

ನನ್ನ ವಿರುದ್ಧ ಕ್ರಮ ಜರುಗಿಸುವುದಾದರೆ ಜರುಗಿಸಲಿ ಸೆಡ್ಡು ಹೊಡೆದ ಪದ್ಮನಾಭ್ ಭಟ್!
ಸೊರಬ :- ಬಿಜೆಪಿಯಲ್ಲಿನ ಬಂಡಾಯದ ಕೂಗು ಸೊರಬದಿಂದ ಮೊಳಗಿದೆ. ಪ್ರಧಾನಿ ಮೋದಿಯ ಜನ್ಮದಿನದಂದು ನಮೋ ವೇದಿಕೆಯನ್ನ ಹುಟ್ಟುಹಾಕಿ ಬಹಳ ದಿನದಿಂದ ಅದುಮಿಡಲಾಗಿದ್ದ ಮೂಲ ಬಿಜೆಪಿಗರ ಅಸಮಾಧಾನ ಇಂದು ಸ್ಪೋಟಗೊಂಡಿದೆ.
ಸೊರಬದ ಹೊಸಪೇಟೆ ಬಡಾವಣೆಯಲ್ಲಿದ್ದ ಗಿರಿಜಾ ಶಂಕರ್ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಸಕ ಕುಮಾರ ಬಂಗಾರಪ್ಪನವರ ವಿರುದ್ದ ಸೆಡ್ಡು ಹೊಡೆಯಲಾಗಿದೆ. ತಂದೆ ತಾಯಿಯನ್ನ ನೋಡಿಕೊಳ್ಳದ ಶಾಸಕ ಕಾರ್ಯಕರ್ತನನ್ನ ನೋಡಿಕೊಳ್ತಾರ? ಎಂಬ ಪ್ರಾಯಶ್ಚಿತ್ತದ ಮಾತುಗಳನ್ನ ಹಿರಿಯ ಮುತ್ಸದ್ಧಿ ಪದ್ಮನಾಭ್ ಭಟ್ ವ್ಯಕ್ತಪಡಿಸಿದ್ದಾರೆ.
ಅಷ್ಟಕ್ಕೆ ಸುಮ್ಮನಾಗದ ಪದ್ಮನಾಭ್ ಭಟ್ ಪಕ್ಷದಿಂದ ನನ್ನ ವಿರುದ್ಧ ಕ್ರಮ ಕೈಗೊಂಡರೆ ಕೈಗೊಳ್ಳಲಿ, ಪಕ್ಷದಲ್ಲಿ ಬಹಳ ಹಳೆಯ ಕಾರ್ಯಕರ್ತನೆಂದರೆ ನಾನೊಬ್ಬನೆ, ನನ್ನ ವಿರುದ್ಧ ಪಕ್ಷ ಕ್ರಮಕೈಗೊಳ್ಳುವುದಾದರೆ ಕೈಗೊಳ್ಳಲಿ ಎಂದು ರಣಕಹಳೆ ಊದಿದ್ದಾರೆ.
ಬಂಗಾರಪ್ಪನವರ ರಾಜಕೀಯ ಮತ್ತು ಅವರ ಪತ್ನಿಯನ್ನ ನೆನೆಪಿಸಿಕೊಂಡ ಪದ್ಮನಾಭ್ ಭಟ್ ಅವರನ್ನ ಮಧ್ಯರಾತ್ರಿಯಲ್ಲಿ ಹೊರ ಹಾಕಿದ ವ್ಯಕ್ತಿ ನಮ್ಮನ್ನ ನೋಡಿಕೊಳ್ತಾರ ಎಂಬುದು ಅವತ್ತು ಹೊಳೆಯಲೇ ಇಲ್ಲ. ನಮ್ಮ ವೇದಿಕೆಯಿಂದಲೇ ಮುಂದಿನ ಚುನಾವಣೆಯಲ್ಲಿ ಒಬ್ಬ ಕಾರ್ಯಕರ್ತನಿಗೆ ಪಕ್ಷದ ಟಿಕೇಟ್ ನೀಡಬೇಕು, ಅವರನ್ನೇ ನಾವು ಆರಿಸಿಕೊಂಡು ಬರುವುದಾಗಿ ಹೇಳಿದ ಭಟ್ ಬಿಜೆಪಿಯಲ್ಲಿ ಒಡಕಿದೆ ಎಂದು ಕಾಂಗ್ರೆಸ್ ಬೀಗುವುದು ಬೇಡ ಎಂಬ ಕಿವಿ ಮಾತು ಹೇಳಿದ್ದಾರೆ.
ನಮೋ ವೇದಿಕೆಯ ಅಧ್ಯಕ್ಷ ಪಾಣಿ ರಾಜಪ್ಪ ವೇದಿಕೆಯ ಮೇಲೆ ಕಣ್ಣೀರು ಹಾಕಿದ್ದಾರೆ. ಕಾರ್ಯಕರ್ತರನ್ನು ಕರೆದುಕೊಂಡು ಹೋಗಿ ಅವರಿಗೆ ಕೆಲಸ ಹಚ್ಚಿಸಿದ್ದೇನೆ ಹೊರತು ಒಂದು ರೂಪಾಯಿ ಹಣ ತೆಗೆದುಕೊಂಡು ಬರಲಿಲ್ಲವೆಂದು ಕಣ್ಣೀರು ಹಾಕಿದ್ದಾರೆ. ಇಂದು ಸಂಸದರು ನಮ್ಮಬೇಡಿಕೆಯನ್ನ ತಿರಸ್ಕರಿಸೊಲ್ಲ ಅಂತಹದ್ದರಲ್ಲಿ ನನ್ನ ವಿರುದ್ಧ ಶಾಸಕರು ಆರೋಪ ಮಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
