

ಬಸ್ ವ್ಯವಸ್ಥೆ ಸರಿಪಡಿಸುವಂತೆ ಅಗ್ರಹಿಸಿ ಇಂದು ಹೆಗ್ಗರಣಿಯಲ್ಲಿ ರಸ್ತೆ ತಡೆ
ಸಿದ್ದಾಪುರ ದಿಂದ ಹಾರ್ಸಿಕಟ್ಟಾ ಮಾರ್ಗವಾಗಿ ಹೆಗ್ಗರಣಿ ಮೂಲಕ ಅಮ್ಮಿನಳ್ಳಿ ಗೆ ಬಿಡುವ ಬಸ್ ಸಮಯ ವ್ಯತ್ಯಾಸ ದಿಂದ ಆ ಭಾಗದ ವಿದ್ಯಾರ್ಥಿ ಗಳಿಗೆ ಶಾಲೆ ಕಾಲೇಜಿಗೆ ತೆರಳಲು ಹಲವು ಸಮಸ್ಯೆ ಗಳು ಎದುರಗುತ್ತಿದ್ದು ಅಲ್ಲದೆ ನಿಲ್ಕುo ದ ತಂಡಗುಂಡಿ ಸುತ್ತಮುತ್ತಲಿನ ಪ್ರಯಾಣಿಕರಿಗೂ ಸಹ ತೊಂದರೆಗಳು ಎದುರಗುತ್ತಿವೆ ಇದಕ್ಕೆ ಸಂಬಂಧಿಸಿದಂತೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ಮನವಿ ಈ ಹಿಂದೆ ಸಲ್ಲಿಸಿದ್ದು ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಶನಿವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರು ಸದಸ್ಯರು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.
ಸಿದ್ದಾಪುರ: 2020-21ನೇ ಸಾಲಿನಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ಸಿದ್ದಾಪುರದ ಕೃಷಿ ಹುಟ್ಟುವಳಿಗಳ ಸಂಸ್ಕರಣ ಮತ್ತು ಮಾರಾಟ ಸಹಕಾರಿ ಸಂಘವು ಕೆಡಿಸಿಸಿ ಬ್ಯಾಂಕ್ ವತಿಯಿಂದ ನೀಡುವ ಜಿಲ್ಲೆಯ ಉತ್ತಮ ಗ್ರಾಹಕರ ಸಹಕಾರಿ ಸಂಘ/ಕೃಷಿ ಅಭಿವೃದ್ಧಿ ಸಂಘ ಪ್ರಶಸ್ತಿಗೆ ಆಯ್ಕೆಯಾಗಿದೆ.
ಸೆಪ್ಟೆಂಬರ 24 ರಂದು ಬ್ಯಾಂಕಿನ ಪ್ರಧಾನ ಕಚೇರಿಯ ಸುಂದರರಾವ್ ಪಂಡಿತ ಸ್ಮಾರಕ ಸಭಾಭವನದಲ್ಲಿ ಜರುಗಲಿರುವ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.


