

ಸಿದ್ದಾಪುರ
ಶಿರಸಿ(ಕದಂಬ) ಜಿಲ್ಲೆ ಆಗಬೇಕು ಎನ್ನುವ ಹೋರಾಟಕ್ಕೆ ನ್ಯಾಯ ದೊರಕುವ ಭರವಸೆ ಇತ್ತು. ಆದರೆ ಈಗ ಆ ಭರವಸೆ ಕುಂಠಿತವಾಗಿದೆ. ಆದರೆ ಸಾರ್ವಜನಿಕರ ಸಹಿ ಸಂಗ್ರಹದ ಜನಾಂದೋಲನದ ಮೂಲಕ ಬಹುದೊಡ್ಡ ಹೋರಾಟಕ್ಕೆ ಸಜ್ಜಾಗಬೇಕಿದೆ. ಅದರ ಆರಂಭ ಸಿದ್ದಾಪುರದಲ್ಲಿ ಆಗುತ್ತಿದೆ ಎಂದು ಶಿರಸಿ ಪ್ರತ್ಯೇಕ ಜಿಲ್ಲೆ ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ ಶಿರಸಿ ಹೇಳಿದರು.
ಅವರು ಪಟ್ಟಣದ ಬಸ್ ನಿಲ್ದಾಣದಲ್ಲಿ ಸಹಿ ಸಂಗ್ರಹ ಅಭಿಯಾನದ ಆರಂಭದ ಸಂದರ್ಭದಲ್ಲಿ ಪಾಲ್ಗೊಂಡು ಮಾತನಾಡಿ ನಮ್ಮ ಹೋರಾಟ ಕದಂಬ ಜಿಲ್ಲೆ ಆಗುವತನಕ ಮುಂದುವರಿಯುತ್ತದೆ. ಜನಪ್ರತಿನಿಧಿಗಳು ತಮ್ಮ ನಿಷ್ಕಾಳಜಿಯನ್ನು ತೊರೆದು ಈ ಬಗ್ಗೆ ಗಮನ ಹರಿಸಲಿ. ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡಬೇಕು ಎಂದು ಕೋರಿಕೊಂಡರು.

ಹೋರಾಟ ಸಮಿತಿ ಗೌರವಾಧ್ಯಕ್ಷ ಬಸವರಾಜ ಓಶಿಮಠ ಮಾತನಾಡಿ ನಾವು ಜಿಲ್ಲೆಯನ್ನು ತುಂಡು ಮಾಡಿ ಅನ್ನುತ್ತಿಲ್ಲ. ಘಟ್ಟದ ಮೇಲಿನ ತಾಲೂಕುಗಳ ಜನರ ಅನುಕೂಲಕ್ಕಾಗಿ ಪ್ರತ್ಯೇಕ ಜಿಲ್ಲೆಯ ಬೇಡಿಕೆ ಇಡುತ್ತಿದ್ದೇವೆ. ಜಿಲ್ಲೆ ಬೇರೆಯಾದರೂ ಪರಸ್ಪರ ಸಂಬಂಧ,ಸಹಕಾರ ಎಂದಿನಂತೇ ಇರುತ್ತದೆ. ಸೀಬರ್ಡ, ಅಣುಸ್ಥಾವರ ಮುಂತಾಗಿ ಬೃಹತ್ ಯೋಜನೆಗಳು ಇರುವ ಕಾರವಾರದ ಬದಲಾವಣೆ ಮುಂದೆ ಆಗುತ್ತದೆ. ಈ ಜನಾಂದೋಲನ ಮತ್ತಷ್ಟು ತೀವ್ರಗೊಳ್ಳಬೇಕಿದ್ದು ೭ ತಾಲೂಕುಗಳಲ್ಲೂ ಹಮ್ಮಿಕೊಳ್ಳಲಾಗುವದು ಎಂದರು.
ಪ್ರಧಾನ ಕಾರ್ಯದರ್ಶಿ ಎಂ.ಎಂ.ಭಟ್ಟ ಶಿರಸಿ ಮಾತನಾಡಿ ಪ್ರತ್ಯೇಕ ಜಿಲ್ಲೆಯ ಕೂಗು ೪೦ ವರ್ಷಗಳ ಹಿಂದಿನಿಂದ ಇದ್ದರೂ ಅದಕ್ಕೆ ಮನ್ನಣೆ ದೊರಕಿಲ್ಲ. ಘಟ್ಟದ ಮೇಲಿನ ತಾಲೂಕುಗಳಲ್ಲಿ ಜನಾಂದೋಲನದ ಮೂಲಕ ಹಕ್ಕೊತ್ತಾಯವನ್ನು ಮುಖ್ಯಮಂತ್ರಿಗಳ ಬಳಿ ಮಂಡಿಸಬೇಕಿದೆ. ನವೆಂಬರ್ ೧ರಂದು ಪ್ರತ್ಯೇಕ ಜಿಲ್ಲೆಯ ಘೋಷಣೆ ಆಗಬೇಕು ಎಂದರು.
ಸಾಮಾಜಿಕ ಧುರೀಣರಾದ ವೀರಭದ್ರ ನಾಯ್ಕ, ಕೆರಿಯಪ್ಪ ನಾಯ್ಕ ಅನಿಸಿಕೆ ವ್ಯಕ್ತಪಡಿಸಿದರು. ಧುರೀಣರಾದ ಆಕಾಶ ಕೊಂಡ್ಲಿ, ರಾಘವೇಂದ್ರ ನಾಯ್ಕ,ಹರೀಶ ಗೌಡರ, ಎ.ಜೆ.ನಾಯ್ಕ, ಎಂ.ಎನ್.ನಾಯ್ಕ, ವಾಸುದೇವ ಶೇಟ್,ಪ್ರಶಾಂತ ಶೇಟ್ ಮುಂತಾದವರಿದ್ದರು.
ಹೋರಾಟ ಸಮಿತಿ ತಾಲೂಕಾಧ್ಯಕ್ಷ ಸಿ.ಎಸ್.ಗೌಡರ್ ಸ್ವಾಗತಿಸಿದರು. ವಕೀಲರಾದ ಪಿ.ಬಿ.ಹೊಸೂರ ವಂದಿಸಿದರು.
ಸಿದ್ದಾಪುರ; ತಾಲೂಕಿನ ಕೋಲಶಿರ್ಸಿಯ ಸ.ಹಿ.ಪ್ರಾ.ಶಾಲೆಯ ಆವರಣದಲ್ಲಿ ಬಿದ್ರಕಾನ ಹಾಗೂ ಹಾರ್ಸಿಕಟ್ಟಾ ಸಮೂಹ ಸಂಪನ್ಮೂಲ ಕೇಂದ್ರಗಳ ಹಾರ್ಸಿಕಟ್ಟಾ ವಲಯದ ೨೦೨೨–೨೩ ನೇ ಸಾಲಿನ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟವು ನಡೆಯಿತು.
ಕ್ರೀಡಾಕೂಟವನ್ನು ಗ್ರಾಮ ಪಂಚಾಯತ ಉಪಾಧ್ಯಕ್ಷ ಕೆ.ಆರ್.ವಿನಾಯಕ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಕುಮಾರ ನಾಯ್ಕ ವಹಿಸಿದ್ದರು. ಕ್ರೀಡಾ ಧ್ವಜಾರೋಹಣವನ್ನು ತಾಲೂಕು ದೈಹಿಕ ಪರಿವೀಕ್ಷಕ ರಾಜು ನಾಯ್ಕ ನೆರವೇರಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪ್ರಾ. ಶಾ. ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ್ ಹೆಗಡೆ, ಉಪಾಧ್ಯಕ್ಷ ನಾಗರಾಜ ಮಡಿವಾಳ, ಸಂಘಟನಾ ಕಾರ್ಯದರ್ಶಿ ನಮ್ರತಾ ಪೈ, ಜಿಲ್ಲಾ ಶಿಕ್ಷಕ ಸಂಘದ ಸಂಘಟನಾ ಕಾರ್ಯದರ್ಶಿ ನಾಗರಾಜ ನಾಯ್ಕ, ಪತ್ರಕರ್ತರ ನಾಗರಾಜ ನಾಯ್ಕ ಮಾಳ್ಕೋಡ, ಸಿ.ಆರ್.ಪಿ ವಿಶ್ವನಾಥ್ ಕೆ.ಬಿ, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ದಿವ್ಯಾ ನಾಯ್ಕ, ಸದಸ್ಯರುಗಳಾದ ಮಹೇಶ ನಾಯ್ಕ, ನಾಗರಾಜ ನಾಯ್ಕ ಸುಂಠಿ, ಅಣ್ಣಪ್ಪ ನಾಯ್ಕ ಪರಶುರಾಮ ನಾಯ್ಕ, ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಉಪಸ್ಥಿತರಿದ್ದರು.


ಮಾರಿಕಾಂಬಾ ದೇವಾಲಯದಿಂದ ಕ್ರೀಡಾಜ್ಯೋತಿಯನ್ನು ತರಲಾಯಿತು.ಈ ವೇಳೆ ನಿರ್ಣಾಯಕರಾಗಿ ಆಗಮಿಸಿದ ದೈಹಿಕ ಶಿಕ್ಷಕರಿಗೆ ಸನ್ಮಾನಿಸಲಾಯಿತು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಾಲಾ ಕ್ರೀಡಾ ಪ್ರತಿನಿಧಿ ನಿಶಾ ನಾಯ್ಕ ಪ್ರತಿಜ್ಞಾವಿಧಿ ಬೋಧಿಸಿದರು. ಸಿ.ಆರ್.ಪಿ ಶೋಭಾ ಡಿ.ಸಿ ಸ್ವಾಗತಿಸಿದರು. ಸಹ ಶಿಕ್ಷಕರಾದ ನಾಗರಾಜ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.ಮುಖ್ಯ ಶಿಕ್ಷಕಿ ಸುಮನಾ ಶೇಟ್ ವಂದಿಸಿದರು.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
