


ಸಿದ್ಧಾಪುರ ತಾಲೂಕಿನ ರಸ್ತೆ ಸಮಸ್ಯೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದು ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅನುಯಾಯಿಗಳಿಂದ ಜೈಲು ಪಾಲಾದ ಹರೀಶ್ ಗೌಡರ್ ಅಂದರ್ ಪ್ರಕರಣ ಮರೆಯುವ ಮುನ್ನ ಸುಳ್ಯದಲ್ಲಿ ನಗರ ಪಂಚಾಯತ್ ಅಧ್ಯಕ್ಷ ಆರ್.ಜೆ.ವಿರುದ್ಧ ಪೊಲೀಸ್ ದೂರು ನೀಡಿರುವ ಘಟನೆ ವರದಿಯಾಗಿದೆ.

ರಸ್ತೆ ಅವ್ಯವಸ್ಥೆ ಪ್ರಶ್ನಿಸಿ ಫೋಟೋ ಹಾಕಿದ ಆರ್ಜೆ ವಿರುದ್ಧ ದೂರು ನೀಡಿದ ನಗರ ಪಂಚಾಯತ್ ಅಧ್ಯಕ್ಷ
ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಪೊಲೀಸ್ ಠಾಣೆಯಲ್ಲಿ ತ್ರಿಶೂಲ್ ವಿರುದ್ಧ ದೂರು ನೀಡಿ, “ನನ್ನ ಅನುಮತಿಯಿಲ್ಲದೇ ಆಡಿಯೋ ರೆಕಾರ್ಡ್ ಮಾಡಿ ಫೇಸ್ಬುಕ್ನಲ್ಲಿ ಪ್ರಸಾರ ಮಾಡಿ ಅವರ ಸ್ನೇಹಿತರಿಂದ ಅವಾಚ್ಯವಾಗಿ ಕಾಮೆಂಟ್ ಹಾಕಿಸಿದ್ದಾರೆಂದು” ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಸುಳ್ಯ: ರಸ್ತೆಯಲ್ಲಿ ಗುಂಡಿ ಇದೆ ಎಂಬುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ವಿಚಾರದಲ್ಲಿ ಸುಳ್ಯದ ಖ್ಯಾತ ಆರ್ಜೆ ಹಾಗೂ ಯೂಟ್ಯೂಬರ್ ತ್ರಿಶೂಲ್ ವಿರುದ್ಧ ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ಸುಳ್ಯ ಪೊಲೀಸ್ ಠಾಣೆ ಮೆಟ್ಟಲೇರಿದ ಘಟನೆ ನಡೆದಿದೆ.
ಘಟನೆ ವಿವರ : ಸುಳ್ಯ ನಗರದ ಶ್ರೀರಾಂಪೇಟೆಯಿಂದ ಜೂನಿಯರ್ ಕಾಲೇಜಿಗೆ ತಿರುಗುವ ರಸ್ತೆಯಲ್ಲಿ ದೊಡ್ಡ ಹೊಂಡ-ಗುಂಡಿಗಳಿವೆ. ಇದರಿಂದ ಸಾರ್ವಜನಿಕರು ಕಿರಿ ಕಿರಿ ಅನುಭವಿಸುತ್ತಿದ್ದರು. ಈ ಕುರಿತು ಆರ್ಜೆ ತ್ರಿಶೂಲ್ ಇತ್ತೀಚೆಗೆ ರಸ್ತೆ ಅವ್ಯವಸ್ಥೆಯ ಕುರಿತು ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.
ಇದು ವೈರಲ್ ಆಗುತ್ತಿದಂತೆ, ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಅವರು ತ್ರಿಶೂಲ್ ಅವರಿಗೆ “ಕೀ ಬೋರ್ಡ್ ವಾರಿಯರ್” ಎಂದು ಕಮೆಂಟ್ ಹಾಕಿದ್ದರು. ಇದರಿಂದ ಅಸಮಾಧಾನಗೊಂಡ ತ್ರಿಶೂಲ್ ತಮ್ಮ ಫೇಸ್ಬುಕ್ನಲ್ಲಿ ನಾನು ಸಮಸ್ಯೆಯೊಂದಿಗೆ ಬರುತ್ತೇನೆ ಅಧ್ಯಕ್ಷರೇ. ತಾವು ಲೈವ್ನಲ್ಲಿ ಬಂದು ಉತ್ತರಿಸಿ ಎಂದು ನ.ಪಂ ಅಧ್ಯಕ್ಷರಿಗೆ ಸವಾಲೆಸೆದಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿ ತ್ರಿಶೂಲ್ ನಡೆಯನ್ನು ಹಲವರು ಬೆಂಬಲಿಸಿದ್ದರು.
ನಂತರದಲ್ಲಿ ಆ.14 ರಂದು ತ್ರಿಶೂಲ್ ನ.ಪಂ ಅಧ್ಯಕ್ಷರಿಗೆ ದೂರವಾಣಿ ಕರೆ ಮಾಡಿ ಸವಾಲು ಸ್ವೀಕರಿಸುವಂತೆ ಕೇಳಿಕೊಂಡಿದ್ದರು. ಅವರಿಬ್ಬರ ಈ ಫೋನ್ ಸಂಭಾಷಣೆಯ ಆಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿತ್ತು. ಈ ಬಗ್ಗೆ ನ.ಪಂ ಅಧ್ಯಕ್ಷ ವಿನಯ ಕುಮಾರ್ ಅವರು ಪೊಲೀಸ್ ಠಾಣೆಯಲ್ಲಿ ತ್ರಿಶೂಲ್ ವಿರುದ್ಧ ದೂರು ನೀಡಿ, “ನನ್ನ ಅನುಮತಿಯಿಲ್ಲದೇ ಆಡಿಯೋ ರೆಕಾರ್ಡ್ ಮಾಡಿ ಫೇಸ್ಬುಕ್ನಲ್ಲಿ ಪ್ರಸಾರ ಮಾಡಿ ಅವರ ಸ್ನೇಹಿತರಿಂದ ಅವಾಚ್ಯವಾಗಿ ಕಾಮೆಂಟ್ ಹಾಕಿಸಿದ್ದಾರೆಂದು” ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಪೊಲೀಸರು ತನಗೆ ಫೋನ್ ಮಾಡಿ ವಿಚಾರಣೆಗಾಗಿ ಠಾಣೆಗೆ ಬರುವಂತೆ ಬುಲಾವ್ ನೀಡಿದ್ದಾರೆ ಎಂದು ಆರ್ಜೆ ತ್ರಿಶೂಲ್ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. (etbk)


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
