

ನವೆಂಬರ್ ೧೯ ರ ಶನಿವಾರ ಸಾಯಂಕಾಲ ಸಿದ್ಧಾಪುರದ ತಾಲೂಕಾ ಕ್ರೀಡಾಂಗಣದಲ್ಲಿ ಅಪ್ಪು ಡಾನ್ಸ್ ಟ್ರೋಫಿ ನೃತ್ಯ ಸ್ಫರ್ಧೆ ಮತ್ತು ಮ್ಯಾಟ್ ಕಬ್ಬಡ್ಡಿಯ ಸಮಾಜಮುಖಿ ಟ್ರೋಫಿ ಗಳ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ನಡೆಯಲಿವೆ.
ಸುಮಾರು ಎರಡು ದಶಕಗಳಿಂದ ಸಾಮಾಜಿಕ, ಪರಿಸರ, ಸಾಂಸ್ಕೃತಿಕ ಕೆಲಸಗಳನ್ನು ಮಾಡುತ್ತಾ ಸಮಾಜಮುಖಿಯಾಗಿರುವ ಸಮಾಜಮುಖಿ.ನೆಟ್ ಸಂಸ್ಥೆ ಕನಸು ಸೇವಾ ಸಂಸ್ಥೆಯೊಂದಿಗೆ ಅನೇಕ ಕಾರ್ಯಕ್ರಮಗಳನ್ನು ಮಾಡಿದೆ. ಇದೇ ಮೊದಲ ಬಾರಿ ಸಾಂಸ್ಕೃತಿಕ ಅಭಿವೃದ್ಧಿ ಚಿಂತನೆಯ ಜೊತೆಗೆ ಕ್ರೀಡಾ ಚಟುವಟಿಕೆ ನಡೆಸುತ್ತಿರುವ ಈ ಸಂಸ್ಥೆ ಯೋಜಿಸಿರುವ ಪಂದ್ಯಾಟದ ಪ್ರಚಾರ ಸಾಮಗ್ರಿಗಳನ್ನು ನಗರದ ಪದ್ಮರಾಜ್ ಜ್ಯುವೆಲ್ಲರಿಯಲ್ಲಿ ಗಣಪತಿ ಶೇಟ್ ಮತ್ತು ನಿವೃತ್ತ ಕೃಷಿ ಸಹಾಯಕ ಆಯ್. ಕೆ. ನಾಯ್ಕ ಗೋಳಗೋಡ್ ಬಿಡುಗಡೆ ಮಾಡಿದರು.
ಸಮಾಜಮುಖಿ ಸಂಸ್ಥೆ ಮಲೆನಾಡಿನ ಜನಜೀವನದ ರಾಯಭಾರಿಯಾಗಿದ್ದು ಕಳೆದ ಎರಡು ದಶಕಗಳಿಂದ ಸಮಾಜಮುಖಿ ರಾಜಿಯಿಲ್ಲದ ಸಾಮಾಜಿಕ ಜಾಗೃತಿಯ ಹೋರಾಟ ನಡೆಸುತ್ತಿರುವುದಕ್ಕೆ ಅಭಿನಂದಿಸಿದರು.

ಅಪ್ಪು ಡ್ಯಾನ್ಸ್ ಟ್ರೋಫಿ ಮತ್ತು ಸಮಾಜಮುಖಿ ಟ್ರೋಫಿಗಳು ನೃತ್ಯ,ಕ್ರೀಡೆಗಳ ಜೊತೆಗೆ ಈ ನೆಲದ ಅಸ್ಮಿತೆಯ ಧ್ಯೋತಕ ಎಂದರು


