

ಸಿಹಿಸುದ್ದಿ ಕೊಟ್ಟ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ; ಕೊನೆಗೂ ಎಂಟ್ರಿಕೊಡಲಿರುವ ಎವರ್‌ಗ್ರೀನ್ ಬ್ಯೂಟಿ!
ನಾಳೆ ಖುಷಿಯ ವಿಚಾರವೊಂದನ್ನು ತಿಳಿಸುವೆ ಎಂದು ಅಭಿಮಾನಿಗಳ ಹುಚ್ಚಿಗೆ ಕಿಚ್ಚು ಹಚ್ಚಿದ್ದ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಇದೀಗ ನಿಜವಾಗಿಯೂ ಸಿಹಿಸುದ್ದಿಯನ್ನು ನೀಡಿದ್ದಾರೆ. ಈ ಬಗ್ಗೆ ರಮ್ಯಾ, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮುಂಬರುವ ಯೋಜನೆಗಳನ್ನು ಹಂಚಿಕೊಂಡಿದ್ದು, ಪ್ರೀತಿಯ ಅಭಿಮಾನಿಗಳಿಗೆ ವಂದನೆಗಳನ್ನು ಸಲ್ಲಿಸಿದ್ದಾರೆ.

ಬೆಂಗಳೂರು: ನಾಳೆ ಖುಷಿಯ ವಿಚಾರವೊಂದನ್ನು ತಿಳಿಸುವೆ ಎಂದು ಅಭಿಮಾನಿಗಳ ಹುಚ್ಚಿಗೆ ಕಿಚ್ಚು ಹಚ್ಚಿದ್ದ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಇದೀಗ ನಿಜವಾಗಿಯೂ ಸಿಹಿಸುದ್ದಿಯನ್ನು ನೀಡಿದ್ದಾರೆ. ಈ ಬಗ್ಗೆ ರಮ್ಯಾ, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮುಂಬರುವ ಯೋಜನೆಗಳನ್ನು ಹಂಚಿಕೊಂಡಿದ್ದು, ಪ್ರೀತಿಯ ಅಭಿಮಾನಿಗಳಿಗೆ ವಂದನೆಗಳನ್ನು ಸಲ್ಲಿಸಿದ್ದಾರೆ.
ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. ‘ಸಿಹಿ ಸುದ್ದಿ’ಯ ಕುರಿತು ನಿಮ್ಮೆಲ್ಲರ ಊಹೆ ಸರಿಯಾಗಿದೆ. ಹೌದು, ನಾನು ಮತ್ತೆ ಚಿತ್ರರಂಗಕ್ಕೆ ಹಿಂತಿರುಗುತ್ತಿದ್ದೇನೆ. ಆದರೆ ಈ ಬಾರಿ ನನ್ನ ನಿರ್ಮಾಣ ಸಂಸ್ಥೆ ‘ಆಪಲ್ ಬಾಕ್ಸ್ ಸ್ಟೂಡಿಯೋಸ್’ ಮೂಲಕ ನಿರ್ಮಾಪಕಿಯಾಗಲಿದ್ದೇನೆ ಎನ್ನುವುದು ವಿಶೇಷ ಎಂದು ರಮ್ಯಾ ತಮ್ಮ ಪತ್ರದಲ್ಲಿ ಬರೆದಿದ್ದಾರೆ. (kpc)
