




ಸಿದ್ಧಾಪುರ ತಾಲೂಕಿನ ಕಾವಂಚೂರು ಬಳಿ ಇಂದು ಮುಂಜಾನೆ ೭.೩೦ ರ ಸುಮಾರಿಗೆ ನಡೆದ ಎರಡು ಕಾರುಗಳ ಮೂಖಾಮುಖಿ ಡಿಕ್ಕಿಯಲ್ಲಿ ಹೊಸೂರಿನ ಐವರಿಗೆ ಗಂಭೀರ ಗಾಯಗಳಾಗಿವೆ. ಹೊಸೂರಿನ ಮೇಸ್ತ್ರಿ ವಿನಾಯಕ ನಾಯ್ಕ ರ ಕುಟುಂಬ ಇಂದು ಮುಂಜಾನೆ ಸಿದ್ಧಾಪುರದಿಂದ ಮಂಗಳೂರಿಗೆ ಮಾರುತಿ ಕಾರಿನಲ್ಲಿ ಪ್ರಯಾಣ ಹೊರಟಿತ್ತು. ಕಾವಂಚೂರು ದಾಟಿದ ನಂತರ ಬರುವ ತಿರುವಿನಲ್ಲಿ ಸಾಗರ ಕಡೆಯಿಂದ ವೇಗವಾಗಿ ಬಂದ ಸ್ಯಾಂಟ್ರೋ ಕಾರೊಂದು ನುಗ್ಗಿ ಎರಡೂ ವಾಹನಗಳು ಚದುರಿ ಬಿದ್ದವು.
ವಿನಾಯಕ ನಾಯ್ಕರ ಕಾರಿನಲ್ಲಿದ್ದ ಆರು ಜನರ ಪೈಕಿ ಮಹಿಳೆಯರಿಬ್ಬರು ಮತ್ತು ಪುರುಷರಿಬ್ಬರು ಗಂಭೀರವಾಗಿ ಗಾಯಗೊಂಡರು. ಸ್ಥಳಿಯರು ತಕ್ಷಣ ಈ ಗಾಯಗೊಂಡವರನ್ನು ಸಿದ್ಧಾಪುರಕ್ಕೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನಿಸಿದ್ದಾರೆ. ವೇಗ ಮತ್ತು ನಿಷ್ಕಾಳಜಿಯಿಂದ ವಾಹನ ಚಲಾಯಿಸಿ ಅಪಘಾತ ಮಾಡಿದ ಸ್ಯಾ೦ಟ್ರೋ ಕಾರು ಚಾಲಕ ಪರಾರಿಯಾಗಿದ್ದಾನೆ. ಈ ಬಗ್ಗೆ ಸಿದ್ಧಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
