ಸಿದ್ದಾಪುರ :- ಮಕ್ಕಳಿಗೆ ಆಸ್ತಿಯನ್ನು ಮಾಡದೆ, ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಬೇಕು. ನಾವು ನಮ್ಮ ಯವೌನಾಸ್ಥೆಯಲ್ಲಿ ಮಾಡಿದ್ದು ಹಿರಿಯರಾದಾಗ ನಮಗೆ ಬಂದೇ ಬರುತ್ತದೆ ಎಂಬ ಜ್ಞಾನವಿಲ್ಲದಂತಾಗಿದೆ ಎಂದು ಸಿವಿಲ್ ನ್ಯಾಯಾಧೀಶರಾದ ತಿಮ್ಮಯ್ಯ ಜಿ ಅಭಿಪ್ರಾಯ ಪಟ್ಟರು.
ಅವರು ತಾಲೂಕು ಕಾನೂನು ಸೇವಾ ಸಮಿತಿ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ತಾಲೂಕು ಆಡಳಿತ, ತಾಲೂಕು ಪಂಚಾಯತ, ಪಟ್ಟಣ ಪಂಚಾಯತ, ಆರೋಗ್ಯ ಇಲಾಖೆ, ಪೋಲಿಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸಂಯೋಜನೆ ಯಲ್ಲಿ ತಾಲೂಕು ಸರಕಾರಿ ನಿವೃತ್ತ ನೌಕರರ ಸಂಘ ಘಟಕದ ವತಿಯಿಂದ ಪಟ್ಟಣದ ಬಾಲ ಭವನದಲ್ಲಿ ನಡೆದ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿರಿಯರನ್ನು ಗೌರವಿಸಬೇಕು. ಅದು ನಮ್ಮ ಕರ್ತವ್ಯ ಕೂಡ. ಹಳೆದು ಹೊಸತು ಇದ್ದರೆನೆ ಸೊಬಗು ಆಗ ಮಾತ್ರ ಜೀವನ ಅರ್ಥಪೂರ್ಣವಾಗುತ್ತದೆ ಎಂದ ಅವರು
ಹಿರಿಯ ನಾಗರಿಕರ ಕಾನೂನುಗಳ ಕುರಿತು ಮಾಹಿತಿ ನೀಡಿದರು.
ಆಷಾಕಿರಣ ಟ್ರಸ್ಟ್ ನ ಅಧ್ಯಕ್ಷ
ರವಿ ಹೆಗಡೆ ಹೂವಿನಮನೆ ಮಾತನಾಡಿವಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಟ್ಟರೆ ಕಾನೂನಿನ ಅಗತ್ಯತೆ ಇಲ್ಲಾ.
ಅರವತ್ತರೊಳಗೆ ನಾವು ಏನು ಮಾಡುತ್ತೇವೇ ಯೋ. ಅರವತ್ತಾದ ಮೇಲೆ ನಾವು ಅನುಭವಿಸುತ್ತೇವೆ, ಒಳ್ಳೆಯ ದು ಮಾಡಿದರೆ ಒಳ್ಳೆಯದು ಕೆಟ್ಟದ್ದು ಮಾಡಿದರೆ ಕಟ್ಟಿದ್ದು ಅನುಭವಿಸುತ್ತೇವೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಬಿ ಎನ್ ವಾಸರೆ ಮಾತನಾಡಿ ಹಿರಿಯ ನಾಗರಿಕರು ಮಕ್ಕಳಿಗೆ ಜವಬ್ದಾರಿ ಯಿಂದ ಸಂಸ್ಕಾರ ಕೊಡುವುದು ಕರ್ತವ್ಯ ಕೂಡ. ಪ್ರೀತಿ, ಪ್ರೇಮ ಎಂದರೆ ಹಿರಿಯ ನಾಗರಿಕರಲ್ಲಿ ಕಾಣಬೇಕು. ಕಾನೂನುಗಳು ಬೇಡ ಎನ್ನ ರೀತಿಯಲ್ಲಿ ಮಕ್ಕಳನ್ನು ಬೆಳೆಸೋಣ. ಹಿರಿಯರು ಕಿರಿಯರು ಎನ್ನುವ ಭಾವನೆ ಮಕ್ಕಳಲ್ಲಿ ಮೂಡದ ಹಾಗೆ ಬೆಳೆಸುವ ಸಾಮಾಜಿಕ ಹೊಣೆಗಾರಿಕೆ ನಮ್ಮಲ್ಲಿ ಇರಬೇಕು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಗೌಡರ್ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಬಿ ಎನ್ ವಾಸರೆ, ಆಷಾಕಿರಣ ಟ್ರಸ್ಟ್ ನ ಅಧ್ಯಕ್ಷ
ರವಿ ಹೆಗಡೆ ಹೂವಿನಮನೆ
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ,
ಸಹಾಯಕ ಸರಕಾರಿ ಅಭಿಯೋಜಕರಾದ, ಚಂದ್ರಶೇಖರ ಎಚ್ ಎಸ್, ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ತಮ್ಮಣ್ಣ ಬೀಗಾರ್, ವಕೀಲರ ಸಂಘದ ಅಧ್ಯಕ್ಷ ಜೈರಾಮ ಜಿ ಹೆಗಡೆ, ಲಯನ್ಸ್ ಕ್ಲಬ್ ನ ಅಧ್ಯಕ್ಷ ಆರ್ ಎಂ ಪಾಟೀಲ್, ತಾಲೂಕು ಕ.ಸಾ.ಪ ದ ಅಧ್ಯಕ್ಷ ಗೋಪಾಲ ನಾಯ್ಕ ಭಾಶಿ ಉಪಸ್ಥಿತರಿದ್ದರು.
ನಾಗರಾಜ ಎಚ್ ಪ್ರಾರ್ಥಿಸಿದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಗೌಡರ್ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದು, ಸ್ವಾಗತಿಸಿದರು.
ಜಿ ಜಿ ಹೆಗಡೆ ಬಾಳಗೋಡ ನಿರೂಪಿಸಿದರು.
ಸಿದ್ದಾಪುರ: ಕೊಂಡ್ಲಿ ಶ್ರೀ ಕಾಳಿಕಾಭಾ ದೇವಿಯ ನೂತನ ಶಿಲಾಮೂರ್ತಿಹಾಗೂ ಪರಿವಾರ ದೇವರುಗಳ ಮೂರ್ತಿಗಳ ಮೆರವಣಿಗೆ ಶಿರಳಗಿಯ ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮೀಜಿ ಪುಪ್ಷಾರ್ಚನೆ ಮಾಡುವ ಮೂಲಕ
ರವೀಂದ್ರನಗರ ಗಂಗಾಂಬಿಕಾ ದೇವಸ್ಥಾನದಿಂದ ಚಾಲನೆ ನೀಡಿದರು.
ತಿಮ್ಮಪ್ಪ ನಾಯ್ಕ ವೃತ್ತ, ರಾಮಕೃಷ್ಣ ಹೆಗಡೆ ವ್ರತ್ತ, ರಾಜಮಾರ್ಗ, ರಥಬೀದಿ, ಬಸವಣ್ಣಗಲ್ಲಿ, ಹಾಳದಕಟ್ಟ, ಕೊಂಡ್ಲಿ ಮಾರಿಗುಡಿಮಾರಿಬೈಲ್, ಮಾರುತಿ ದೇವಸ್ಥಾನ ಮೂಲಕ ಕಾಳಿಂಕಾಂಬಾ ದೇವಸ್ಥಾನ ತಲುಪಿತು.
ಮಹಿಳೆಯರ ಪೂರ್ಣ ಕುಂಬ ಹಾಗೂ ಪಂಚವಾದ್ಯ ಮತ್ತು ಉಡುಪಿಯ ಚಂಡೆ ವಾದನ ಗಮನ ಸೆಳೆಯಿತು.
ಮೆರವಣಿಗೆ ಯೂದ್ದಕ್ಕೂ ಸಾವಿರಾರು ಭಕ್ತಾಧಿಗಳು ಪಾಲ್ಗೊಂಡು ದೇವಿಯ ಕ್ರಪಗೆ ಪಾತ್ರರಾದರು. .