ಸಿದ್ದಾಪುರ: ಸಿದ್ದಾಪುರದ ಪಟ್ಟಣಪಂಚಾಯಿತಿ ಯಲ್ಲಿ ಗಾಂಧೀಜಿ ಹಾಗೂ ಲಾಲಬಹೂದ್ದೂರ ಶಾಸ್ತ್ರಿ ಜನ್ಮ ದಿನಾಚರಣೆಗಳು ನಡೆದವು.
ಸ್ವಚ್ಚತೆಗಾಗಿ ಸಂಯುಕ್ತ ಭಾರತ ಕಾರ್ಯ ಕ್ರಮ ದಡಿಯಲ್ಲಿ ನಡೆದ ಪ್ರಬಂಧ, ಚಿತ್ರಕಲೆ, ರಸಪ್ರಶ್ನೆ, ಹಾಗೂ ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾದ ವಿಧ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಪಟ್ಟಣ ಪಂಚಾತ ಅಧ್ಯಕ್ಷೆ ಚಂದ್ರಕಲಾ ಎಸ್ ನಾಯ್ಕ ಕಾರ್ಯ ಕ್ರಮ ಉದ್ಘಾಟಿಸಿ ಜಯಂತಿಗೆ ಶುಭ ಕೋರಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ವಿನಯ ಹೊನ್ನೆಗುಂಡಿ ಮಾತನಾಡಿ ಗಾಂಧೀಜಿ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದರು ಅವರ ತ್ಯಾಗ ಬಲಿದಾನ ದಿಂದ ನಾವು ಇಂದು ಸ್ವತಂತ್ರವಾಗಿದ್ದೇವೆ. ಅವರ ಆದರ್ಶ ಅಳವಡಿಸಿಕೊಳ್ಳ ಬೇಕು ಎಂದರು.
ಪಟ್ಟಣ ಪಂಚಾಯಿತ ಮುಖ್ಯಾಧಿಕಾರಿ ಕುಮಾರ ನಾಯ್ಕ ಪ್ರಾಸ್ತಾವಿಕ ಮಾತನಾಡಿ ತಾಳ್ಮೆ ಇರುವ ವ್ಯಕ್ತಿ ಏನನ್ನಾದರೂ ಸಾಧಿಸುತ್ತಾನೆ. ಗಾಂಧೀಜಿ ತಾಳ್ಮೆ, ಸತ್ಯಾಗ್ರಹದ ಮೂಲಕ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಕಸ ಮುಕ್ತ ಪಟ್ಟಣದ ಲ್ಲಿ ಸಿದ್ದಾಪುರ 2ನೇ ಸ್ಥಾನ ದಲ್ಲಿದೆ. ಇದು ನಮ್ನೇಲ್ಲರ ಜವಾಬ್ದಾರಿ ಹೆಚ್ಚಿಸಿದೆ ಎಂದರು.
ಸದಸ್ಯ ವೆಂಕೊಬಾ, ವಿಜಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕ ಶಿವಶಂಕರ ಎನ್ ಕೆ. ಉಪಸ್ಥಿತರಿದ್ದರು.
ಸುಮಿತ್ರಾ ಶೇಟ್ ಪ್ರಾರ್ಥಿಸಿ ದರು. ಆರೋಗ್ಯಾಧಿಕಾರಿ ಲಕ್ಷ್ಮೀ ನಾಯ್ಕ ನಿರೂಪಿಸಿ ವಂದಿಸಿದರು.
ಸಿದ್ದಾಪುರ:- ತಾಲೂಕಿನ ಕಡಕೇರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಜಯಂತಿ ಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಡಿ.ಎಂ.ಸಿ ಅಧ್ಯಕ್ಷ ಸುರೇಶ ಮಡಿವಾಳ ಮಕ್ಕಳು ಗಾಂಧೀಜಿ ಮತ್ತು ಶಾಸ್ತ್ರಿ ಯವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಕೊಳ್ಳಬೇಕು. ಸತ್ಯ, ಅಹಿಂಸೆ, ಸ್ನೇಹ, ಗುಣಗಳನ್ನು ಅಳವಡಿಸಿಕೊಂಡು ಎಲ್ಲರಲ್ಲೂ ಪ್ರೀತಿಯಿಂದ ಸಹ ಬಾಳ್ವೆ ಮಾಡಬೇಕು. ಗುರು ಹಿರಿಯರನ್ನು ಗೌರವಿಸಬೇಕು. ನಮ್ಮ ಸುತ್ತಲಿನ ಪರಿಸರವನ್ನು ಶುದ್ದಿ ಮಾಡುವ ಮೊದಲು ನಮ್ಮ ಮನಸ್ಸಿನ ಕೊಳೆಯನ್ನು ಶುದ್ದಿ ಮಾಡಿಕೊಳ್ಳಬೇಕು ಎಂದರು.
ಮುಖ್ಯ ಶಿಕ್ಷಕಿ ಮಾಯಾ ಭಟ್ ಮಾತನಾಡಿ ನಮ್ಮ ನಡುವೆ ಆಗಿ ಹೋದ ಮಹಾಪುರುಷರ ಆದರ್ಶ ಗುಣಗಳನ್ನು ಬೆಳಸಿಕೊಂಡು ಸಮಾಜಕ್ಕೆ ನಮ್ಮಿಂದಾದ ಕೊಡುಗೆ ನೀಡಬೇಕು ಎಂದರು.
ಶಾಲೆಯ ಸುತ್ತಮುತ್ತ ಸ್ವಚ್ಚತಾ ಕಾರ್ಯಮಾಡಲಾಯಿತು.
ಎಸ್.ಡಿಎಮ್.ಸಿ ಸದಸ್ಯರಾದ ಎಚ್.ಟಿ ವಾಸು, ಗಣಪತಿ ಆಯ್ ನಾಯ್ಕ, ಶಿಕ್ಷಕರಾದ ಮಂಜುಳಾ ಪಟಗಾರ್, ಕೇಶವ ಜಿ ನಾಯ್ಕ, ಶಾಂತಲಾ ಗಾಂವ್ಕರ್, ಸುಮತಿ ನಾಯ್ಕ ಅಡಿಗೆ ಸಿಬ್ಬಂದಿ ಗಳು ಉಪಸ್ಥಿತರಿದ್ದರು.
ಸಿದ್ದಾಪುರ: ಪೌರಕಾರ್ಮಿಕರ ದಿನಾಚರಣೆ ಪ್ರಯುಕ್ತ ಸಿದ್ದಾಪುರ ಪಟ್ಟಣ ಪಂಚಾಯತಿಯಲ್ಲಿ ಪೌರ ಕಾರ್ಮಿಕ ಸಿಬ್ಬಂದಿಗಳಿಗೆ ಸನ್ಮಾನಿಸಿ, ಗೌರವಧನದ ಚೆಕ್ ಗಳನ್ನು ವಿತರಿಸಲಾಯಿತು.
ಇದೇ ವೇಳೆ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣಾ ಶಿಬಿರ ಮತ್ತು ವಿವಿಧ ಸ್ಪರ್ಧೆ ಆಯೋಜಿಸಿ ಬಹುಮಾನ ವಿತರಿಸಲಾಯಿತು.
ಪಟ್ಟಣ ಪಂಚಾಯತ ಉಪಾಧ್ಯಕ್ಷ ರವಿಕುಮಾರ ನಾಯ್ಕ ಮಾತನಾಡಿ, ಪೌರಕಾರ್ಮಿಕರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಸರಕಾರದ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು
ಈ ವೇಳೆ ಪಟ್ಟಣ ಪಂಚಾಯತ ಅಧ್ಯಕ್ಷೆ ಚಂದ್ರಕಲಾ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ವಿನಯ್ ಹೊನ್ನೆಗುಂಡಿ, ಸದಸ್ಯರಾದ ಕವಿತಾ ಹೆಗಡೆ, ವೆಂಕೋಬ, ನಂದನ ಬೋರ್ಕರ, ರಾಧಿಕಾ ಕಾನಗೋಡ, ನಾಮನಿರ್ದೇಶಿತ ಸದಸ್ಯರಾದ ಸುರೇಶ ನಾಯ್ಕ, ರಾಜೇಂದ್ರ ಕಿಂದ್ರಿ, ಮಂಜುನಾಥ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಕುಮಾರ ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರೋಗ್ಯ ಇಲಾಖೆಯ ಡಾ.ನಾಡಿಗೇರ ಆರೋಗ್ಯ ಮಾಹಿತಿ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ದೀಪಾ ಇಲಾಖೆಯ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಆರೋಗ್ಯ ನಿರೀಕ್ಷಕಿ ಲಕ್ಷ್ಮೀ ನಾಯ್ಕ ನಿರ್ವಹಿಸಿದರು. ರಮೇಶ ಕೆ. ಎಸ್. ವಂದಿಸಿದರು.