

ಆಶಾ ಎಸ್ . ಬರೆಯುತ್ತಾರೆ….

ಪ್ರೀತಿಯಲ್ಲಿರುವುದು ಮನಸ್ಸಿಗೆ ಖುಷಿ ನೀಡುತ್ತದೆ ನಿಜ. ಆದರೆ ಅದನ್ನು ಸರಿಯಾಗಿ ನಿಭಾಯಿಸಲು ಸಹ ಬರಬೇಕು. ಇಲ್ಲದಿದ್ದರೆ ಸಂಬಂಧಗಳಲ್ಲಿ ಭಿನ್ನಾಭಿಪ್ರಾಯ ಮೂಡಿ ಬ್ರೇಕಪ್ ಆಗುವುದು ಸುಲಭ. ನಿಮ್ಮ ಸಂಗಾತಿ ಎಷ್ಟೇ ಒಳ್ಳೆಯವರಾದರೂ, ಕೆಲವೊಮ್ಮೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಬಹುದು. ಸಾಮಾಜಿಕ ಜಾಲತಾಣ ಮತ್ತು ಡೇಟಿಂಗ್ ಅಪ್ಲಿಕೇಶನ್‌ಗಳ ಈ ಯುಗದಲ್ಲಿ, ಪ್ರೀತಿ ಮತ್ತು ಸಂಗಾತಿಯ ವ್ಯಾಖ್ಯಾನ ಸಂಪೂರ್ಣವಾಗಿ ಬದಲಾಗಿದೆ. ಆದರೆ ಇದರ ಮಧ್ಯೆಯೂ ಅನೇಕರು ಸಂಗಾತಿಯನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಾರೆ. ಆದ್ರೆ ಇನ್ನು ಕೆಲವೊಂದು ಪ್ರೀತಿಯಲ್ಲಿ ಆರಂಭ ಚೆನ್ನಾಗಿದ್ದರೂ ಮುಕ್ತಾಯ ವಿಷಾದನೀಯವಾಗಿರುತ್ತದೆ. ಹೀಗೆ ಆಗಬಾರದು ಅಂದ್ರೆ ಹುಡುಗ-ಹುಡುಗಿ ಇಬ್ಬರೂ ಒಬ್ಬರೊನ್ನಬ್ಬರು ಪರಸ್ಪರ ಅರ್ಥ ಮಾಡಿಕೊಳ್ಳಬೇಕು. ಅದ್ರಲ್ಲೂ ನಿರ್ಧಿಷ್ಟವಾಗಿ ಕೆಲವೊಂದು ವಿಷ್ಯಗಳನ್ನು ಮಾಡ್ಕೊಳ್ಳೋದ್ರಿಂದ ಹುಡುಗರು ಬೇಗ ಸಿಟ್ಟಾಗ್ತಾರೆ.
ಕೆಟ್ಟ ಕೆಟ್ಟದಾಗಿ ಮಾತಾಡ್ಬೇಡಿ: ಪ್ರೀತಿಯಲ್ಲಿದ್ದಾಗ ಸಂಗಾತಿಯೊಂದಿಗೆ ನಾವು ಹೆಚ್ಚು ಸಲುಗೆಯಿಂದ ಇರಬಹುದು ನಿಜ. ಆದರೆ ಮನಸ್ಸಿಗೆ ಬೇಸರವನ್ನುಂಟು ಮಾಡುವ ಪದಗಳನ್ನು ಬಳಸುವುದು ಸರಿಯಲ್ಲ. ಕೆಲವೊಬ್ಬರು ಸಿಟ್ಟಿನಿಂದ ಹುಚ್ಚ, ಮೂರ್ಖ ಮೊದಲಾದ ಪದಗಳನ್ನು ಬಳಸಲು ಆರಂಭಿಸುತ್ತಾರೆ. ಇದು ಇಬ್ಬರ ನಡುವಿನ ಸಂಬಂಧವನ್ನೇ ಹಾಳು ಮಾಡಬಹುದು.
ಆಂಗ್ರಿಬರ್ಡ್ ಇಷ್ಟವಾಗಲ್ಲ: ಮನುಷ್ಯನಲ್ಲಿ ಕೋಪಗೊಳ್ಳುವ ಗುಣ ಸಾಮಾನ್ಯ. ಆದ್ರೆ ಕೆಲವೊಮ್ಮೆ ಕೋಪವನ್ನು ನಿಯಂತ್ರಿಸಿಕೊಳ್ಳದಿದ್ದರೆ ಅನಾಹುತವಾದೀತು. ಅದರಲ್ಲೂ ಸಂಬಂಧಕ್ಕೆ ಬಂದ ನಂತರವೂ ನಿಮ್ಮ ಮನಸ್ಥಿತಿಯನ್ನು ನಿಯಂತ್ರಿಸಲು ನಿಮಗೆ ಸಾಧ್ಯವಾಗದಿದ್ದರೆ, ನಿಮ್ಮ ಸಂಗಾತಿಗೆ ಈ ನಡವಳಿಕೆ ಇಷ್ಟವಾಗದೇ ಇರಬಹುದು. ನಿಮ್ಮ ಸಂಗಾತಿಯನ್ನು ನೀವು ಹೆಚ್ಚು ಪ್ರೀತಿಸಿದಾಗ ಅವನು ತನ್ನನ್ನು ತುಂಬಾ ಅದೃಷ್ಟಶಾಲಿ ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಆದರೆ ವಿಪರೀತ ಕೋಪ ಯಾರಿಗೂ ಇಷ್ಟವಾಗದು. ಪುರುಷರು ಅಂತಹ ಮಹಿಳೆಯರಿಂದ ದೂರವಿರಲು ಇಷ್ಟಪಡುತ್ತಾರೆ. ಸಂಬಂಧದಿಂದ ಬೇರೆಯಾಗಲು ನಿರ್ಧರಿಸುತ್ತಾರೆ. ಹೀಗಾಗಿ ಕೋಪವನ್ನು ನಿಯಂತ್ರಿಸಲು ಕಲಿಯುವುದು ಉತ್ತಮ.
ಗೆಳೆಯನೆಂದರೆ ಗುಲಾಮನಲ್ಲ: ಸಂಬಂಧದಲ್ಲಿರುವ ಕೆಲವು ಹುಡುಗಿಯರು ತಮ್ಮ ಸಂಗಾತಿಯನ್ನು ಟೇಕನ್ ಫಾರ್ ಗ್ರಾಂಟೆಡ್ ಆಗಿ ತೆಗೆದುಕೊಳ್ಳುತ್ತಾರೆ. ಕರೆದಾಗ ಬರಬೇಕು. ಡ್ರಾಪ್ ನೀಡಬೇಕು. ಕೇಳಿದ್ದೆಲ್ಲಾ ಕೊಡಿಸಬೇಕು ಎಂದು ಅಂದುಕೊಳ್ಳುತ್ತಾರೆ. ಆದರೆ ಸಂಗಾತಿಯೆಂದರೆ ನೀವು ಹೇಳಿದಂತೆ ಕುಣಿಯಲು ಅವರು ಗುಲಾಮರಲ್ಲ. ಮೊದಲಿಗೆ ನಿಮ್ಮ ಸಂಬಂಧವನ್ನು ನೀವು ಗೌರವಿಸಬೇಕು. ಇದರಲ್ಲಿ ನಿಮ್ಮ ಸಂಗಾತಿಯ ಆಲೋಚನೆಗಳು ಸಹ ಮುಖ್ಯವಾಗಿರುತ್ತದೆ. ಇತರ ವಿಷಯಗಳಲ್ಲಿ ನಿಮ್ಮ ಸಂಗಾತಿಯೊಂದಿಗೆ ನೀವು ಎಷ್ಟೇ ಒಳ್ಳೆಯವರಾಗಿರುತ್ತೀರಿ, ಆದರೆ ನೀವು ಸಂಬಂಧದಲ್ಲಿ ಬಾಸ್ ಎಂದು ಯೋಚಿಸಲು ಪ್ರಾರಂಭಿಸಿದಾಗ, ಗೆಳೆಯನಿಗೆ ನಿಮ್ಮೊಂದಿಗೆ ತೊಂದರೆ ಉಂಟಾಗುತ್ತದೆ.
ಅಳುಮುಂಜಿಯಾಗಬೇಡಿ: ಎಲ್ಲರೂ ಖುಷಿಯಾಗಿರಬೇಕೆಂದು ಬಯಸುತ್ತಾರೆ. ಯಾವಾಗಲೂ ಸಪ್ಪೆ ಮೋರೆ ಹಾಕಿಕೊಂಡಿರುವ, ಅಳುತ್ತಾ ಕೂರುವ ಹುಡುಗಿ ಯಾರಿಗೂ ಇಷ್ಟವಾಗುವುದಿಲ್ಲ. ಹುಡುಗಿಯರು ಹೇಗೆ ಅಳುವ ಹುಡುಗರನ್ನು ಇಷ್ಟಪಡುವುದಿಲ್ಲವೋ ಹಾಗೆಯೇ ಪುರುಷರೂ ಸಹ ಅಂತಹ ಮಹಿಳೆಯರನ್ನು ಇಷ್ಟಪಡುವುದಿಲ್ಲ. ನಿಮ್ಮ ಸಂಗಾತಿಯ ಬಳಿ ಯಾವಾಗಲೂ ದುಃಖದಲ್ಲಿದ್ದು ಏನನ್ನಾದರೂ ಅಳುತ್ತಾ ಹೇಳುತ್ತಿದ್ದರೆ ಇದು ಅವರಿಗೆ ಕಿರಿಕಿರಿಯನ್ನುಂಟು ಮಾಡಬಹುದು. ಕ್ರಮೇಣ ಅವರನ್ನು ನಿಮ್ಮಿಂದ ದೂರ ಉಳಿಯಲು ಯತ್ನಿಸಬಹುದು.
ಎಲ್ಲದಕ್ಕೂ ಡಿಪೆಂಡ್ ಆಗಬೇಡಿ: ಸಂಗಾತಿ ಸಿಕ್ಕ ತಕ್ಷಣ ಕೆಲವೊಬ್ಬರು ತಮ್ಮ ಎಲ್ಲಾ ಜವಾಬ್ದಾರಿಯನ್ನು ಅವರ ಮೇಲೆ ಹಾಕಿಬಿಡುತ್ತಾರೆ. ಸಣ್ಣಪುಟ್ಟ ವಿಷಯಕ್ಕೂ ಅವರ ನೆರವು ಕೇಳಲು ಶುರು ಮಾಡುತ್ತಾರೆ. ಆದರೆ ಇಂಥಾ ಅಭ್ಯಾಸ ಒಳ್ಳೆಯದಲ್ಲ. ಇದು ನಿಮ್ಮ ಸಂಗಾತಿಯ ಮನಸ್ಸಲ್ಲಿ ವಿಪರೀತ ಒತ್ತಡಕ್ಕೆ ಕಾರಣವಾಗಬಹುದು. ಕ್ರಮೇಣ ಅವರು ಸಂಬಂಧದಿಂದ ಹೊರಗುಳಿಯಲು ನೋಡಬಹುದು.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
