


ಸಿದ್ದಾಪುರ ದೊಡ್ಮನೆ ಜಿಲ್ಲಾ ಪಂಚಾಯತ್ ಕ್ಷೇತ್ರದ ಮಾಜಿ ಸದಸ್ಯೆ ಪ್ರೇಮಾ ನಾಯ್ಕ ಇಂದು ಮುಂಜಾನೆ ಕೊನೆ ಉಸಿರೆಳೆ ದಿದ್ದಾರೆ. ಜನತಾ ದಳದಿಂದ ಒಂದು ಅವಧಿಗೆ ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಸದಸ್ಯ ರಾಗಿದ್ದ ಪ್ರೇಮಾ ಬಾಯಿ ಪತಿ, ಪುತ್ರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ತಾಲೂಕಾ ಪೋಸ್ಟ್ ಮಾಸ್ಟರ್ ಆಗಿದ್ದ ಪತಿ ಎನ್. ಡಿ. ನಾಯ್ಕ ಜೊತೆ ಕೃಷಿಕ ರಾಗಿ, ಗೃಹಿಣಿಯಾಗಿ ರಾಜಕೀಯ ವನ್ನು ಸಮಾಜಸೇವೆಗೆ ಬಳಸಿಕೊಂಡಿದ್ದ ಪ್ರೇಮಾ ನಾಯ್ಕ ಒಂದು ಅವಧಿಯ ಜಿ. ಪಂ. ಸದಸ್ಯತ್ವದ ನಂತರ ರಾಜಕೀಯದಿಂದಲೂ ಅಂತರ ಕಾಯ್ದುಕೊಂಡಿದ್ದರು. ಪ್ರೇಮಾ ನಾಯ್ಕ ನಿಧನಕ್ಕೆ ಅನೇಕರು ಸಂತಾಪ ಸೂಚಿಸಿದ್ದಾರೆ.
