ಹೆಗಡೆಯವರ ದೃಷ್ಟಿಕೋನದಲ್ಲಿ ಒಕ್ಕೂಟ ವ್ಯವಸ್ಥೆ ಮತ್ತು ಕೇಂದ್ರ-ರಾಜ್ಯಗಳ ಸಂಬಂಧಗಳು ವರ್ತಮಾನ ಮತ್ತು ಭವಿಷ್ಯದಲ್ಲಿ ಇದರ ಪ್ರಸ್ತುತತೆ ಎನ್ನುವ ರಾಜ್ಯಮಟ್ಟದ ವಿಚಾರ ಸಂಕಿರಣ ಆ.೨೯ ರಂದು ಸಿದ್ದಾಪುರದ ಧನ್ವಂತರಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ನಡೆಯಲಿದೆ.
ರಾಮಕೃಷ್ಣ ಹೆಗಡೆ ಚಿರಂತನ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಡಾ.ಆರ್.ಜಿ. ಹೆಗಡೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು ಅವರ ಉಪನ್ಯಾಸ ನಡೆಯಲಿದೆ. ರಾಮಕೃಷ್ಣ ಹೆಗಡೆ ಚಿರಂತನದ ಅಧ್ಯಕ್ಷ ಡಾ.ಶಶಿಭೂಷಣ ಹೆಗಡೆ ಅಧ್ಯಕ್ಷತೆ ವಹಿಸಲಿದ್ದು ವಿಶ್ವಸ್ಥರಾದ ಆರ್.ಜಿ.ನಾಯಕ್ ಮತ್ತು ಬಸವರಾಜ್ ಓಸಿಮಠ ಪಾಲ್ಗೊಳ್ಳಲಿದ್ದಾರೆ. ಈ ಬಗ್ಗೆ ಕರೆದ ಮಾಧ್ಯಮಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಡಾ.ಶಶಿಭೂಷಣ ಹೆಗಡೆ ಸರ್ವರನ್ನೂ ಆಮಂತ್ರಿಸಿದರು.