

ಕಾಂಗ್ರೆಸ್ ಮುಖಂಡ, ಸೊರಬಾದ ಮಾಜಿ ಶಾಸಕ ಮಧುಬಂಗಾರಪ್ಪ ರಾಜ್ಯ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಕಾರ್ಯಾಧ್ಯಕ್ಷರಾಗಿ ನೇಮಕವಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಪುತ್ರರಾಗಿ ಒಮ್ಮೆ ಜಾತ್ಯಾತೀತ ಜನತಾದಳದಿಂದ ಶಾಸಕರಾಗಿ ವಿಭಿನ್ನ ಸನ್ನಿವೇಶ,ನಾಯಕತ್ವಗಳಡಿ ಕಾಂಗ್ರೆಸ್, ಬಿ.ಜೆ.ಪಿ., ಜನತಾದಳ, ಸಮಾಜವಾದಿ ಪಕ್ಷಗಳ ಪ್ರಮುಖ ನಾಯಕರಾಗಿ ಜನಮನ್ನಣೆ ಗಳಿಸಿರುವ ಮಧುಬಂಗಾರಪ್ಪ ಕಾಂಗ್ರೆಸ್ ಹಿಂದುಳಿದವರ್ಗಗಳ ಘಟಕದ ಅಧ್ಯಕ್ಷರಾಗಿ ನೇಮಕವಾಗುತ್ತಾರೆ ಎನ್ನುವ ನಿರೀಕ್ಷೆ ಇತ್ತು,
ಆದರೆ ಅಖಿಲ ಭಾರತ ಕಾಂಗ್ರೆಸ್ ಸಮೀತಿ ಇಂದು ಬಿಡುಗಡೆ ಮಾಡಿರುವ ಮಾಧ್ಯಮ ಪ್ರಕಟಣೆಯಲ್ಲಿ ಮಧು ಬಂಗಾರಪ್ಪನವರನ್ನು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಘಟಕದ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರುವ ಆದೇಶ ಮಾಡಿದೆ. ರಾಜ್ಯದ ಬಹುತೇಕ ಕಡೆ ಮಧು ಬಂಗಾರಪ್ಪನವರಿಗೆ ಕಾಂಗ್ರೆಸ್ ಕಾರ್ಯಕರ್ತರ ಬೆಂಬಲವಿದೆ. ಸೊರಬಾ ದಲ್ಲಿ ಕೂಡಾ ಮಧುಬಂಗಾರಪ್ಪನವರ ಜನಪರತೆ, ಜನಪ್ರೀಯತೆ ಅವರು ಮುಂದಿನ ಶಾಸಕರಾಗುವ ಸಾಧ್ಯತೆಯನ್ನು ಒತ್ತಿ ಹೇಳುವಂತಿದೆ.

