

ಸಿದ್ದಾಪುರ. ತಾಲೂಕಿನ ಭುವನಗಿರಿ ಸಮೀಪದ ಹೊಸಳ್ಳಿಯಲ್ಲಿ ಗೋಪೂಜೆ ಹಾಗೂ ಗೋಕ್ರೀಡೆಯನ್ನು ಶೃದ್ಧಾ ಭಕ್ತಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು. ರೈತರು ತಮ್ಮ ದನಕರುಗಳಿಗೆ ಸ್ನಾನ ಮಾಡಿಸಿ, ಅಲಂಕಾರ ಮಾಡಿ ಕೊಟ್ಟಿಗೆಯಲ್ಲಿ ಪೂಜೆ ಸಲ್ಲಿಸಿದರು. ಗೋ ಗ್ರಾಸ ನೀಡಿದ ನಂತರ ಊರಿನ ಎಲ್ಲಾ ದನಕರುಗಳನ್ನು ಬೆಚ್ಚುವ ಕಟ್ಟೆಯವರಿಗೆ ಕರೆತಂದರು. ನಂತರ ಬೆಚ್ಚುವ ಕಟ್ಟೆಯ ಭೂತಪ್ಪನಿಗೆ ಸುಳಿಗಾಗಿ ಒಡೆದು ಪೂಜೆ ಸಲ್ಲಿಸಲಾಯಿತು. ಅದಾದ ನಂತರ ಗ್ರಾಮದ ಸುತ್ತಲಿನ ಎಲ್ಲಾ ದೇವತೆಗಳಿಗೆ ಹಣ್ಣು ಕಾಯಿ ಸಮರ್ಪಿಸಿದರು.




ಸಿದ್ದಾಪುರ. ತಾಲೂಕಿನ ಭುವನಗಿರಿ ಸಮೀಪದ ಹೊಸಳ್ಳಿಯಲ್ಲಿ ಸಂಪ್ರದಾಯದಂತೆ ಸೋಮವಾರ ನರಕ ಚತುರ್ದಶಿಯಂದು ಶ್ರೀರಾಮ ದೇವಾಲಯದಲ್ಲಿ ಬೂರೆನೀರು ತುಂಬಲಾಯಿತು. ಶ್ರೀ ರಾಮ ಹಾಗೂ ಪರಿವಾರ ದೇವತೆಗಳಿಗೆ ನರಕ ಚತುರ್ದಶಿಯ ನಿಮಿತ್ತ ಅರಿಷಿಣ ಎಣ್ಣೆ ಅಭ್ಯಂಜನ ಹಾಗೂ ಕ್ಷೀರಾಭಿಷೇಕವನ್ನು ನಡೆಸಲಾಯಿತು. ಊರಿನ ಬೊಮ್ಮೇದೇವರು ಹಾಗೂ ಭೂತರಾಜನಿಗೆ ಪೂಜೆಯನ್ನು ಅರ್ಪಿಸಲಾಯಿತು. ಭಕ್ತಾದಿಗಳು ಪೂಜೆಯಲ್ಲಿ ಸಾಮೂಹಿಕವಾಗಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಪೂಜೆಯನ್ನು ವಿನಾಯಕ ಭಟ್ಟ ಡೊಂಬೆಕೈ ಹಾಗೂ ನಾರಾಯಣ ಹೆಗಡೆ ಕಲ್ಲಾರೆಮನೆ ನೆರವೇರಿಸಿದರು. ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಹರೀಶ ನಾಯ್ಕ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
