ಭಾರತ ಜೋಡೋ ಬಿಟ್ಟು ಭಾರತ ಚೋಡೋ ಮಾಡಿದ ನಿವೇದಿತ್‌ ಆಳ್ವ -ರಾಜಕೀಯ-೨-

ನಿವೇದಿತ್‌ ಆಳ್ವ, ಸುಶಿಕ್ಷಿತ,ಸುರದ್ರೂಪಿ,ಕೆಲಸಗಾರ ಪರಂತು ಇಂಡಿಯಾದಲ್ಲೇ ಅವರಿಗೆ ಒಂದೂ ವಿಧಾನಸಭಾ ಕ್ಷೇತ್ರವಿಲ್ಲ,ಲೋಕಸಭಾ ಕ್ಷೇತ್ರ ಖಾಲಿ ಇಲ್ಲ!

ನಿವೇದಿತ್‌ ಆಳ್ವ ಕಾಂಗ್ರೆಸ್‌ ಹೈಕಮಾಂಡ್‌ ವಲಯದಲ್ಲಿ

ಭಾರೀ ಪ್ರಭಾವಿಯಂತೆ ಎನ್ನುವ ಆರೋಪಗಳಿವೆ.

ಬಾಬು ಯಾನೆ ನಿವೇದಿತ್‌ ಆಳ್ವ ಮನಸ್ಸು ಮಾಡಿದರೆ ರಾಜ್ಯಸಭೆಗೋ, ವಿಧಾನಪರಿಷತ್‌ ಗೋ ನೇಮಕವಾಗಿ ಹೋಗಬಲ್ಲರು ಆದರೆ ಅವರಿಗೆ ಅಲ್ಪಸಂಖ್ಯಾತ ಅಥವಾ ಕ್ರಿಶ್ಚನ್‌ ಕೋಟಾದಲ್ಲಾದರೂ ವಿಧಾನಸಭೆ ಅಥವಾ ಲೋಕಸಭೆಗೇ ಕಾಂಗ್ರೆಸ್‌ ಟಿಕೇಟ್‌ ಬೇಕಂತೆ……

ಇಂಥ ವಿಶೇಶಗಳ ನಿವೇದಿತ್‌ ಆಳ್ವ ಒಮ್ಮೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಭಿವೃದ್ಧಿ ಕೆಲಸ ಮಾಡಿದ್ದೇನೋ ಸುಳ್ಳಲ್ಲ ಆದರೆ ಕಾಂಗ್ರೆಸ್‌ ನ ಅಲ್ಪಸಂಖ್ಯಾತರ ಒಲವಿಗೆ ಸಾರ್ವಜನಿಕ ವಿರೋಧವಿರುವುದರಿಂದ ಆಳ್ವ ಅಥವಾ ಇತರೇ ಅಲ್ಪಸಂಖ್ಯಾತರಿಗೆ ಬಹುಸಂಖ್ಯಾತರ ಕ್ಷೇತ್ರಗಳನ್ನು ಬಿಟ್ಟುಕೊಡುವುದು ಬಿ.ಜೆ.ಪಿ. ಗೆ ಲಾಭ ಮಾಡಿದಂತೆಯೇ ವಿನ: ಅದರಿಂದ ಕಾಂಗ್ರೆಸ್‌ ಗೆ ಅನುಕೂಲ ಶೂನ್ಯ.

ಇಂತಿಪ್ಪ ನಿವೇದಿತ್‌ ಆಳ್ವ ಆಕ್ಸಪರ್ಡ್‌ ಚೆವನಿಂಗ್‌ ಫೆಲೋಶಿಪ್‌ ನಿಮಿತ್ತ ಈಗ ವಿದೇಶಕ್ಕೆ ಹಾರಿದ್ದಾರೆ. ತಮಗೆ ಆಕ್ಸಪರ್ಡ್‌ ಗುರುಕುಲ ಫೆಲೋಶಿಪ್‌ ದೊರೆತಿರುವುದು, ಅದಕ್ಕಾಗಿ ೨ ತಿಂಗಳ ಅವಧಿಯವರೆಗೆ ಯು.ಕೆ. ದಲ್ಲಿ ಇರುವ ಬಗ್ಗೆ ತಮ್ಮ ಅಂತರ್ಜಾಲ ಖಾತೆಗಳಲ್ಲಿ ಬರೆದುಕೊಂಡಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ತೆರಳಬೇಕಾಗಿದ್ದ ಈ ಅವಕಾಶ ಕೋವಿಡ್‌ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಈಗ ಒದಗಿಬಂದಿದೆ ಎಂದು ಹರ್ಷಿಸಿರುವ ಆಳ್ವ ಭಾರತ ಜೋಡೊ ಯಾತ್ರೆ ಕರ್ನಾಟಕಕ್ಕೆ ಬರುವ ಸಂದರ್ಭದಲ್ಲಿ ತಮ್ಮ ಉಪಸ್ಥಿತಿ ಇರುವುದಿಲ್ಲ ಎಂದು ಬರೆದುಕೊಂಡಿಲ್ಲ.

ಉತ್ತರ ಕನ್ನಡದಲ್ಲಿ ಆಗಾಗ ಬಂದುಹೋಗುವ ಇಂಥ ಅಕಾಲದ ಅತಿಥಿಗಳು, ಜಿಲ್ಲಾ ಯುವ ಕಾಂಗ್ರೆಸ್‌ ನೇತೃತ್ವ ವಹಿಸಿ ಪಾದುಕಾಶ್ರಮದ ಯಥಿಗಳಂತೆ ಸದಾ ಮೌನವೃತ,ಹೋರಾಟ ವೈರಾಗ್ಯ ಪಾಲಿಸುವ ಲೆಟರ್‌ ಹೆಡ್‌ ಅಧ್ಯಕ್ಷರು. ಮತ್ತು ಸೇಫ್‌ ತಾಣದ ವಿಶ್ರಾಂತಿ ಬಯಸುವ ಸಾಮಾಜಿಕ ಜಾಲತಾಣ ಇವುಗಳಿಂದಾಗಿ ಹಿಂದುತ್ವವಾದಿ ಮುಖವಾಡದ ಮತಾಂಧ ರಾಜಕೀಯ ಅಧಿಕಾರದಾಹಿಗಳಿಗೆ ಲಾಭವಾಗುತ್ತದೆಯೇ ಹೊರತು ಕಾಂಗ್ರೆಸ್‌ ನ ಗೆಲ್ಲುವ ಸಾಧ್ಯತೆ ವಿಸ್ತರಿಸುವುದಿಲ್ಲ ಎನ್ನುವ ಅಭಿಪ್ರಾಯವಿದೆ. ಎನಿವೆ, ಖರ್ಗೆ ಕಾಂಗ್ರೆಸ್‌ ನ ಇಂಥ ಡಿಸಾರ್ಡರ್‌ ಗಳಿಗೆ ಔಷಧಿ ಕಂಡುಹಿಡಿಯಬಲ್ಲರೆಂಬುದಷ್ಟೇ ಆಶಾವಾದ.

Awarded the Chevening Gurukul Fellowship at Oxford

I had shared back in 2020 that I had been awarded the ‘Chevening Gurukul Fellowship in Leadership and Excellence’ at the University of Oxford. The program which had been pushed by two years due to the Covid pandemic, finally started last week in the United Kingdom.

This flagship fellowship of the British Government meant for mid-career professionals from diverse backgrounds who demonstrate leadership potential. Every year 12 Gurukul Fellows are selected from several thousand via an all India multi-layered selection process. This prestigious Chevening Gurukul Fellowship programme is based at St Cross College, Oxford University and hosted by the Department of Politics and International Relations.

I look forward to an insightful learning once in a lifetime experience for the next 8 weeks. ಆಕ್ಸ್‌ಫರ್ಡ್‌ನಲ್ಲಿ ಚೆವೆನಿಂಗ್ ಗುರುಕುಲ ಫೆಲೋಶಿಪ್ ನೀಡಲಾಯಿತು

ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ನನಗೆ ‘ಲೀಡರ್‌ಶಿಪ್ ಮತ್ತು ಎಕ್ಸಲೆನ್ಸ್‌ನಲ್ಲಿ ಚೆವೆನಿಂಗ್ ಗುರುಕುಲ ಫೆಲೋಶಿಪ್’ ನೀಡಲಾಗಿದೆ ಎಂದು ನಾನು 2020 ರಲ್ಲಿ ಮತ್ತೆ ಹಂಚಿಕೊಂಡಿದ್ದೇನೆ. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷಗಳ ಕಾಲ ಮುಂದೂಡಲ್ಪಟ್ಟ ಕಾರ್ಯಕ್ರಮವು ಅಂತಿಮವಾಗಿ ಯುನೈಟೆಡ್ ಕಿಂಗ್‌ಡಂನಲ್ಲಿ ಕಳೆದ ವಾರ ಪ್ರಾರಂಭವಾಯಿತು.

ಬ್ರಿಟಿಷ್ ಸರ್ಕಾರದ ಈ ಪ್ರಮುಖ ಫೆಲೋಶಿಪ್ ನಾಯಕತ್ವದ ಸಾಮರ್ಥ್ಯವನ್ನು ಪ್ರದರ್ಶಿಸುವ ವೈವಿಧ್ಯಮಯ ಹಿನ್ನೆಲೆಯಿಂದ ವೃತ್ತಿಜೀವನದ ಮಧ್ಯದ ವೃತ್ತಿಪರರಿಗೆ ಮೀಸಲಾಗಿದೆ. ಪ್ರತಿ ವರ್ಷ 12 ಗುರುಕುಲ ಫೆಲೋಗಳನ್ನು ಅಖಿಲ ಭಾರತ ಬಹು-ಪದರದ ಆಯ್ಕೆ ಪ್ರಕ್ರಿಯೆಯ ಮೂಲಕ ಹಲವಾರು ಸಾವಿರಗಳಿಂದ ಆಯ್ಕೆ ಮಾಡಲಾಗುತ್ತದೆ. ಈ ಪ್ರತಿಷ್ಠಿತ ಚೆವೆನಿಂಗ್ ಗುರುಕುಲ ಫೆಲೋಶಿಪ್ ಕಾರ್ಯಕ್ರಮವು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸೇಂಟ್ ಕ್ರಾಸ್ ಕಾಲೇಜಿನಲ್ಲಿ ನೆಲೆಗೊಂಡಿದೆ ಮತ್ತು ರಾಜಕೀಯ ಮತ್ತು ಅಂತರರಾಷ್ಟ್ರೀಯ ಸಂಬಂಧಗಳ ವಿಭಾಗದಿಂದ ಆಯೋಜಿಸಲಾಗಿದೆ.

ಮುಂದಿನ 8 ವಾರಗಳವರೆಗೆ ಜೀವಮಾನದ ಅನುಭವದಲ್ಲಿ ಒಮ್ಮೆ ಒಳನೋಟವುಳ್ಳ ಕಲಿಕೆಗಾಗಿ ನಾನು ಎದುರು ನೋಡುತ್ತಿದ್ದೇನೆ.-ನಿವೇದಿತ್‌ ಆಳ್ವ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *