

ಪ್ರತಿತಿಂಗಳು ನಿಯಮಿತವಾಗಿ ವಿದ್ಯುತ್ ಬಿಲ್ ಪಾವತಿಸದ ಗ್ರಾಹಕರ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವ ಹಾಗಿಲ್ಲ ಎಂದು ಪ್ರತಿಪಾದಿಸಿರುವ ಜೆ.ಡಿ.ಎಸ್. ಹೆಸ್ಕಾಂ ಕ್ರಮದ ಬಗ್ಗೆ ಆಕ್ಷೇಪಿಸಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಜಾತ್ಯಾತೀತ ಜನತಾದಳದ ಜಿಲ್ಲಾ ಅಲ್ಫಸಂಖ್ಯಾತರ ಘಟಕದ ಅಧ್ಯಕ್ಷ ಇಲಿಯಾಸ್ ಶೇಖ್,ಜೆ.ಡಿ.ಎಸ್. ರಾಜ್ಯ ಪ್ರಧಾನಿ ಕಾರ್ಯದರ್ಶಿ ಅಲ್ತಾನಾ ಮತ್ತು ಯುವ ಜಾತ್ಯಾತೀತ ಜನತಾದಳದ ಅಧ್ಯಕ್ಷ ಅರಣ ಗೌಡ,
ಸರ್ಕಾರದ ನಿಯಮಾನುಸಾರ ಒಬ್ಬ ಗ್ರಾಹಕ ನಿರಂತರವಾಗಿ ಆರು ತಿಂಗಳ ವರೆಗೆ ವಿದ್ಯುತ್ ಬಿಲ್ ಪಾವತಿಸದಿದ್ದರೆ ಅವರ ವಿದ್ಯುತ್ ಸಂಪರ್ಕ ಕಡಿತಗೊಳಿಸಬಹುದು ಆದರೆ ಒಂದೆರಡು ತಿಂಗಳ ವಿದ್ಯುತ್ ಬಿಲ್ ಪಾವತಿ ವಿಳಂಬಕ್ಕೆ ವಿದ್ಯುತ್ ಸಂಪರ್ಕ ಕಡಿತಮಾಡುವಂತಿಲ್ಲ. ಆರು ತಿಂಗಳ ನಂತರ ನೋಟೀಸ್ ನೀಡಿ ಮುಂದಿನ ಕ್ರಮ ಜರುಗಿಸಬಹುದು ಆದರೆ ಹೆಸ್ಕಾಂ ಸಿಬ್ಬಂದಿಗಳು ಜನವಿರೋಧಿಯಾಗಿ ವರ್ತಿಸುತ್ತಾ ಗ್ರಾಹಕರ ಹಕ್ಕುಗಳನ್ನು ಕಸಿಯುತಿದ್ದಾರೆ ಎಂದು ಆರೋಪಿಸಿದ್ದಾರೆ.

