



ಸಿದ್ಧಾಪುರದ ಶಿವಕುಮಾರ್ ಹಿರೇಮಠ ವಿಭಿನ್ನ,ವಿಶೇಶ ಗಣಪತಿಗಳನ್ನು ಮಾಡುವಲ್ಲಿ ಸಿದ್ಧಹಸ್ತರು. ಪ್ರತಿವರ್ಷ ವಿಶಿಷ್ಟ ಹೇರಂಬನನ್ನು ಸಿದ್ಧಪಡಿಸುವ ಕಲಾವಿದ ಶಿವಕುಮಾರ್ ಹಿರೇಮಠ ಈ ವರ್ಷ ಏಕದಂತನನ್ನು ಹೊತ್ತು ಬರುವ ಪುನೀತ್ ರನ್ನು ಸೃಷ್ಟಿಸಿದ್ದಾರೆ.
ಕೊಂಡ್ಲಿಯ ಜಯಂ ಗಣೇಶೋತ್ಸವ ಸಮೀತಿಗೆ ಖಾಯಂ ಆಗಿ ಗಜಮುಖನನ್ನು ಮಾಡಿಕೊಡುವ ಶಿವು ಈ ವರ್ಷ ಕೂಡಾ ತಮ್ಮ ವಿಭಿನ್ನತೆಯಿಂದ ಸಾರ್ವಜನಿಕರ ಗಮನ ಸೆಳೆದಿದ್ದಾರೆ. ಅಪ್ಪ ಎತ್ತಿಕೊಂಡು ಬರುವ ಗಣೇಶ ಕಸ್ತೂರಿ ನಿವಾಸದ ಸೆಟ್ಟಿಂಗ್ ನಲ್ಲಿ ಕಂಗೊಳಿಸಲಿದ್ದಾನೆ ಎನ್ನಲಾಗಿದೆ.

