

ಸಚಿವರ ಕಾರ್ಯಕ್ರಮ ಭದ್ರತೆಗೆ ಆಗಮಿಸುತ್ತಿದ್ದ ಡಿಆರ್ ವಾಹನ ಪಲ್ಟಿ : ಮೂವರಿಗೆ ಗಾಯ
ಸಚಿವ ಸಿಸಿ ಪಾಟೀಲ್ ಕಾರ್ಯಕ್ರಮಕ್ಕೆ ಭದ್ರತೆ ಒದಗಿಸಲು ಹೋಗುತ್ತಿದ್ದ ಡಿಆರ್ ವಾಹನವೊಂದು ಅಪಘಾತಕ್ಕೀಡಾಗಿ ಮೂವರು ಗಾಯಗೊಂಡಿರುವ ಘಟನೆ ಶಿರಸಿ ತಾಲೂಕಿನ ಕಡವೆ ಕ್ರಾಸ್ ನಲ್ಲಿ ನಡೆದಿದೆ.
ಶಿರಸಿ (ಉತ್ತರಕನ್ನಡ) : ಲೋಕೋಪಯೋಗಿ ಇಲಾಖೆ ಸಚಿವರ ಕಾರ್ಯಕ್ರಮದ ಭದ್ರತೆಗೆ ಹೊರಟಿದ್ದ ಡಿಆರ್ ವ್ಯಾನ್ ಪಲ್ಟಿಯಾಗಿ ಮೂವರು ಸಿಬ್ಬಂದಿ ಗಾಯಗೊಂಡಿರುವ ಘಟನೆ ಶಿರಸಿ ತಾಲೂಕಿನ ಕಡವೆ ಕ್ರಾಸ್ ನಲ್ಲಿ ನಡೆದಿದೆ.
ಶಿರಸಿಯ ಅಂಬೇಡ್ಕರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಚಿವ ಸಿಸಿ ಪಾಟೀಲ್ ಕಾರ್ಯಕ್ರಮಕ್ಕೆ ಭದ್ರತೆ ಒದಗಿಸಲು ಬರುತ್ತಿದ್ದ ಸಂದರ್ಭದಲ್ಲಿ ಎದುರಿಂದ ಬಂದ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ, ಚಾಲಕನ ನಿಯಂತ್ರಣ ತಪ್ಪಿ ವ್ಯಾನ್ ಪಲ್ಟಿಯಾಗಿದೆ.
ಒಟ್ಟು ಎಂಟು ಜನ ಡಿಆರ್ ಪೊಲೀಸರು ವಾಹನದಲ್ಲಿದರು. ಇವರಲ್ಲಿ ಮೂವರಿಗೆ ಗಾಯಗಳಾಗಿದ್ದು, ಶಿರಸಿ ಟಿ.ಎಸ್.ಎಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. (etbk)
