ಶನಿವಾರ ಮಧ್ಯಾಹ್ನ ನಿಪ್ಪಾಣಿ ಬಳಿ ಟ್ಯಾಂಕರ್ಗಳ ನಡುವೆ ಭೀಕರ ಅಪಘಾತ ನಡೆದಿದೆ. ವೈದ್ಯ ದಂಪತಿ ಗಾಯಾಳುಗಳಿಗೆ ತುರ್ತು ಪ್ರಾಥಮಿಕ ಚಿಕಿತ್ಸೆ ನೀಡಿ, ಮಾನವೀಯತೆ ಮೆರೆದಿದ್ದಾರೆ.
ಕಾರವಾರ/ಬೆಳಗಾವಿ: ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಪ್ಪಾಣಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದವರಿಗೆ ಸಹಾಯ ಮಾಡಿ ಶಿರಸಿ ಮೂಲದ ವೈದ್ಯ ದಂಪತಿ ಮಾನವೀಯತೆ ಮೆರೆದಿದ್ದಾರೆ.
ಶನಿವಾರ ಮಧ್ಯಾಹ್ನ ನಿಪ್ಪಾಣಿ ಬಳಿ ಟ್ಯಾಂಕರ್ಗಳ ನಡುವೆ ಭೀಕರ ಅಪಘಾತ ನಡೆದಿದೆ. ಚಾಲಕ ಹಾಗೂ ಕ್ಲೀನರ್ ಗಂಭೀರವಾಗಿ ಗಾಯಗೊಂಡಿದ್ದರು. ಇದೇ ವೇಳೆ ಅಲ್ಲೇ ಸಮೀಪದ ಹೋಟೆಲ್ ಒಂದರಲ್ಲಿ ಶಿರಸಿ ಮೂಲದ ವೈದ್ಯ ದಂಪತಿಗಳಾಗಿರುವ ಡಾ.ದಿನೇಶ ಹೆಗಡೆ ಮತ್ತು ಡಾ.ಸುಮನ್ ಹೆಗಡೆ ಊಟ ಮಾಡುತ್ತಿದ್ದರು. ಕಣ್ಣೆದುರಲ್ಲೇ ನಡೆದ ಅಪಘಾತ ನೋಡಿ ಊಟವನ್ನು ಅರ್ಧಕ್ಕೆ ನಿಲ್ಲಿಸಿ ಸ್ಥಳಕ್ಕೆ ತೆರಳಿದ ದಂಪತಿ ಗಾಯಾಳುಗಳಿಗೆ ತುರ್ತು ಪ್ರಾಥಮಿಕ ಚಿಕಿತ್ಸೆ ನೀಡಿ, ಮಾನವೀಯತೆ ಮೆರೆದಿದ್ದಾರೆ. ನಂತರ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.
ಭೀಕರ ಅಪಘಾತ
ಈ ವೈದ್ಯ ದಂಪತಿಯ ಮಾನವೀಯ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರೋಟರಿ ಸಂಸ್ಥೆ ಮೂಲಕ ಮತ್ತು ವೈಯಕ್ತಿಕವಾಗಿ ತಮ್ಮ ಸಾಮಾಜಿಕ ಕಾರ್ಯದ ಮೂಲಕ ಜಿಲ್ಲೆಯಲ್ಲಿ ಡಾ.ದಿನೇಶ್ ಹೆಗಡೆ ಹಾಗು ಡಾ.ಸುಮನ್ ಹೆಗಡೆ ಹೆಸರು ಮಾಡಿದ್ದಾರೆ. (etbk)