ಎಚ್ಚರ.. ನೀನೂ ಸಾಯಲಾರಂಭಿಸುತ್ತೀಯೆ…. !

ಅನುವಾದ ’ You start dying slowly ’ (Pablo Neruda)

ಸಾವಕಾಶವಾಗಿ ನೀನು ಸಾಯಲಾರಂಭಿಸುತ್ತೀಯೆ
ನೀನು ಸಂಚರಿಸದಿದ್ದರೆ
ನೀನು ಓದದಿದ್ದರೆ
ನೀನು ಜೀವದ ದನಿಗಳಿಗೆ ಕಿವಿಗೊಡದಿದ್ದರೆ
ನಿನ್ನನ್ನು ನೀನೇ ಮೆಚ್ಚಿಕೊಳ್ಳದಿದ್ದರೆ

ಸಾವಕಾಶವಾಗಿ ನೀನು ಸಾಯಲಾರಂಭಿಸುತ್ತೀಯೆ
ನಿನ್ನ ಸ್ವಾಭಿಮಾನವ ನೀನು ಕೊಂದುಕೊಂಡಾಗ
ಅನ್ಯರು ಸಹಾಯ ಮಾಡುವುದಕ್ಕೆ ನೀನು ಬಿಡದಿದ್ದಾಗ

ಸಾವಕಾಶವಾಗಿ ನೀನು ಸಾಯಲಾರಂಭಿಸುತ್ತೀಯೆ
ನೀನು ನಿನ್ನ ಚಟಗಳ ಗುಲಾಮನಾದಾಗ
ದಿನವೂ ಒಂದೇ ದಾರಿಯಲ್ಲಿ ನಡೆಯ ತೊಡಗಿದಾಗ
ನೀನು ನಿನ್ನ ದಿನಚರಿಯನ್ನು ಬದಲಿಸದಿದ್ದಾಗ
ನೀನು ಬೇರೆ ಬೇರೆ ಬಣ್ಣಗಳ ತೊಡದಿದ್ದಾಗ
ಅಥವಾ ಗೊತ್ತಿಲ್ಲದವರೊಂದಿಗೆ ನೀನು ಮಾತನ್ನೇ ಆಡದಿದ್ದಾಗ

ಸಾವಕಾಶವಾಗಿ ನೀನು ಸಾಯಲಾರಂಭಿಸುತ್ತೀಯೆ
ತೀವ್ರ ಬಯಕೆಯ ಭಾವನೆಗಳನ್ನು ನೀನು ಕಡೆಗಣಿಸಿದಾಗ
ನಿನ್ನ ಕಣ್ಣುಗಳು ಮಿನುಗುವಂತೆ ಮಾಡುವ
ಮತ್ತು ನಿನ್ನ ಎದೆ ಬಡಿತ ಹೆಚ್ಚಿಸುವ
ಅವುಗಳ ಪ್ರಕ್ಷುಬ್ದ ಆವೇಶದಿಂದ ನೀನು ನುಣುಚಿಕೊಂಡಾಗ

ಸಾವಕಾಶವಾಗಿ ನೀನು ಸಾಯಲಾರಂಭಿಸುತ್ತೀಯೆ
ನಿನ್ನ ಕೆಲಸ ಮತ್ತು ಪ್ರೀತಿ ನಿನಗೆ ತೃಪ್ತಿ ತರದಿದ್ದಾಗ
ನಿನ್ನ ಬದುಕನ್ನು ನೀನು ಬದಲಿಸಿ ಕೊಳ್ಳದಿದ್ದರೆ
ಅನಿಶ್ಚಿತತೆಯ ಸಲುವಾಗಿ ನಿನ್ನ ಸುರಕ್ಷಿತತೆಯನ್ನು ಅಪಾಯಕೊಡ್ಡದಿದ್ದರೆ
ಕನಸಿನ ಹಿಂದೆ ಬಿದ್ದೋಡದಿದ್ದರೆ
ಬದುಕಿನಲ್ಲಿ ಕನಿಷ್ಟ ಒಮ್ಮೆಯಾದರೂ
ಅರ್ಥಪೂರ್ಣ ಉಪದೇಶದಿಂದ
ತಲೆ ತಪ್ಪಿಸಿಕೊಂಡು ಓಡದಿದ್ದರೆ.

You start dying slowly
if you do not travel,
if you do not read,
If you do not listen to the sounds of life,
If you do not appreciate yourself.

You start dying slowly
When you kill your self-esteem;
When you do not let others help you.

You start dying slowly
If you become a slave of your habits,
Walking everyday on the same paths…
If you do not change your routine,
If you do not wear different colours
Or you do not speak to those you don’t know.

You start dying slowly
If you avoid to feel passion
And their turbulent emotions;
Those which make your eyes glisten
And your heart beat fast.

You start dying slowly
If you do not change your life when you are not
satisfied with your job, or with your love,
If you do not risk what is safe for the uncertain,
If you do not go after a dream,
If you do not allow yourself,
At least once in your lifetime,
To run away from sensible advice…

Pablo Neruda
ಅನುವಾದ- ಶ್ರೀಪಾದ ಹೆಗಡೆ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಜಾಗೃತೆ ವಾಹನ ಓಡಾಟ ಹೆಚ್ಚಿದೆ, ಮಂಗಗಳು ಸಾಯುತ್ತಿವೆ! ಸಾ. ಸಮ್ಮೇಳನ ಮುಗಿದು ಹೋದ ಮೇಲೆ……

ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯ- ಸಂಸ್ಕೃತಿ ಅಭಿವೃದ್ಧಿ ಬಗ್ಗೆ ಕ್ಷಕಿರಣ ಬೀರುವ ಉತ್ತರ ಕನ್ನಡ ಜಿಲ್ಲೆಯ ೨೪ ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದೆ....

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *