

ಸಿದ್ದಾಪುರ- ಶಿರ್ಸಿ ಸಿದ್ದಾಪುರ ಕ್ಷೇತ್ರದ ಆಮ್ ಆದ್ಮಿ ಪಾರ್ಟಿಯ ಸಿದ್ದಾಪುರ್ ಕಚೇರಿಯನ್ನು ಪಟ್ಟಣದ ಅಶೋಕ ರಸ್ತೆ ಎನ ಬಿ ಹೊಸೂರು ಮನೆಯ ಮಹಡಿ ಮೇಲೆ ಉದ್ಘಾಟಿಸಲಾಯಿತು.
. ಇದೇ ಸಂದರ್ಭದಲ್ಲಿ ಕರ್ನಾಟಕ ಸೇವಾ
ರತ್ನ ಪ್ರಶಸ್ತಿ ಪಡೆದಿರುವ ಶಂಕರಮೂರ್ತಿ ಕತ್ತಿ ಯವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ
ಸನ್ಮಾನ ಸ್ವೀಕರಿಸಿದ ಶಂಕರಮೂರ್ತಿ ಕತ್ತಿ ಮಾತನಾಡಿ ಮನುಷ್ಯ ಹುಟ್ಟಿದ ಮೇಲೆ ಏನನ್ನಾದರೂ ಮಾಡಲೇಬೇಕು ನಾನು ಮಾಡಿದ ಅಳಿಲುಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಿದ್ದಾರೆ ವಿಜಯದಶಮಿಯ ಇಂದು ನಾವು ವಿಜಯಪತಾಕೆ ಹಾರಿಸೋಣ ಎಂದರು.
ಆಮ ಆದ್ಮಿ ಪಾರ್ಟಿಯ ವೀರಭದ್ರ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಶಿರ್ಸಿ ಸಿದ್ದಾಪುರ ಕ್ಷೇತ್ರದಲ್ಲಿ ರೈತ ಸಂಘದವರು ಆಮ್ ಆದ್ಮಿ ಪಾರ್ಟಿಯೊಂದಿಗೆ ವಿಲೀನವಾಗಿದ್ದೇವೆ ಕಾಂಗ್ರೆಸ್ ಮತ್ತು ಬಿಜೆಪಿ ಅಭಿವೃದ್ಧಿ ಹೆಸರಲ್ಲಿ ಲೂಟಿ ಮಾಡಿದ್ದಾರೆ ಭ್ರಷ್ಟಾಚಾರವನ್ನ ತೊಲಗಿಸಲು ಆಮ್ ಆದ್ಮಿ ಪಣತೊಟ್ಟಿರುವ ದರಿಂದ ಶಿರ್ಸಿ ಸಿದ್ದಾಪುರದಲ್ಲಿ ಪಕ್ಷವನ್ನು ಗೆಲ್ಲಿಸಿ ಅಧಿಕಾರಕ್ಕೆ ತರುತ್ತೇವೆ ಎಂದರು.
ಅಮ್ ಆದ್ಮಿ ಪಾರ್ಟಿಯ ಅಬ್ಜಲ್, ಮನೋಹರ ನಾಯ್ಕ, ಹನೀಫ್, ವಿನಾಯಕ ನಾಯ್ಕ ಹಲಸಿಮನೆ, ಮಾತನಾಡಿದರು
ತಾಲೂಧ್ಯಕ್ಷ ಲಕ್ಷ್ಮಣ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ರಾಘವೇಂದ್ರ ನಾಯ್ಕ ಕಾವಚೂರ್ ನಿರೂಪಿಸಿದರು ಐ,ಸಿ ನಾಯ್ಕ ಹುಲಿಮನೆ ಸ್ವಾಗತಿಸಿದರು.


ಪ್ರಥಮ ವರ್ಷದ ಪ್ರತಿಷ್ಠಾಪನೆ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು
ಪ್ರತಿದಿನ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ಪ್ರಸಾದ ವಿತರಣೆ, ಸಂಜೆ ಸಂಗೀತ ಕಾರ್ಯಕ್ರಮ ಯಶಶ್ವಿಯಾಗಿ ನಡೆದವು.
ಭಕ್ತರು ಶ್ರೀ ದೇವರಿಗೆ ಪ್ರತಿನಿತ್ಯ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು
ವಿಸರ್ಜನೆ ಮೆರವಣಿಗೆಯಲ್ಲಿ ಹುಲಿ ವೇಷ ನೃತ್ಯ ಜನರ ಗಮನ ಸೆಳೆಯಿತು ಅತ್ಯಂತ ವಿಜೃಂಭಣೆಯಿಂದ ಪ್ರಥಮ ವರ್ಷದ ಆಚರಣೆ ಸಂಪನ್ನ ಗೊಂಡಿತು.
