


ಪುನೀತ್ ರಾಜ್ಕುಮಾರ ಬದುಕಿದ್ದ ದಿನಗಳಿಗಿಂತ ಅವರ ನಿಧನದ ನಂತರವೇ ಹೆಚ್ಚು ಪ್ರಸಿದ್ಧರಾಗಿದ್ದು. ಕನ್ನಡ ಚಿತ್ರರಂಗದ ನಾಯಕ ನಟರಾಗಿ ಹೆಸರುಮಾಡಿದ್ದ ಪುನೀತ್ ಕಲಿಯುಗದ ಕರ್ಣನಾಗಿ ಬದುಕಿದ್ದ ಬಗ್ಗೆ ಅವರ ಸಾವಿನ ನಂತರ ಸಾರ್ವಜನಿಕರಿಗೆ ತಿಳಿಯುವಂತಾಯಿತು. ಅಪ್ಪು ಎಂದು ಪ್ರಸಿದ್ಧರಾಗಿದ್ದ ಪುನೀತ್ ರಾಜ್ ಕುಮಾರ ಮಾಡಿದ ಸಾಮಾಜಿಕ ಕೆಲಸಗಳು, ದಾನ-ಧರ್ಮಗಳು ಅಪಾರ. ಅವರ ನಿಧನದ ನಂತರ ಪ್ರಸಿದ್ಧವಾದ ಹಾಗೂ ಪ್ರಚಾರಕ್ಕೂ ಬಂದ ಅವರ ಸಮಾಜಮುಖಿ ವ್ಯಕ್ತಿತ್ವ ಅವರನ್ನು ದೇವರಾಗಿದೆಯೆಂದರೆ ಉತ್ಫ್ರೇಕ್ಷೆಯಲ್ಲ.
https://www.youtube.com/watch?v=CHeSbZofTzg
ಈ ಪುನೀತ್ ರಾಜ್ ಕುಮಾರ ಈಗ ಗೌರಿ ಗಣೇಶ ಹಬ್ಬದಲ್ಲಿ ಮತ್ತೆ ಪ್ರಸಿದ್ಧಿಗೆ ಬಂದಿದ್ದಾರೆ. ಬೆಂಗಳೂರಿನಿಂದ ಪ್ರಾರಂಭವಾಗಿ ಗೋವಾ ಗಡಿಯ ವರೆಗೆ ಈ ವರ್ಷದ ಗಣೇಶ ಚತುರ್ಥಿಯಲ್ಲಿ ಗಣಪತಿಯ ಜೊತೆಗೆ ದೇವರಾದವರು ಪುನೀತ್ ರಾಜ್ ಕುಮಾರ್. ರಾಜ್ಯದ ಬಹುತೇಕ ಕಡೆ ಪುನೀತ್ ರಾಜ್ ಕುಮಾರ ಜೊತೆಗಿರುವ ಅಪ್ಪು ಮೂರ್ತಿಗೆ ಹೆಚ್ಚಿನ ಬೇಡಿಕೆಯಂತೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡ್ಮೂರು ವರ್ಷಗಳಿಂದ ಕೋವಿಡ್ ಕಾರಣದಿಂದ ಸಪ್ಪೆಯಾಗಿದ್ದ ಗಣೇಶ್ ಚತುರ್ಥಿ ಗೌರಿ ಹಬ್ಬ ಈ ವರ್ಷ ಹುರುಪಿನಿಂದ ನಡೆಯುತ್ತಿದೆ.
ಸಿದ್ಧಾಪುರದ ಕಲಾವಿದ ಶಿವಕುಮಾರ್ ಗೌರಿ ಗಣೇಶ ಹಬ್ಬಕ್ಕೆ ವಿಶಿಷ್ಟ ಪ್ರತಿಕೃತಿಗಳನ್ನು ಮಾಡುವ ನುರಿತ ಕಲಾವಿದ. ಪುನೀತ್ ರಾಜ್ ಕುಮಾರ ಅಭಿಮಾನಿಯಾಗಿರುವ ಶಿವಕುಮಾರ ಈ ಬಾರಿ ಗಣೇಶನನ್ನು ಹೊತ್ತು ತರುತ್ತಿರುವ ಪುನೀತ್ ರಾಜ್ ಕುಮಾರ ಪ್ರತಿಕೃತಿ ಮಾಡಿ ಸಾರ್ವಜನಿಕರ ಗಮನ ಸೆಳೆದಿದ್ದಾರೆ.


ಗಣೇಶನ ಜೊತೆಗೆ ಪುನೀತ್ ರಾಜ್ ಕುಮಾರ ಮೂರ್ತಿ ಇಟ್ಟು ಅಪ್ಪುಚತುರ್ಥಿ ಮಾಡುತ್ತಿರುವ ಅಭಿಮಾನಿಗಳಂತೆ ಇವರ ಪುನೀತ್ ಕೃತಿ ಆಸಕ್ತಿಯ ಪ್ರತಿಮೆಯಾಗುತ್ತಿದೆ.ಕೊಂಡ್ಲಿಯ ಜಯಂ ಗಣೇಶೋತ್ಸವ ಸಮೀತಿಗೆ ನಿರ್ಮಿಸಿ ಕೊಟ್ಟಿರುವ ಪುನೀತ್ ಪ್ರತಿಮೆ ಅಲ್ಲಿ ಕಸ್ತೂರಿ ನಿವಾಸ ಸೆಟ್ ನಲ್ಲಿ ರಾರಾಜಿಸಲಿದೆಯಂತೆ. ಕನ್ನಡದ ಕೊಟ್ಯಾಂತರ ಜನರ ಮನಗೆದ್ದ ಪುನೀತ್ ಈ ಬಾರಿ ಗಣೇಶ್ ಚತುರ್ಥಿಯಲ್ಲಿ ಅಪ್ಪು ಚತುರ್ಥಿಯಾಗಲು ಕಾರಣರಾಗಿದ್ದಾರೆ.
ಬೆಟ್ಟದ ಹೂವಿನಿಂದ ಹಿಡಿದು ಇತ್ತೀಚಿನ ಅಂದರೆ ಪುನೀತ್ ರ ಕೊನೆಯ ಚಿತ್ರದ ವರೆಗೂ ಅವರ ಚಿತ್ರಗಳು ಬೀರುತಿದ್ದ ಸಾಮಾಜಿಕ ಪರಿಣಾಮಗಳ ಹಿನ್ನಲೆಯಲ್ಲಿ ಅವರ ಅಭಿಮಾನಿಯಾಗಿರುವ ತಮಗೆ ಪುನೀತ್ ಎತ್ತರದಷ್ಟೇ ೫.೯ ಅಡಿ ಎತ್ತರದ ಅಪ್ಪು ಮೂರ್ತಿ ಜೊತೆ ಗಣೇಶನ ಪ್ರತಿಕೃತಿ ಮಾಡಲು ಸಿಕ್ಕ ಅವಕಾಶವೇ ತಮಗೆ ಪ್ರೀತಿಯ ಗೌರವ ಎನ್ನುವ ಶಿವಕುಮಾರ್ ಪುನೀತ್ ಪ್ರತಿಮೆ ಮಾಡಿ ಅಪ್ಪು ಚತುರ್ಥಿ ಆಚರಿಸುವ ಅವಕಾಶ ಸಿಕ್ಕಿದ್ದು ಖುಷಿಯ ಸಂಗತಿ ಎನ್ನುತ್ತಾರೆ.

