ಶುಕ್ರವಾರ ಮೆರವಣಿಗೆ…….. ಕೊಂಡ್ಲಿ ಶ್ರೀ ಕಾಳಿಕಾಭಾ ದೇವಿಯ ನೂತನ ಶಿಲಾಮೂರ್ತಿಹಾಗೂ ಪರಿವಾರ ದೇವರುಗಳ ಮೂರ್ತಿಗಳ ಮೆರವಣಿಗೆ ಸೆಪ್ಟೆಂಬರ್ 30ರಂದು ಮಧ್ಯಾಹ್ನ 3 ಗಂಟೆಗೆ ಶಿರಳಗಿಯ ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮೀಜಿ ಪುಪ್ಷಾರ್ಚನೆಯೊಂದಿಗೆ
ರವೀಂದ್ರನಗರ ಗಂಗಾಂಬಿಕಾ ದೇವಸ್ಥಾನದಿಂದ ಪ್ರಾರಂಭವಾಗಲಿದೆ.
ತಿಮ್ಮಪ್ಪ ನಾಯ್ಕ ವೃತ್ತ, ರಾಮಕೃಷ್ಣ ಹೆಗಡೆ ವ್ರತ್ತ, ರಾಜಮಾರ್ಗ, ರಥಬೀದಿ, ಬಸವಣ್ಣಗಲ್ಲಿ, ಹಾಳದಕಟ್ಟ, ಕೊಂಡ್ಲಿ ಮಾರಿಗುಡಿಮಾರಿಬೈಲ್, ಮಾರುತಿ ದೇವಸ್ಥಾನ ಮೂಲಕ ಕಾಳಿಂಕಾಂಬಾ ದೇವಸ್ಥಾನ ತಲುಪಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕ್ರಪೆಗೆ ಪಾತ್ರರಾಗಲು ಕಮೀಟಿಯವರು ಕೋರಿದ್ದಾರೆ.
ಬೇಡ್ಕಣಿ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ನೂತನ ಅಧ್ಯಕ್ಷರ ಆಯ್ಕೆ
ಸಿದ್ದಾಪುರ ತಾಲೂಕಿನ ಬೇಡ್ಕಣಿ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಗುರುವಾರ ನಡೆದಿದ್ದು
ಪ್ರಶಾಂತ್ ಕೆ. ನಾಯ್ಕ್ ಕುಂಬ್ರಿಗದ್ದೆ ಬೇಡ್ಕಣಿ ಆಯ್ಕೆಯಾಗಿದ್ದಾರೆ
ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಸ್ಪರ್ಧೆಯನ್ನು ನಡೆಸಿ 11 ಮತಗಳು ಚಲಾವಣೆ ಗೊಂಡಿದ್ದ ವು ಅದರಲ್ಲಿ ಪ್ರಶಾಂತ್ 6 ಮತಗಳನ್ನು ಪಡೆದು ಆಯ್ಕೆಯಾದರು.
ಮುಂದಿನ ಅವಧಿಗೆ ಆಯ್ಕೆ ಮಾಡಿದ ಸದಸ್ಯರಿಗೆ ಸಹಕರಿಸಿದ ಎಲ್ಲಾ ಅಧಿಕಾರಿಗಳಿಗೆ ಸಿಬ್ಬಂದಿಗಳಿಗೆ ಪ್ರಶಾಂತ್ ಅಭಿನಂದನೆಯನ್ನು ತಿಳಿಸಿದ್ದಾರೆ