

ಶಿಕ್ಷಕರ ವರ್ಗಾವಣೆ ಮಸೂದೆ ಅಂಗೀಕಾರ: ಪತಿ ಪತ್ನಿ ಮತ್ತು ಪರಸ್ಪರ ಶಿಕ್ಷಕರ ವರ್ಗಾವಣೆಗೆ ಅವಕಾಶ
ಶಿಕ್ಷಕರ ವರ್ಗಾವಣೆ ಮಸೂದೆ ಅಂಗೀಕಾರ. ಪತಿ ಪತ್ನಿ ಮತ್ತು ಪರಸ್ಪರ ವರ್ಗಾವಣೆಗೆ ಅವಕಾಶ.
ಬೆಂಗಳೂರು: ವಿಧಾನಸಭೆಯಲ್ಲಿ ಶಿಕ್ಷಕರ ವರ್ಗಾವಣೆ ಮಸೂದೆ ಅಂಗೀಕಾರವಾಗಿದೆ. ಈ ಮೂಲಕ ಪರಸ್ಪರ ವರ್ಗಾವಣೆ ಹಾಗೂ ಪತಿ ಪತ್ನಿ ವರ್ಗಾವಣೆಗೆ ಅವಕಾಶವಿದ್ದು, ಇತರ ಶಿಕ್ಷಕರ ಕೌನ್ಸೆಲಿಂಗ್ ಮೂಲಕ ವರ್ಗಾವಣೆಗೆ ಅವಕಾಶ ಮಾಡಿಕೊಡಲಾಗಿದೆ. ಜೊತೆಗೆ, ಪ್ರೌಢ ಶಿಕ್ಷಕರಿಗೆ ಕೌನ್ಸೆಲಿಂಗ್ ಮೂಲಕ ವರ್ಗಾವಣೆಗೆ ಅವಕಾಶ ನೀಡಲಾಗಿದೆ.
ಅಲ್ಲದೇ, ಪ್ರೌಢ ಶಿಕ್ಷಣ ಮಂಡಳಿ ತಿದ್ದುಪಡಿ ವಿಧೇಯಕ ಸಹ ಅಂಗೀಕಾರ ಮಾಡಲಾಗಿದೆ. ಇದರಿಂದ ಎಸ್ಎಸ್ಎಲ್ಸಿ-ಪಿಯುಸಿ ಪರೀಕ್ಷಾ ಮಂಡಳಿ ವಿಲೀನಕ್ಕೆ ಅವಕಾಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಒಂದೇ ಮಂಡಳಿಯಿಂದ ಪಿಯುಸಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.
ಭೂ ಕಬಳಿಕೆ ನಿಷೇಧ ಕಾಯ್ದೆ ತಿದ್ದುಪಡಿ ಬಿಲ್ಗೆ ಸದನ ಒಪ್ಪಿಗೆ ನೀಡಲಾಗಿದೆ. ಇದರಿಂದ ಭೂಕಬಳಿಕೆ ಪ್ರಕರಣ ಹಿಂಪಡೆಯುವುದಾಗಿದೆ.

