

ಸಿದ್ದಾಪುರ: ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮದಿನದ ಪ್ರಯುಕ್ತ ಬಿಜೆಪಿ ಮಂಡಲದ ವತಿಯಿಂದ ಪಕ್ಷದ ಕಾರ್ಯಾಲಯದಲ್ಲಿ ಅವರ
ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಜನ್ಮದಿನವನ್ನು ಆಚರಿಸಲಾಯಿತು.
ಈ ವೇಳೆ ಮಂಡಲದ ಅಧ್ಯಕ್ಷ ನಾಗರಾಜ ನಾಯ್ಕ ಬೇಡ್ಕಣಿ ಮಾತನಾಡಿ, ದೀನ್ ದಯಾಳ್ ಉಪಾಧ್ಯಾಯ ಅವರ ಧ್ಯೇಯವಾದ ಅಂತ್ಯೋದಯ ಹಾಗೂ ಸಾಮಾಜಿಕ ನ್ಯಾಯ ಪರಿಕಲ್ಪನೆ ಇಂದಿಗೂ ಸಹ ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಸರ್ಕಾರ ಹಾಗೂ ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಪರಿಪಾಲನೆ ಮಾಡುತ್ತಿದ್ದು, ಅವರ ಜೊತೆಯಲ್ಲಿ ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರಾದ ನಾವುಗಳು ಅವರ ಧ್ಯೇಯೋದ್ದೇಶ ಇಟ್ಟುಕೊಂಡು ಮುಂದೆ ಸಾಗಿದ್ದಲ್ಲಿ ಮಾತ್ರವೇ ಅವರಿಗೆ ಗೌರವ ಸಲ್ಲಿಸಿದಂತೆ ಆಗುತ್ತದೆ.
ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರದ್ದು ಯಾವಾಗಲೂ ಸಿದ್ದಾಂತವನ್ನು ಬಲಿಕೊಟ್ಟು ಅಧಿಕಾರ ಹಿಡಿಯುವ ಅಪೇಕ್ಷೆಯಾಗಲಿ, ಸೈದ್ದಾಂತಿಕವಾಗಿ ರಾಜಿ ಮಾಡಿಕೊಳ್ಳುವ ವ್ಯಕ್ತಿತ್ವವಾಗಲಿ ಅವರದಾಗಿರಲಿಲ್ಲ. ಇಂದಿನ ರಾಜಕೀಯವನ್ನು ಸೂಕ್ಷ್ಮವಾಗಿ
ಗಮನಿಸಿದರೇ ಅಧಿಕಾರಕ್ಕಾಗಿ ಸಿದ್ದಾಂತವನ್ನು ಬಲಿ ಕೊಡಲಾಗುತ್ತಿದೆ . ನಾವೆಲ್ಲ ಇಂತಹ ಮಹಾಪುರುಷರು ಹಾಕಿಕೊಟ್ಟ ಹೆಜ್ಜೆಯಲ್ಲಿ ಮುನ್ನಡೆಯುತ್ತ ಅವರು ಕಂಡ ಭವ್ಯ ಭಾರತದ ಕನಸನ್ನು ಸಾಕಾರಗೊಳಿಸೋಣ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮವನ್ನು ಪಕ್ಷದ ಕಾರ್ಯಾಲಯದಲ್ಲಿ ವೀಕ್ಷಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಎಸ್ ಕೆ ಮೇಸ್ತ, ಜಿಲ್ಲಾ ಕಾರ್ಯದರ್ಶಿ ಕೃಷ್ಣಮೂರ್ತಿ ಮಡಿವಾಳ, ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಸುಮನಾ ಕಾಮತ್, ಪಟ್ಟಣ ಪಂಚಾಯತ ಸದಸ್ಯೆ ಮಂಜುಳಾ ನಾಯ್ಕ, ಮಹಾಶಕ್ತಿ ಕೇಂದ್ರ ಅಧ್ಯಕ್ಷ ತೋಟಪ್ಪ ನಾಯ್ಕ, ಎಸ್ ಟಿ ಮೋರ್ಚಾ ಅಧ್ಯಕ್ಷ ವೆಂಕೋಬ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ವಿಕ್ಕಿ ಫರ್ನಾಂಡಿಸ್, ಸಾಮಾಜಿಕ ಜಾಲತಾಣದ ಸಂಚಾಲಕ ಶಿವಕುಮಾರ್ ನಾಯ್ಕ ಕೊಂಡ್ಲಿ, ಸಹ-ಸಂಚಾಲಕ ಸಚೀನ್ ಶೇಟ್, ಪ್ರಮುಖರಾದ ಸತೀಶ್ ಕಾಮತ್, ಸುರೇಶ್ ಕೊಂಡ್ಲಿ, ರಾಮಕೃಷ್ಣ ಕೊಂಡ್ಲಿ ಉಪಸ್ಥಿತರಿದ್ದದರು.



ಸಭೆಯಲ್ಲಿ ಜಿಲ್ಲಾ ಸಂಚಾಲಕ ನವೀನಕುಮಾರ್ ಅಯೋಧ್ಯ ಅವರು ಮಾತನಾಡಿ, ಮುಂಬರುವ ವಿಧಾನಸಭಾ ಚುನಾವಣೆಗೆ ಸಾಮಾಜಿಕ ಜಾಲತಾಣ ತಂಡದ ಸಿದ್ಧತೆ ಹಾಗೂ ಚುನಾವಣಾ ತಂತ್ರಗಳ ಕುರಿತು ಹಾಗೂ ಸಾಮಾಜಿಕ ಜಾಲತಾಣಗಳ ಸದಸ್ಯರ ಕಾರ್ಯ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವ ರೀತಿಯಲ್ಲಿ ಗೌರವಯುತವಾಗಿ ಕಾರ್ಯನಿರ್ವಹಿಸಬೇಕು ಎಂಬ ಕುರಿತು ಮಾಹಿತಿ ನೀಡಲಾಯಿತು. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅಗೌರವದಿಂದ ಕೆಲವು ಕಿಡಿಗೆಡಿಗಳು ಅವಾಚ್ಯ ಶಬ್ದಗಳಿಂದ ನಿಂದಿಸುವುದು ಹಾಗೂ ಅಮಾಯಕರನ್ನು ಪ್ರಚೋದಿಸಿ ಕಮೆಂಟ್ ಹಾಕುವಂತೆ ಪ್ರೆರೇಪಿಸುವ ಪ್ರಕರಣಗಳು ಹೆಚ್ಚಾಗಿದ್ದು, ಸಾಮಾಜಿಕ ಜಾಲತಾಣಗಳನ್ನು ಗೌರವಯುತವಾಗಿ ಸಹ ಬಳಸಬಹುದು ಎಂದು ತೋರಿಸುವ ಅನಿವಾರ್ಯತೆ ನಿರ್ಮಾಣ ಮಾಡಲು ಪ್ರಯತ್ನಮಾಡುವ ಅಗತ್ಯವಿದೆ, ನಮ್ಮ ಮುಂದಿನ ಪೀಳಿಗೆಗೆ ನಾವು ಉತ್ತಮ ಗುಣಮಟ್ಟದ ಸಾಮಾಜಿಕ ಜಾಲತಾಣಗಳ ಚರ್ಚೆಯ ಬಳಕೆಗೆ ಅವಕಾಶ ಕಲ್ಪಿಸುವಂತಾಗಬೇಕು ಎಂದು ತಿಳಿಸಿದರು.
ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಹಾಗೂ ಭಾರತೀಯ ಜನತಾ ಪಾರ್ಟಿಗೆ ಮತ ಚಲಾಯಿಸುವ ಮತದಾರರು ಅತ್ಯಂತ ಪ್ರಾಜ್ಞರು ಹಾಗೂ ವಿಚಾರವಂತರು ಆಗಿದ್ದಾರೆ, ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯವಹರಿಸುವ ಸಂದರ್ಭದಲ್ಲಿ ನಮ್ಮ ಪೋಸ್ಟ್, ಕಮೆಂಟ್ ಹಾಗೂ ದತ್ತಾಂಶ ಆಧರಿಸಿದ ಮಾಹಿತಿ ರವಾನೆಯಾಗಬೇಕು, ಪೋಸ್ಟ್ ಹಾಗೂ ಕಮೆಂಟ್ ಮಾಡುವ ಸಂದರ್ಭದಲ್ಲಿ ಅತ್ಯಂತ ಜಾಗರೂಕತೆಯಿಂದ ಕಮೆಂಟ್ ಮಾಡುವಂತಾಗಬೇಕು, ಸಾಮಾಜಿಕ ಜಾಲತಾಣ ರಾಜಕೀಯ ಕ್ಷೇತ್ರದಲ್ಲಿ ಪರ ವಿರೋಧಗಳ ಎರಡು ಮುಖಗಳನ್ನು ಹೊಂದಿದೆ, ಆದರೆ ರಾಜಕೀಯದಲ್ಲಿ ಈ ಪರ ವಿರೋಧಗಳು ಗೌರವಯುತವಾಗಿ ಹಾಗೂ ಸಭ್ಯತೆಯ ಭಾಷೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುವ ಪೋಸ್ಟ್ ನಾವು ಡಿಲೀಟ್ ಮಾಡಿದರು ಸಹ ದಾಖಲೆಯ ರೂಪದಲ್ಲಿ ಸಂಬಂಧಿಸಿದ ಕಂಪನಿಯಲ್ಲಿ ದತ್ತಾಂಶ ಸಂಗ್ರಹಣೆಯಲ್ಲಿ ನಿರ್ದಿಷ್ಟ ಕಾಲ ಇರಲಿದ್ದು, ಒಂದು ದಾಖಲೆಯಂತೆ ಇರುತ್ತದೆ, ಹಾಗಾಗಿ ಯೋಚಿಸಿ ಪೋಸ್ಟ್, ಕಮೆಂಟ್ ಮಾಡುವಂತಾಗಬೇಕು ಎಂದು ತಿಳಿಸಿದರು.
ರಾಜಕೀಯದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಎಂದರೆ ಕೇವಲ ಪೇಸ್ಬುಕ್, ಟ್ವಿಟ್ಟರ್ ನಂತಹ ಮಾದ್ಯಮಗಳಲ್ಲಿ ಪೋಸ್ಟ್ ಮಾಡುವುದೊಂದೆ ಅಲ್ಲದೆ, ಅದನ್ನು ಮೀರಿ ಪಕ್ಷದಲ್ಲಿ ಸಾಮಾಜಿಕ ಜಾಲತಾಣಗಳ ಇತರ ಕೆಲಸಗಳನ್ನು ನಿರ್ವಹಣೆ ಮಾಡುವಂತೆ ಮಾಹಿತಿ ನೀಡಿದರು.
ಈ ವೇಳೆ ಜಿಲ್ಲಾ ಸಹ-ಸಂಚಾಲಕ ರವಿಚಂದ್ರ ಶೆಟ್ಟಿ ಅವರು ಸಾಮಾಜಿಕ ಜಾಲತಾಣ ಸಂರಚನೆ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಕಾರ್ಯಕಾರಿಣಿ ಸದಸ್ಯ ವಕೀಲರಾದ ವಿನಾಯಕ ಹೆಗಡೆ ಅವರು ಕಾನೂನು ಅರಿವು ಕುರಿತು ಸಭೆಯಲ್ಲಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಂಡಲದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಮೇಸ್ತ, ಜಿಲ್ಲಾ ಸಾಮಾಜಿಕ ಜಾಲತಾಣ ಸದಸ್ಯ ಗಣೇಶ ಮೇಸ್ತ, ಯುವಮೋರ್ಚಾ ಅಧ್ಯಕ್ಷ ಪ್ರವೀಣ್ ನಾಯ್ಕ, ಮಂಡಲ ಸಾಮಾಜಿಕ ಜಾಲತಾಣ ಸಂಚಾಲಕ ಶಿವಕುಮಾರ ನಾಯ್ಕ, ಸಹ ಸಂಚಾಲಕ ಸಚಿನ್ ಶೇಟ್ ಸದಸ್ಯರಾದ ಷಣ್ಮುಖ ನಾಯ್ಕ,ಜ್ಯೋತಿ ಹೆಗಡೆ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕೃಷ್ಣಪ್ಪ ನಾಯ್ಕ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
