

ಶಿರಸಿ: ಶಿಯೋಮಿ ಕಂಪನಿಯ ವಸ್ತುಗಳನ್ನು ಕಳೆದ ಐದು ವರ್ಷಗಳಿಂದ ಸಂಗ್ರಹಿಸಿ ಯಥಾ ಸ್ಥಿತಿಯಲ್ಲಿ ಇಟ್ಟ ಬಾಲಕನೋರ್ವನಿಗೆ ಇಂಡಿಯಾ ಬುಕ್ ಆಫ್ ರೇಕಾರ್ಡನಲ್ಲಿ ಸ್ಥಾನ ಸಿಕ್ಕಿದೆ.
ಸಿದ್ದಾಪುರ ತಾಲೂಕಿನ ಸರಕುಳಿಯ ಜಗದಂಬಾ ಪೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಅಭಿರಾಮ ಮಹಾಬಲೇಶ್ವ ನಾಯ್ಕ ಎಂಬ ಬಾಲಕನೇ ಇಂಡಿಯಾ ಬುಕ್ ಆಫ್ ರೇಕಾರ್ಡನಲ್ಲಿ ಸ್ಥಾನ ಪಡೆದ ವಿದ್ಯಾರ್ಥಿಯಾಗಿದ್ದಾನೆ. ಈತ ಕಳೆದ ಐದು ವರ್ಷಗಳಿಂದ ಶಿಯೋಮಿ ಕಂಪನಿಯ ವಸ್ತುಗಳನ್ನು, ರ‍್ಯಾಪರ್ ಗಳು ಸುರಕ್ಷಿತವಾಗಿ ಸಂಗ್ರಹಿಸಿ ಇಟ್ಟ ಹಿನ್ನೆಲೆಯಲ್ಲಿ ಈ ಗೌರವ ಲಭಿಸಿದೆ. ಸರಕುಳಿಯ ಜಗದಂಬಾ ಪ್ರೌಡಶಾಲೆಯ ದೈಹಿಕ ಶಿಕ್ಷಕ ಮಹಾಬಲೇಶ್ವರ ನಾಯ್ಕ ಹಾಗೂ ವಿಮಲಾ ನಾಯ್ಕ ಇವರ ಸುಪುತ್ರನಾಗಿದ್ದು ಮೂಲತಃ ಹೊನ್ನಾವರ ತಾಲೂಕಿನ ಸಾಲ್ಕೋಡ ಗ್ರಾಮದ ಕಾನಳ್ಳಿಯವರಾಗಿದ್ದಾರೆ.



ಬಿಳಗಿ ವಲಯ ಮಟ್ಟದ ಪ್ರೌಢ ಶಾಲಾ ಕ್ರೀಡಾಕೂಟ ತಾಲೂಕಿನ ವಾಜಗೋಡ ಪಂಚಾಯತ್ ವ್ಯಾಪ್ತಿಯ ಗಿಳಸೆ ಕ್ರೀಡಾಂಗಣದಲ್ಲಿ ನಡೆಯಿತು
ಕ್ರೀಡಾಕೂಟ ವನ್ನು ಕ್ರೀಡಾಕೂಟದ ಅಧ್ಯಕ್ಷ ಸಿ ಆರ್ ನಾಯ್ಕ್ ಉದ್ಘಾಟಿಸಿದರು ಲಂಬಾಪುರ್ ಪ್ರೌಢ ಶಾಲೆ ಎಸ್ ಡಿ ಎಂ ಸಿ ಅಧ್ಯಕ್ಷ ನಾಗರಾಜ್ ಗೌಡರ್ ಕ್ರೀಡಾ ಜ್ಯೋತಿ ಬೆಳಗಿಸಿ ಕ್ರೀಡಾಕೂಟ ಕ್ಕೆ ಚಾಲನೆ ನೀಡಿದರು
ಕ್ರೀಡಾ ಧ್ವಜಾರೋಹಣ ಮಾಡಿ ಕ್ರೀಡಾಪಟು ಗಳಿಗೆ ಪ್ರತಿಜ್ಞಾ ವಿಧಿ ಭೋದಿಸಲಾಯಿತು
ವಾಜಗೋಡ ಪಂಚಾಯತ್ ಅಧ್ಯಕ್ಷೆ ಚಂದ್ರಕಲಾ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು
ಸಭೆಯಲ್ಲಿ ಉಪಾಧ್ಯಕ್ಷೆ ಮಂಗಲ ಗೌಡ, ಪಂಚಾಯತ್ ಸದಸ್ಯರಾದ ಕೃಷ್ಣಮೂರ್ತಿ ನಾಯ್ಕ್ ಐಸೂರ್, ಸುರೇಶ್ ನಾಯ್ಕ್, ಎಸ್. ಏನ್ ಭಟ್, ಪ್ರಮುಖರಾದ ಎಂ ಏನ್ ಹೆಗಡೆ, ಏನ್ ಜಿ ಹೆಗಡೆ, ಕೃಷ್ಣ ಸುತ್ತಲಮನೆ, ದೈಹಿಕ ಪರಿವಿಕ್ಷಕ ರಾಜು ನಾಯ್ಕ್, ಪತ್ರಕರ್ತ ದಿವಾಕರ್ ಸಂಪಖಂಡ ಉಪಸ್ಥಿತರಿದ್ದರು
ಈ ವೇಳೆಯಲ್ಲಿ ಲಂಬಾಪುರ ಪ್ರೌಢ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ 9 ವರ್ಷ ಸೇವೆ ಸಲ್ಲಿಸಿ ವರ್ಗಾವಣೆ ಗೊಂಡ ಶಿಕ್ಷಕ ವಿನಾಯಕ ವೈದ್ಯ ರನ್ನು ಸನ್ಮಾನಿಸಿ ಗೌರವಿಸಿದರು
ವಿದ್ಯಾರ್ಥಿ ಆದಿತ್ಯ ಹೆಗಡೆ ಯಿಂದ ಪ್ರಾರ್ಥಿಸಿದನು , ಪಲ್ಲವಿ ಸಂಗಡಿಗರು ಸ್ವಾಗತ ಗೀತೆಮೂಲಕ ಸ್ವಾಗತಿಸಿದರು , ಶಿಕ್ಷಕ ಉದಯ ನಾಯ್ಕ್ ಸ್ವಾಗತ ಪ್ರಾಸ್ತಾವಿಕ ಮಾತನಾಡಿದರು ಗಣಪತಿ ಹೆಗಡೆ ನಿರೂಪಿಸಿದರು ಶಿಕ್ಷಕ ಗುರುರಾಜ್ ವಂದಿಸಿದರು.





ಸಿದ್ದಾಪುರ: ವಿಶ್ವಶಾಂತಿ ಸೇವಾ ಟ್ರಸ್ಟ್ ತಾಲೂಕಿನ ಕಲಗದ್ದೆಯ ಶ್ರೀನಾಟ್ಯ ವಿನಾಯಕ ದೇವಸ್ಥಾನದಲ್ಲಿ ಸೆ.೧೩ ಅಂಗಾರಕ ಸಂಕಷ್ಟಿಯ ರಾತ್ರಿ ೮ ಗಂಟೆಗೆ ಪಸಿದ್ಧ ಕಲಾವಿದರುಗಳಿಂದ ರಾಜಾ ಸತ್ಯ ಹರಿಶ್ಚಂದ್ರ ಯಕ್ಷಗಾನ ಪ್ರದರ್ಶನ ಹಾಗೂ ವಿದ್ಯಾವಾಚಸ್ಪತಿ ವಿ.ಉಮಾಕಾಂತ ಭಟ್ಟ ಕೆರೇಕೈ ಅವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಮಾರಂಭದ ಅಧ್ಯಕ್ಷತೆಯನ್ನು ದೇವಸ್ಥಾನದ ಪ್ರಧಾನ ವಿಶ್ವಸ್ಥ ವಿನಾಯಕ ಹೆಗಡೆ ವಹಿಸಿಕೊಳ್ಳಲಿದ್ದು, ಯಕ್ಷ ರಾತ್ರಿಗೆ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಕುಮಟಾ ಚಾಲನೆ ನೀಡಲಿದ್ದಾರೆ. ಕೆವಿಜಿ ಬ್ಯಾಂಕ್ ಮುಖ್ಯ ಮಹಾಪ್ರಬಂಧಕ ಉಲ್ಲಾಸ ಆರ್.ಗುನಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನರೇಂದ್ರ ನಾಯಕ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಬಳಿಕ ಜಾನಕೈ ತಿಮ್ಮಪ್ಪ ಹೆಗಡೆ ವಿರಚಿತ ರಾಜಾ ಸತ್ಯ ಹರಿಶ್ಚಂದ್ರ ಯಕ್ಷಗಾನವು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಪ್ರದರ್ಶನ ಆಗಲಿದೆ.
ಹಿಮ್ಮೇಳದಲ್ಲಿ ಪ್ರಸಿದ್ಧ ಭಾಗವತ ಕೇಶವ ಹೆಗಡೆ ಕೊಳಗಿ, ಶಂಕರ ಭಾಗವತ ಯಲ್ಲಾಪುರ, ವಿಘ್ನೇಶ್ವರ ಗೌಡ ಕೆಸರಕೊಪ್ಪ ಸಹಕಾರ ನೀಡಲಿದ್ದಾರೆ. ಮುಮ್ಮೇಳದಲ್ಲಿ ಕಲಾವಿದರಾದ
ವಿನಾಯಕ ಹೆಗಡೆ ಕಲಗದ್ದೆ, ವಿ.ಉಮಾಕಾಂತ ಭಟ್ಟ ಕೆರೇಕೈ, ಡಾ.ಜಿ.ಎಲ್.ಹೆಗಡೆ ಕುಮಟಾ, ಮೋಹನ ಭಾಸ್ಕರ ಹೆಗಡೆ ಹೆರವಟ್ಟ ನಾಗೇಂದ್ರ ಮುರೂರು, ಮಹಾಬಲೇಶ್ವರ ಇಟಗಿ, ವೆಂಕಟೇಶ ಬೊಗ್ರಿಮಕ್ಕಿ, ಅವಿನಾಶ ಕೊಪ್ಪ, ವಿನಯ ಹೊಸ್ತೋಟ, ತುಳಸಿ ಹೆಗಡೆ ಇತರರು ಪಾಲ್ಗೊಳ್ಳುವರು. ಯಕ್ಷಗಾನದ ಮುಂಚೂಣಿ ಕಲಾವಿದರ ಜೊತೆ ತಾಳಮದ್ದಲೆಯ ಹೆಸರಾಂತ ಕಲಾವಿದರಾದ ಕೆರೇಕೈ ಅವರು ವಿಶ್ವಾಮಿತ್ರ, ಮೋಹನ ಹೆಗಡೆ ಅವರು ಚಂದ್ರಮತಿ, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಅವರು ವೀರಬಾಹುಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಹಳೆ ಬೇರು ಹೊಸ ಚಿಗುರಿನ ಮಿಳಿತ, ವೃತ್ತಿ, ಪ್ರವೃತ್ತಿ ಕಲಾವಿದರ ಕೂಡುವಿಕೆ ಇಲ್ಲಾಗಲಿದೆ. ಯಕ್ಷಗಾನದ ಪ್ರಸಾದನವನ್ನು ಎಂ.ಆರ್.ನಾಯ್ಕ ಕರ್ಸೇಬೈಲ್ ಮತ್ತು ಅವರ ಬಳಗ ನೀಡಲಿದೆ ಯಕ್ಷಗಾನ ಉಚಿತ ಪ್ರದರ್ಶನವಾಗಿದ್ದು, ಕಲಾಸಕ್ತರು ಹೆಚ್ಚಿನವರು ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಟ್ರಸ್ಟ್ ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
