗಣದಲ್ಲಿ ವಾರ್ಷಿಕ ಸಾಧಾರಣ ಸಭೆಯನ್ನು ಕರೆಯಲಾಗಿದೆ. ಸಂಘದ ಯಾವತ್ತೂ ಸದಸ್ಯರು ಸಭೆಗೆ ಆಗಮಿಸಬೇಕಾಗಿ ಕೋರಿದೆ. ಸಭೆಯ ಕರ‍್ಯ ಕಾಲಾಪಗಳು ಮುಗಿದ ನಂತರದಲ್ಲಿ ಬಡಗುತಿಟ್ಟಿನ ಸುಪ್ರಸಿದ್ಧ ಯಕ್ಷಗಾನ ಕಲಾವಿದರಿಂದ “ಚಕ್ರಚಂಡಿಕೆ” ಎಂಬ ಯಕ್ಷಗಾನ ಕಾರ‍್ಯಕ್ರಮವಿರುತ್ತದೆ. ಸರ‍್ವರಿಗೂ ಸ್ವಾಗತ.
“ ಜೈ ಸಹಕಾರ, ಸಹಕಾರಂ ಗೆಲ್ಗೆ “
ಸಿದ್ದಾಪುರ (ಉ.ಕ) ಆಡಳಿತ ಮಂಡಳಿಯ ಪರವಾಗಿ
ದಿನಾಂಕ: ೧೯-೦೮-೨೦೨೨ ಸಹಿ ಇದೆ
ಆರ್.ಎಮ್.ಹೆಗಡೆ, ಬಾಳೇಸರ.
ಅಧ್ಯಕ್ಷ.



