
ತೆರಿಗೆ ರಹಿತವಾಗಿ ಭಾರತಕ್ಕೆ ಆಮದಾಗುತ್ತಿರುವ ವಿದೇಶಿ ಅಡಿಕೆ ಪ್ರಮಾಣವನ್ನು ನಿಯಂತ್ರಿಸುವುದು ಮತ್ತು ಹೆಚ್ಚಿನ ತೆರಿಗೆ ಆಕರಣೆಯಿಂದ ದೇಶೀ ಅಡಿಕೆಯ ಮಾರುಕಟ್ಟೆ ಸ್ಥಿರತೆ ಕಾಪಾಡಬಹುದೆಂದು ಸಿದ್ಧಾಪುರ ತಾಲೂಕಾವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘದ ಅಧ್ಯಕ್ಷ ಆರ್. ಎಂ. ಹೆಗಡೆ ಬಾಳೇಸರ ಹೇಳಿದ್ದಾರೆ.
ಇಂದು ಸಂಸ್ಥೆಯಲ್ಲಿ ಕರೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಟಿ.ಎಂ.ಎಸ್. ಯಾವಾಗಲೂ ರೈತ ಹಿತ ಕಾಪಾಡುವ ಸಹಕಾರಿ ಸಂಸ್ಥೆ ಭಾರತದ ಒಕ್ಕೂಟ ಸರ್ಕಾರ ಈ ವರ್ಷ ಭೂತಾನ್ ನಿಂದ ೧೭ ಸಾವಿರ ಮೆಟ್ರಿಕ್ ಟನ್ ಹಸಿ ಅಡಿಕೆಯನ್ನು ತೆರಿಗೆ ರಹಿತವಾಗಿ ಆಮದು ಮಾಡಿಕೊಳ್ಳುತ್ತಿದೆ. ಈ ಪ್ರಮಾಣದಿಂದ ಅಡಿಕೆ ಬೆಳೆ, ಮಾರುಕಟ್ಟೆ ಮೇಲೆ ಯಾವುದೇ ಪರಿಣಾಮ ಬೀರದಿದ್ದರೂ ಅಡಿಕೆ ಮಾರುಕಟ್ಟೆಯ ಬೆಲೆ ಸ್ಥಿರತೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಭಾರತ ಸರ್ಕಾರ ವಿದೇಶಿ ಅಡಿಕೆ ಆಮದಿನ ಮೇಲೆ ನಿಯಂತ್ರಣ ಹೇರಬೇಕು ಮತ್ತು ಆಮದಿನ ಎಂಆಯ್,ಪಿ.ಯನ್ನು ೩೮೦ ರೂಪಾಯಿಗಳಿಗೆ ಏರಿಸಬೇಕು ಎಂದು ಒತ್ತಾಯಿಸಿದರು.
