

ಶಿರಸಿ ತಾಲೂಕಿನ ಹುಲೇಕಲ್ ಗ್ರಾಮಪಂಚಾಯತ್ ವ್ಯಾಪ್ತಿಯ ಲೋಕೇಶ್ ತಿಮ್ಮ ನಾಯ್ಕ ಬಾದುಂಬೆ ವಿದ್ಯುತ್ ತಗಲಿ ಮೃತರಾಗಿದ್ದಾರೆ. ೩೫ ವರ್ಷ, ಒಂದು ಮಗುವಿನ ತಂದೆಯಾಗಿದ್ದ ಲೋಕೇಶ್ ಶಿರಸಿ ರಾಘವೇಂದ್ರ ವೃತ್ತದ ಬಳಿ ಚಿಕನ್ ಅಂಗಡಿ ನಡೆಸುತಿದ್ದರು. ಇಂದು ಮುಂಜಾನೆ ವಿದ್ಯುತ್ ರಿಪೇರಿಗೆ ಬಂದಿದ್ದ ಹೆಸ್ಕಾಂ ಸಿಬ್ಬಂದಿಗಳಿಗೆ ನೆರವಾಗಲು ತೆರಳಿದ್ದ ಲೋಕೇಶ್ ನಾಯ್ಕ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ನಿಧನರಾದರು. ವಯಸ್ಕರಾದ ತಂದೆ-ತಾಯಿ, ಪತ್ನಿ ಮತ್ತು ಏಕೈಕ ಮಗುವಿನ ತಂದೆಯಾಗಿದ್ದ ಲೋಕೇಶ್ ಸಾವಿನಿಂದ ಶಿರಸಿ ದಿಗ್ಭ್ರಮೆಗೊಂಡಿದೆ.

ಚುರುಕಿನ ಯುವಕನಾಗಿದ್ದ ಲೋಕೇಶ್ ತನ್ನ ವೃತ್ತಿಯೊಂದಿಗೆ ಸ್ಥಳಿಯ ಜನಪರ ಯುವಕನಾಗಿ ಗುರುತಿಸಿಕೊಂಡಿದ್ದ ಮೃತ ಲೋಕೇಶ್ ಸಾವಿನ ಆಕಸ್ಮಿಕ ತುಂಬಲಾರದ ನಷ್ಟವಾಗಿದ್ದು ಸರ್ಕಾರ ಅವರ ಕುಟುಂಬಕ್ಕೆ ಅವಶ್ಯ ಅನುಕೂಲಗಳನ್ನು ಕಲ್ಪಿಸಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


