ಅಕ್ಟೋಬರ್ 2 ಗಾಂಧಿ ಜಯಂತಿಯ ದಿನದಂದು ಸಿದ್ದಾಪುರದ ಲಿಟ್ಲ್ ಫ್ಲವರ್ ಶಾಲೆಯಲ್ಲಿ ಗಾಂಧೀಜಿ, ಶಾಸ್ತ್ರೀ ರವರ ಫೋಟೋ ಪಕ್ಕದಲ್ಲಿ ಒಬ್ಬ ಕ್ರಿಶ್ಚಿಯನ್ ಸಂತಳ ಫೋಟೋ ಇಟ್ಟು ಪೂಜೆ ಮಾಡಿದ್ದಾರೆ. ಹಾಗೂ ಕ್ರಿಶ್ಚಿಯನ್ ಮತದ ಬಗ್ಗೆ ಗಾಂಧೀಜಿಯವರಿಗೆ ಒಲವಿತ್ತು ಎಂದು ಬೋಧನೆಯನ್ನು ಮಾಡಿದ್ದಾರೆ. ಶಾಲೆ ಎನ್ನುವುದು ಯಾವುದೇ ಒಂದು ಜಾತಿಗೆ ಸೀಮತವಾದದ್ದಲ್ಲ. ಲಿಟಲ್ ಫ್ಲವರ್ ಶಾಲೆ ಎಂದರೆ ಇದು ಎಲ್ಲರ ಶಾಲೆ ಎಂಬ ಭಾವನೆ ಸಿದ್ದಾಪುರದವರಿಗಿದೆ. ಇದೊಂದು ಸರ್ಕಾರದ ಅನುದಾನಿತ ಶಾಲೆಯಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆ ಮರುಕಳಿಸಬಾರದು ಈ ಬಗ್ಗೆ ನಾವು ಇಂದು ಮನವಿಯನ್ನು ಕೊಡುತ್ತಿದ್ದೇವೆ ಮತ್ತು ಇದೇ ರೀತಿ ಆದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟವನ್ನು ನಡೆಸುತ್ತೇವೆ. ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯದ ಬಗ್ಗೆ ಸೂಕ್ತವಾದ ಕ್ರಮವನ್ನು ಕೈಗೊಳ್ಳಬೇಕು ಎಂದು ತಾಲೂಕ ಭಜರಂಗ ದಳದವರು ತಹಸೀಲ್ದಾರ್ ರಿಗೆ ಮನವಿ ಸಲ್ಲಿಸಿದರು.
ರಾಷ್ಟ್ರೀಯ ಹಬ್ಬವಾದ ಗಾಂಧೀ ಜಯಂತಿಯ ದಿನ ಶಾಸ್ತ್ರೀಜೀಯವರ ಜನ್ಮದಿನ ಸಹ ಇದ್ದು, ಅವರಿಬ್ಬರ ಫೋಟೋಗಳಿಗೆ ಪೂಜೆ ಸಲ್ಲಿಸುವುದು ಮಾತ್ರ ಸರಿಯೆ ವಿನಃ ಯಾವುದೋ ಬೇರೊಬ್ಬರ ಫೋಟೋವನ್ನು ಮಹಾತ್ಮರ ಜಯಂತಿಯಂದು ಅವರ ಫೋಟೋ ಜೊತೆಗಿಟ್ಟು ಪೂಜಿಸುವುದು ಮಹನೀಯರಿಗೆ ಮಾಡಿದ ಅವಮಾನ ಮತ್ತು ಸಾರ್ವಜನಿಕ ಸ್ಥಳವಾದ ಶಾಲೆಯಲ್ಲಿ ಎಲ್ಲಾ ಧರ್ಮದ ಮಕ್ಕಳಿರುವಾಗ ಮುಗ್ಧ ಮಕ್ಕಳಲ್ಲಿ ಯಾವುದೋ ಒಂದು ಧರ್ಮದ ಪ್ರಚಾರ ಮಾಡುವುದು ಸರಿಯಲ್ಲ.
ಕಾರಣ ಈ ಮೇಲಿನ ಎಲ್ಲಾ ಕಾರಣಗಳಿಂದ ಲಿಟ್ಲಫ್ಲವರ್ ಅನುದಾನಿತ ಶಾಲೆ ಸಿದ್ದಾಪರ ಇದರ ಶಿಕ್ಷಕರು ಕಾನೂನನ್ನು ಉಲ್ಲಂಘಿಸಿದ್ದಾರೆ. ಕಾರಣ ಶಾಲಾ ಶಿಕ್ಷರು ಮತ್ತು ಆಡಳಿತ ಮಂಡಳಿಯವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಈ ಮೂಲಕ ನಿಮ್ಮಲ್ಲಿ ದೂರು ನೀಡುತ್ತಿದ್ದು, ಶಾಲೆಯ ಮುಖ್ಯಸ್ಥರು ಮತ್ತು ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ಜರುತಿಸಲು ವಿನಂತಿಸುತ್ತೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ