

ಮನುಷ್ಯ ಬದುಕು ಬಲು ಸಹಜ, ಮ.ಮ. ದ ನಾಯಿಗುತ್ತಿಯೂ ಬದುಕುತ್ತಾನೆ, ಕರ್ವಾಲೋದ ಮಂದಣ್ಣನೂ ಬದುಕುತ್ತಾನೆ! ಸಹಜ, ಸರಳವಾಗಿ ಬದುಕುವ ಪ್ರಸನ್ನ, ಸೀತಾರಾಮ ಕುರವರಿ, ಗಾಂಧಿ ಸೇರಿದಂತೆ ಅನೇಕರ ಬದುಕಿನ ಅರ್ಥವೇ ಸರಳತೆ, ಸಹಜತೆ. ಇಂಥ ಸರಳ, ಸಾವಯವ ಬದುಕಿನ ಬಗ್ಗೆ ಯೋಚಿಸುತ್ತಾ ಒಂದು ಸಿಂಪಲ್ ಟಿಪ್ ಹೇಳುವುದು ಈ ಫಿಲಾಸಫಿಯ ಉದ್ದೇಶ.


ಹುಲುಮಾನವರು ಗಾಂಧಿ ಆಗಲು ಸಾಧ್ಯ ವಿಲ್ಲ. ಹಾಗಾಗಿ ಚಿಕ್ಕ ಜಾಗದಲ್ಲಿ ಸುಂದರ ಉದ್ಯಾವನ ನಿರ್ಮಿಸಿದಂತೆ ಪ್ರತಿಯೊಬ್ಬರು ತಮ್ಮ ಮಿತಿಯ ಜೀವನವನ್ನು ಅರ್ಥಪೂರ್ಣವಾಗಿ ಕಳೆಯುವುದರಲ್ಲಿ ಅರ್ಥವಿದೆ,ಸೊಗಸಿದೆ.
ಕುಡುಕರು ಕುಡಿಯುವಾಗ ತಿಂದುಂಡು ಮಜಬೂತಾಗಿ ಬದುಕಬೇಕೆಂದು ಹೆಚ್ಚು ಕುಡಿಯುತ್ತಾ, ಹೆಚ್ಚು ತಿನ್ನುತ್ತಾ ರೋಗಗೃಸ್ಥರಾಗುತ್ತಾರೆ. ಹೆಚ್ಚು ಕುಡಿಯುವವರು ಹೆಚ್ಚು ತಿನ್ನಬೇಕೆಂಬುದು ಅವರ ಅಪನಂಬಿಕೆ ಕೂಡಾ. ಹಿರಿಕಿರಿಯ ಮಹಾನ್.ಸಭ್ಯ ಕುಡುಕರಿಗೆ ನನ್ನ ಎಡವೈಸ್ ಏನೆಂದರೆ… ಕುಡಿಯಿರಿ ನಿಯಮಿತವಾಗಿ, ತಿನ್ನಿರಿ ಮಿತವಾಗಿ ಲೈಫ್ ಜಿಂಗಾಲಾಲ ಆಗುತ್ತೆ.
ಮನುಷ್ಯ ಸಹಜ ಬದುಕಿಗೆ ಅತಿ ಕುಡಿತ, ಅತಿ ದುಡಿತ,ವಿಪರೀತ ಆಹಾರ ವರ್ಜ್ಯ. ನಾವು ಬದುಕಿದ್ದರೆ ತಾನೆ? ಕನಸು, ಸಾಧನೆ, ತೃಪ್ತಿ, ಸನ್ಮಾನ, ಪುರಸ್ಕಾರ,ಇತ್ಯಾದಿ… ಹಾಗಾಗಿ ಮಿತಿಯಲ್ಲಿ ಬದುಕೋಣ, ಮಿತವಾಗಿ ಜೀವಿಸೋಣ, ಆಯುಷ್ಯ ೫೦ ರಿಂದ ೯೦ ರ ಒಳಗೆ ನೂರು ವರ್ಷ ಬದುಕಿದರೂ ಗೋಳೆ. ಶುಭವಾಗಲಿ. ಈ ಫಿಲಾಸಫಿ ಕರ್ಚು-ವೆಚ್ಚಕ್ಕೂ ಅನ್ವಯಿಸುತ್ತೆ.
