

ಸಿದ್ಧಾಪುರ, ಪ್ರೇಮ ವೈಫಲ್ಯ ಹಾಗೂ ವಿಪರೀತ ತಲೆನೋವಿನಿಂದ ನೊಂದಿದ್ದ ಎನ್ನಲಾದ ವಿದ್ಯಾರ್ಥಿಯೋರ್ವ ನೇಣಿಗೆ ಶರಣಾದ ಘಟನೆ ಹಲಸಗಾರ ನಲ್ಲಿ ನಡೆದಿದೆ. ಜಯಸೂರ್ಯ ಮಂಜುನಾಥ್ ನಾಯ್ಕ (17) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ
ತಾಲೂಕಿನ ಕೋಲಶಿರ್ಸಿ ಸರ್ಕಾರಿ ಪಿಯು ಕಾಲೇಜಿನ ದ್ವಿತೀಯ ಪಿಯು ಕಲಾ ವಿಭಾಗದಲ್ಲಿ ವ್ಯಾಸಂಗ ಮಡುತ್ತಿದ್ದ ವಿದ್ಯಾರ್ಥಿ ಉತ್ತಮ ಕ್ರೀಡಾಪಟು ಆಗಿದ್ದನು.
ರವಿವಾರ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಡಿಕೊಂಡಿದ್ದು ಘಟನೆ ಗೆ ಸಂಬಂಧಿಸಿದಂತೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ

ಸನ್ಮಾನ- ತಾಲೂಕಿನ ಅಕ್ಕುಂಜಿ ಗ್ರಾಮದ ಗೋಳಗೊಡಿನಲ್ಲಿ ಸುದೀರ್ಘವಾಗಿ 42 ವರ್ಷಗಳ ಕಾಲ ಅಂಗನವಾಡಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಆಗಸ್ಟ್ ನಲ್ಲಿ ನಿವೃತ್ತಿ ಹೊಂದಿದ ಗೋದಾವರಿ ಲಕ್ಣ್ಮಣ ನಾಯ್ಕ ಅವರನ್ನು ನವೋದಯ ಯುವಕ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕವಚೂರು ಗ್ರಾಮ ಪಂಚಾಯತ್ ಅಧ್ಯಕ್ಷ ಜಿ ಟಿ ನಾಯ್ಕ, ಗ್ರಾಮ ಪಂಚಾಯತ್ ಸದಸ್ಯರಾದ ನಾಗರತ್ನ ಶಂಕರ್ ಗೌಡರ್, ನವೋದಯ ಯುವಕ ಸಂಘ ಅಧ್ಯಕ್ಷ ವಾಸುದೇವ ನಾಯ್ಕ, ಊರಿನ ಗ್ರಾಮಸ್ಥರಾದ ಅನಂತ್ ನಾಯ್ಕ, ಸದಾಶಿವ ನಾಯ್ಕ, ತಿಮ್ಮಾ ನಾಯ್ಕ, ಈಶ್ವರ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.


ಸ್ಕೂಟಿ ಸ್ಕಿಡ್ ಆಗಿದ್ದಕ್ಕೆ ಕರೆಂಟ್ ಕಂಬ ಹಿಡಿದ ಯುವತಿ ದಾರುಣ ಸಾವು: ಬೆಸ್ಕಾಂ ವಿರುದ್ಧ ಆಕ್ರೋಶ

ಬೈಕ್ ಸ್ಕಿಡ್ ಆಗಿದ್ದಕ್ಕೆ ಪಕ್ಕದಲ್ಲಿದ್ದ ವಿದ್ಯುತ್ ಕಂಬ ಹಿಡಿದ ಯುವತಿಗೆ ವಿದ್ಯುತ್ ಸ್ಪರ್ಶಿಸಿ ದುರ್ಘಟನೆ ಸಂಭವಿಸಿದೆ.
ಮಹದೇವಪುರ(ಬೆಂಗಳೂರು): ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಯುವತಿ ಸಾವನ್ನಪ್ಪಿರುವ ಘಟನೆ ವೈಟ್ಫೀಲ್ಡ್ ಠಾಣಾ ವ್ಯಾಪ್ತಿಯ ಸಿದ್ದಾಪುರದಲ್ಲಿ ನಿನ್ನೆ ನಡೆದಿದೆ. 23 ವರ್ಷದ ಅಕಿಲ ಮೃತಪಟ್ಟಿರುವ ಯುವತಿ. ಇವರು ಕೆಲಸ ಮುಗಿಸಿ ಮನೆಗೆ ಹೊರಡುವಾಗ ನೀರು ನಿಂತ ರಸ್ತೆಯಲ್ಲಿ ಸ್ಕೂಟಿ ಸ್ಕಿಡ್ ಆಗಿ ಬಿದ್ದಿದೆ. ಈ ಸಂದರ್ಭದಲ್ಲಿ ಪಕ್ಕದಲ್ಲೇ ಇದ್ದ ವಿದ್ಯುತ್ ಕಂಬ ಹಿಡಿದಿದ್ದು, ಮೈಮೇಲೆ ವಿದ್ಯುತ್ ಹರಿದಿದೆ ಎಂದು ತಿಳಿದುಬಂದಿದೆ.
ಸೋಮವಾರ ರಾತ್ರಿ 9 ಗಂಟೆ ಸಮಯದಲ್ಲಿ ವೈಟ್ ಫೀಲ್ಡ್ -ಮಾರತಹಳ್ಳಿ ಮುಖ್ಯರಸ್ತೆಯ ಸಿದ್ದಾಪುರದಲ್ಲಿ ಘಟನೆ ನಡೆದಿದೆ. ಭಾರಿ ಮಳೆಯ ಕಾರಣ ರಸ್ತೆಯಲ್ಲಿ ನೀರು ನಿಂತಿತ್ತು. ಖಾಸಗಿ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಖಿಲಾ, ಸ್ಕೂಟಿಯಲ್ಲಿ ಮನೆಗೆ ಮರಳುತ್ತಿದ್ದರು.
ಕಂಬದಲ್ಲಿದ್ದ ವೈರ್ಗಳು ತೆರೆದುಕೊಂಡಿವೆ. ವಿದ್ಯುತ್ ಕಂಬಗಳ ನಿರ್ವಹಣೆ ಸರಿಯಾಗಿ ಇಲ್ಲದೇ ಇರುವುದೇ ದುರ್ಘಟನೆಗೆ ಕಾರಣ ಎಂದು ಕುಟುಂಬಸ್ಥರು ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ವೈಟ್ ಫೀಲ್ಡ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವೈದೇಹಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಮನೆ ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
