

ಸಿದ್ದಾಪುರ: ತಾಲೂಕಿನ ಅಡಕೆ ಬೆಳೆಗಾರರ ಒಡನಾಡಿ ಟಿಎಂಎಸ್ ನ ವಾರ್ಷಿಕ ಸರ್ವ ಸಾಧಾರಣಾ ಸಭೆಯಲ್ಲಿ ಸಾಧಕ ವಿದ್ಯಾರ್ಥಿಗಳು, ಹಿರಿಯ ಸದಸ್ಯರನ್ನು ಸನ್ಮಾನಿಸುವ ಜೊತೆಗೆ ಸಂಘದ ಅಧಿಕೃತ ವೆಬ್ ಸೈಟ್ ಹಾಗೂ ಟಿಎಂಎಸ್ ವ್ಯಾಲೇಟ್ ಲೋಕಾರ್ಪಣೆಗೊಳಿಸಲಾಯಿತು.

ಶುಕ್ರವಾರ ಮಧ್ಯಾಹ್ನ ಸಂಘದ ವ್ಯಾಪಾರಿ ಅಂಗಣದಲ್ಲಿ ನಡೆದ ಸಭೆಯಲ್ಲಿ ಹಿರಿಯ ಸದಸ್ಯರಾದ ವಿಶ್ವೇಶ್ವರ ಹೆಗಡೆ ಓಡ್ಲಕೋಣೆ, ಗಣಪತಿ ಹೆಗಡೆ ಕೆಳಗಿನಮನೆ, ನಾರಾಯಣ ಭಟ್ ದೊಡ್ಮನೆ, ಸರಸ್ವತಿ ಹೆಗಡೆ ಕೊಪ್ಪ, ರಾಜಶೇಖರ ಗೌಡ ಮಳವತ್ತಿ, ಬಡಿಯಾ ನಾಯ್ಕ ಹಸವಿಗುಳಿ, ನಾರಾಯಣ ನಾಯ್ಕ ಬೇಡ್ಕಣಿ, ತಿಮ್ಮಾ ನಾಯ್ಕ ಮಾಸ್ತಿಕೊಂಡ, ಗಣಪತಿ ಮಡಿವಾಳ ಮರಲಗಿ, ಬೀರ ಗೌಡ ಅಳಗೋಡ ರನ್ನು ಸನ್ಮಾನಿಸಲಾಯಿತು.
ಎಸ್.ಎಸ್.ಎಲ್.ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ತುಷಾರ ಶಾನಭಾಗ, ಕುಮಾರ ಸತ್ಯನಾರಾಯಣ ಭಟ್, ಮೀನಾಕ್ಷಿ ಗೌಡ, ರಜತ ಹೆಗಡೆ, ಪವಿತ್ರಾ ಕಾಮತ, ಲೀಫ್ ಆರ್ಟಿನಲ್ಲಿ ಸಾಧನೆ ಮಾಡಿದ ತೃಪ್ತಿ ನಾಯ್ಕ ಹೊಸಮಂಜು, ಧನ್ಯ ಹೆಗಡೆ ಗುಡ್ಡೆಶಿರಗೋಡ, ಚೆಸ್ ನಲ್ಲಿ ಸಾಧನೆ ಮಾಡಿದ ಭರತ್ ಹೆಗಡೆ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಸಾಹಿತಿ ತಮ್ಮಣ್ಣ ಬೀಗಾರ ರನ್ನು ಸನ್ಮಾನಿಸಲಾಯಿತು. ಇದೇ ವೇಳೆ ತಾಲೂಕಿನ ದೊಡ್ಮನೆ ಸೇವಾ ಸಹಕಾರಿ ಸಂಘ, ತಾರೇಹಳ್ಳಿ ಕಾನಸೂರ ಸೇವಾ ಸಹಕಾರಿ ಸಂಘ ಹಾಗೂ ಲಂಬಾಪುರ ಸೇವಾ ಸಹಕಾರಿ ಸಂಘ ಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ಚಕ್ರಚಂಡಿಕೆ ಯಕ್ಷಗಾನ ಪ್ರದರ್ಶನ ನಡೆಯಿತು.


ಸಿದ್ದಾಪುರ; ಸರ್ಕಾರಿ ಶಾಲೆಯ ಮಕ್ಕಳಿಗೆ ಹೈಟೆಕ್ ಆಟೋಪಕರಣಗಳನ್ನು ಒದಗಿಸಿ ಸರ್ಕಾರಿ ಶಾಲೆಗಳ ಅಭಿವೃದ್ಧಿಯ ಸದುದ್ಧೇಶವನ್ನು ಹೊಂದಿದ್ದೇವೆ. ನಮ್ಮ ಫೌಂಡೇಶನ್ ಮತ್ತು ನಂದನ ನಿಲೇಕಣಿ ಇವರ ಕುಟುಂಬದ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದನ್ನು ಈಗಾಗಲೆ ಹಲವಾರು ಶಾಲೆಗಳಿಗೆ ವಿತರಿಸಿದ್ದು, ಮುಂದಿನ ದಿನಗಳಲ್ಲಿ ಇನ್ನು ಹಲವಾರು ಶಾಲೆಗಳಿಗೆ ವಿತರಿಸಲಾಗುವುದು. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯ ಮಕ್ಕಳಿಗೂ ಪಟ್ಟಣದ ಖಾಸಗಿ ಶಾಲೆಯ ಸೌಲಭ್ಯ ಸಿಗುವಂತಾಗಬೇಕು ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಆಳ್ವಾ ಫೌಂಡೇಶನ್ ಟ್ರಷ್ಟಿ ನಿವೇದಿತ್ ಆಳ್ವಾ ಹೇಳಿದರು.
ಅವರು ತಾಲೂಕಿನ ಕೋಲಶಿರ್ಸಿಯ ಸರ್ಕಾರಿ ಮಾದರಿ ಹಿರಿಯ ಶಾಲೆಗೆ ಆಳ್ವಾ ಫೌಂಡೇಶನ್ ವತಿಯಿಂದ ನಂದನ ನಿಲೇಕಣಿ ಇವರ ಕುಟುಂಬದ ಪ್ರಾಯೋಜಕತ್ವದಲ್ಲಿ ಕೊಡುಗೆಯಾಗಿ ನೀಡಿದ ಆಟದ ಪರಿಕರಗಳನ್ನು ಉದ್ಘಾಟಿಸಿ ಮಾತನಾಡಿದರು. ಮುಂದಿನ ದಿನಗಳಲ್ಲಿ ಕೋಲಶಿರ್ಸಿ ಶಾಲೆಗೆ ಅಗತ್ಯವಿರುವ ಕಂಪ್ಯೂಟರ್ ನೀಡುವ ಭರವಸೆ ನೀಡಿದರು.
ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವಿ.ಎನ್.ನಾಯ್ಕ ಬೇಡ್ಕಣಿ ಮಾತನಾಡಿ ಆಳ್ವಾ ಫೌಂಡೇಶನ್ ಮೂಲಕ ನಿವೇದಿತ್ ಆಳ್ವಾರವರು ಹಲವು ವ್ಯವಸ್ಥೆಗಳನ್ನು ಸಮಾಜಕ್ಕೆ ಕಲ್ಪಿಸಿದ್ದಾರೆ. ಅವರು ಹಿಂದೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಜನತೆಗೆ ಅನೇಕ ಕೆಲಸ ಕಾರ್ಯಗಳನ್ನು ಮಾಡಿಕೊಟ್ಟು ನೆರವಾಗಿದ್ದಾರೆ ಎಂದರು.
ತಾಲೂಕ ಪಂಚಾಯತ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವಸಂತ ನಾಯ್ಕ ಮನ್ಮನೆ ಮಾತನಾಡಿ ನಿವೇದಿತ್ ಆಳ್ವಾರವರು ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅವರಗುಪ್ಪದಲ್ಲಿರುವ ಡಿಪ್ಲೊಮೊ ಕಾಲೇಜಿಗೆ ನೂರಕ್ಕೂ ಹೆಚ್ಚು ಕಂಪ್ಯೂಟರ್ ನೀಡಿದ್ದಾರೆ. ಹಲವು ಸಮುದಾಯ ಭವನಗಳಿಗೆ ಅನುದಾನವನ್ನು ಒದಗಿಸಿದ್ದಾರೆ. ಮಾವಿನಗುಂಡಿಯಲ್ಲಿ ಅಗತ್ಯವಿರುವ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವಕೀಲರಾದ ಸತೀಶ ಪಿ. ನಾಯ್ಕ, ತಾಲೂಕ ಪಂಚಾಯತ ಮಾಜಿ ಸದಸ್ಯ ನಾಸೀರ್ ವಲ್ಲಿ ಖಾನ್,ಗ್ರಾಮ ಪಂಚಾಯತ ಸದಸ್ಯರಾದ ತಿಲಕಕುಮಾರ ನಾಯ್ಕ, ಮಾಜಿ ಸದಸ್ಯರಾದ ಬಾಲಕೃಷ್ಣ ನಾಯ್ಕ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಕುಮಾರ ನಾಯ್ಕ, ಉಪಾಧ್ಯಕ್ಷೆ ದಿವ್ಯ ರಾಘವೇಂದ್ರ ನಾಯ್ಕ, ಸದಸ್ಯರಾದ ಅಣ್ಣಪ್ಪ ನಾಯ್ಕ, ಕೃಷ್ಣ ನಾಯ್ಕ ಸುಂಠಿ, ಸರೋಜಾ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.
ನಾಗರಾಜ ನಾಯ್ಕ ಮಾಳ್ಕೋಡ ಸ್ವಾಗತಿಸಿದರು, ಶಿಕ್ಷಕ ನಾಗರಾಜ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಮುಖ್ಯ ಶಿಕ್ಷಕಿ ಸುಮನಾ ಶೇಟ್ ವಂದಿಸಿದರು.
…………….
ಸನ್ಮಾನ; ಆಳ್ವಾ ಫೌಂಡೇಶನ್ ವತಿಯಿಂದ ನಂದನ ನಿಲೇಕಣಿ ಇವರ ಕುಟುಂಬದ ಪ್ರಾಯೋಜಕತ್ವದಲ್ಲಿ ಶಾಲೆಗೆ ಹೈಟೆಕ್ ಆಟಿಕೆ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದ ಆಳ್ವಾ ಫೌಂಡೇಶನ್ ಟ್ರಷ್ಟಿ ನಿವೇದಿತ್ ಆಳ್ವಾ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
