ಉತ್ತರ ಕನ್ನಡ ಜಿಲ್ಲೆಯಲ್ಲಿ ಬಹುತೇಕ ತಾಲೂಕುಗಳಲ್ಲಿ ತಾಲೂಕಾ ಕ್ರೀಡಾಂಗಣಗಳಿಲ್ಲ,ಇಲ್ಲಿಯ ಶಾಸಕರು,ಸಚಿವರು,ವಿಧಾನಸಭಾ ಸ್ಫೀಕರ್ ಗಳಿಗೆ ಕ್ರೀಡಾಭಿರುಚಿ ಇಲ್ಲ, ಗ್ರಾಮೀಣ ಜನರಿಗೆ ಅವಶ್ಯ ರಸ್ತೆ, ಗ್ರಾಮೀಣ ಕ್ರೀಡಾಪಟುಗಳಿಗೆ ಬೇಕಾದ ಕ್ರೀಡಾ ಸಂರಚನೆ ಪೂರೈಸದ ಆಡಳಿತ ವ್ಯವಸ್ಥೆಯಿಂದಾಗಿ ಇಲ್ಲಿಯ ಕ್ರೀಡಾಕ್ಷೇತ್ರ ಸೊರಗುತ್ತಿದೆ. -ಶ್ರೀನಿವಾಸ ಜಿಡ್ಡಿ (ಡಿ.ಸಿ.ಸಿ.ಸದಸ್ಯ)
ಪ್ರತಿವರ್ಷದಂತೆ ಈ ವರ್ಷ ಕೂಡಾ ದಸರಾ ಕ್ರೀಡಾ ಕೂಟ ನಡೆಯುತ್ತಿದೆ. ಸರ್ಕಾರ ಯುವಜನಸೇವೆ ಮತ್ತು ಕ್ರೀಡಾ ಇಲಾಖೆಯಿಂದ ನಡೆಸುವ ಈ ಕ್ರೀಡಾಕೂಟ ಹಲವು ಕೋನಗಳಿಂದ ಮಹತ್ವದ್ದು, ದಸರಾ ಕ್ರೀಡಾ ಕೂಟದಲ್ಲಿ ತರಬೇತಿ ಪಡೆದ ನಗರದ ಕ್ರೀಡಾಪಟುಗಳಿಗಿಂತ ಗ್ರಾಮೀಣ ಪ್ರದೇಶದ ಕ್ರೀಡಾಳುಗಳೇ ಹೆಚ್ಚು ಪಾಲ್ಗೊಳ್ಳುತ್ತಾರೆ. ಇಂಥ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವವರು ಹೆಚ್ಚಿನವರುಕೃಷಿ ಮತ್ತು ಕೃಷಿ ಸಂಬಂಧಿತ ವೃತ್ತಿಗಳ ಜನ ಎನ್ನುವುದು ವಿಶೇಶ.
ಪ್ರತಿವರ್ಷ ಮಳೆಗಾಲದ ಅವಧಿಯಲ್ಲಿ ಮೈಸೂರು ದಸರಾಕ್ಕಿಂತ ಮೊದಲು ರಾಜ್ಯದಾದ್ಯಂತ ನಡೆಯುವ ಈ ಗ್ರಾಮೀಣ ಕ್ರೀಡಾಕೂಟ ಈ ವರ್ಷ ಕೂಡಾ ಮಳೆಯ ರಗಳೆಯ ನಡುವೆ ಪ್ರತಿ ತಾಲೂಕು ಕೇಂದ್ರ, ಜಿಲ್ಲಾಕೇಂದ್ರಗಳಲ್ಲಿ ನಡೆಯುತ್ತಿದೆ. ಬಹುಆಸಕ್ತಿ,ವಿಶೇ ಶ ಶ್ರಮದಿಂದ ಸಾಂಪ್ರದಾಯಿಕ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಗ್ರಾಮೀಣ ಜನರು ಈ ಕ್ರೀಡಾಕೂಟದ ಸೌಲಭ್ಯಗಳು,ಅನುಕೂಲತೆಗಳ ಕೊರತೆಯ ಬಗ್ಗೆಯೇ ಮಾತನಾಡುತ್ತಾರೆ.
ದಸರಾ ಕ್ರೀಡಾಕೂಟದ ಜೀವನಾಡಿಗಳಾದ ಕ್ರೀಡಾಪಟುಗಳಿಗೆ ವ್ಯವಸ್ಥಿತ ಮೈದಾನ, ತರಬೇತಿ ಇಲ್ಲದಿರುವುದುಬಹುಮುಖ್ಯ ಕೊರತೆ. ರಾಜ್ಯದ ಬಹತೇಕ ಜಿಲ್ಲೆಗಳ ಕೊರತೆಯಂತೆ ಉತ್ತರ ಕನ್ನಡದಲ್ಲಿ ಇರುವ ೧೨ ತಾಲೂಕುಗಳಲ್ಲಿ ಅರ್ಧಕ್ಕಿಂತ ಹೆಚ್ಚು ತಾಲೂಕುಗಳಲ್ಲಿ ತಾಲೂಕಾ ಕ್ರೀಡಾಂಗಣಗಳೇ ಇಲ್ಲ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯಂತೂ ವರ್ಷಕ್ಕೊಂದಾವರ್ತಿ ಎಚ್ಚೆತ್ತುಕೊಳ್ಳುವುದು ಬಿಟ್ಟರೆ ಉಳಿದ ಸಮಯದಲ್ಲಿ ಗಾಢನಿದ್ರೆಯಲ್ಲಿರುವಂತೆ ನಟಿಸುತ್ತದೆ. ಈ ತೊಂದರೆ, ಅನಾನುಕೂಲತೆ,ಉತ್ತೇಜನಗಳ ಕೊರತೆ ಮಧ್ಯೆ ದಸರಾ ಕ್ರೀಡಾಕೂಟಗಳಲ್ಲಿ ಗ್ರಾಮೀಣ ಯುವಕರು ಪಾಲ್ಗೊಂಡು ಸಾಂಪ್ರದಾಯಿಕ ಕ್ರೀಡೆಗಳನ್ನು ಉಳಿಸುತಿದ್ದಾರೆ.
ತರಬೇತಿ, ತಯಾರಿಗಳಿಲ್ಲದ ಕ್ರೀಡಾಸಕ್ತರು ವೈಯಕ್ತಿಕ ಮತ್ತು ಗುಂಪು ಆಟಗಳಲ್ಲಿ ಪಾಲ್ಗೊಂಡು ಗಮನಸೆಳೆಯುತ್ತಿರುವುದು ಈ ಕ್ರೀಡಾಕೂಟದ ವಿಶೇಶ. ಜನಪ್ರತಿನಿಧಿಗಳು,ಕ್ರೀಡಾಸಕ್ತರು ಮುತುವರ್ಜಿಯಿಂದ ದಸರಾಕ್ರೀಡಾಕೂಟ ಉತ್ತೇಜಿಸಿದರೆ ಇದರ ಪ್ರತಿಫಲ ಯುಜನರಿಗೆ ಸಿಗುತ್ತದೆ ಎನ್ನುವ ಆಶಯ,ಬೇಡಿಕೆ ಕ್ರೀಡಾಸಕ್ತರದ್ದು
ಸಿದ್ದಾಪುರ:- ಇಂದು ಕ್ರೀಡೆಯಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ಸೂಕ್ತ ರೀತಿಯಲ್ಲಿ ತರಬೇತಿ ದೊರೆತಲ್ಲಿ ಹೆಚ್ಚಿನ ಆಸಕ್ತಿಯಿಂದ ಯುವಕರು ಕ್ರೀಡೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ ಎಂದು ಕೋಲಶಿರ್ಸಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ವಿನಾಯಕ ಕೆ ಆರ್ ಹೇಳಿದರು.
ಅವರು ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹಾಗೂ ತಾಲೂಕು ಯುವ ಒಕ್ಕೂಟಗಳ ಸಹಯೋಗದಲ್ಲಿ ಆಯೋಜನೆಗೊಂಡಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಯುವ ಒಕ್ಕೂಟದ ಅಧ್ಯಕ್ಷ ಅಣ್ಣಪ್ಪ ನಾಯ್ಕ, ಸರಕಾರದಿಂದ ಕ್ರೀಡೆಗೆ ಉತ್ತೇಜನ ಕಡಿಮೆಯಾಗಿದೆ.
ಇಂತಹ ಕ್ರೀಡಾ ಕೂಟಗಳಿಂದ ಅಧಿಕಾರಿಗಳಿಗೆ ಕೆಲಸ ಕೊಡುವುದು ಮಾತ್ರ ವಾಗುತ್ತಿದೆ. ಇಷ್ಟು ದಿನಗಳ ಕಳೆದರು
ತಾಲೂಕಿನಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ವಾಗದಿರುವುದು ಬೇಸರದ ಸಂಗತಿ. ಕೂಡಲೇ ಶಾಸಕರು ಮುತುವರ್ಜಿಯಿಂದ ಕ್ರೀಡಾಂಗಣ ನಿರ್ಮಿಸಲು ಆಸಕ್ತಿ ವಹಿಸಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ಮಾತನಾಡಿ ಇದು ಗ್ರಾಮೀಣ ಪ್ರತಿಭೆಗಳಿಗೆ ಇರುವ ಉತ್ತಮ ಅವಕಾಶ. ಆದರೆ ಇಂದು ಕೇವಲ ವಿದ್ಯಾರ್ಥಿಗಳು ಮಾತ್ರ ಭಾಗವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಜನತೆ ಭಾಗವಹಿಸಬೇಕು ಎಂದರು.
ಪತ್ರಕರ್ತ ಸುರೇಶ ಮಡಿವಾಳ ಕಡಕೇರಿ
ದೈಹಿಕ ಶಿಕ್ಷಕ ಪರಿವೀಕ್ಷಕ ರಾಜು ನಾಯ್ಕ ಉಪಸ್ಥಿತರಿದ್ದರು.
ಪ್ರೀತಿ ಮತ್ತು ತೃಪ್ತಿ ನಾಯ್ಕ ಪ್ರಾರ್ಥಿಸಿದರು.
ದೈಹಿಕ ಸಂಯೋಜಕ ಶಿಕ್ಷಕ ಮಾಧವ ನಾಯ್ಕ ಸ್ವಾಗತಿಸಿದರು.
ದೈಹಿಕ ಶಿಕ್ಷಕ ಶ್ರೀಕಾಂತ ಬೂದಿಹಾಳ ನಿರೂಪಿಸಿದರು.
ಶಿಕ್ಷಕ ಟಿ ಬಿ ಗೌಡ ವಂದಿಸಿದರು.