

ಅರಣ್ಯ ಅತಿಕ್ರಮಣ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿ.ಜೆ.ಪಿ.ಗಳಿಗೆ ನೈತಿಕತೆ ಇಲ್ಲ, ಈ ವಿಚಾರದಲ್ಲಿ ಪರಸ್ಪರ ಕೆಸರೆರಚಾಟ ನಡೆಸುತ್ತಿರುವುದು ನಾಚಿಕೆಗೇಡು ಎಂದು ಆಪ್ ದೂರಿದೆ. ಸಿದ್ಧಾಪುರದ ಆಮ್ ಆದ್ಮಿ ಕಛೇರಿಯಲ್ಲಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಈ ಆರೋಪ ಮಾಡಿರುವ ಮುಖಂಡರು.
ರವೀಂದ್ರ ನಾಯ್ಕ ರ ಹೋರಾಟದ ಬಗ್ಗೆ ಗೌರವವಿದೆ ಆದರೆ ಕಳೆದ ವಾರ ಅವರ ನಿಯಂತ್ರಣ ತಪ್ಪಿ ಸಮಾವೇಶ ಕಾಂಗ್ರೆಸ್ ಮಯವಾದ ಬಗ್ಗೆ ತಮ್ಮ ವಿಷಾದವಿದೆ ಎಂದರು.
ಎ.ರವೀಂದ್ರ ಕಳೆದ ಮೂರು ದಶಕಗಳಿಂದ ಅರಣ್ಯ ಭೂಮಿ ಬಳಕೆದಾರರ ಪರವಾಗಿ ಹೋರಾಟ ನಡೆಸುತಿದ್ದಾರೆ. ದೇಶಪಾಂಡೆ ಸಚಿವರಾಗಿದ್ದಾಗ ಕಾಂಗ್ರೆಸ್ ನವರು, ಬಿ.ಜೆ.ಪಿ. ಆಡಳಿತದ ಅವಧಿಯಲ್ಲಿ ಬಿ.ಜೆ.ಪಿ.ಯವರು ಮತ್ತು ಹಿರಿಯ ಶಾಸಕ, ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಧಿಕಾರದಲ್ಲಿದ್ದಾಗ ಅರಣ್ಯ ಅತಿಕ್ರಮಣದಾರರಿಗೆ ನ್ಯಾಯ ಕೊಡಿಸದವರು ಈಗ ಪರಸ್ಪರ ಕೆಸರೆರಚಾಟ ಮಾಡುತ್ತಿರುವುದು ನಾಚಿಗೆಗೇಡು ಎಂದು ಆಪ್ ಉತ್ತರ ಕನ್ನಡ ಜಿಲ್ಲಾ ಉಪಾಧ್ಯಕ್ಷ ವೀರಭದ್ರನಾಯ್ಕ ಮತ್ತು ತಾಲೂಕಾ ಅಧ್ಯಕ್ಷ ಲಕ್ಷ್ಮಣ ನಾಯ್ಕ ದೂರಿದರು. ಮಾಧ್ಯಮಗೋಷ್ಠಿಯಲ್ಲಿ ರಾಘವೇಂದ್ರ ನಾಯ್ಕ, ಆಯ್.ಸಿ. ನಾಯ್ಕ. ಲೋಕೇಶ್ ಹೆಗಡೆ ಇತರರು ಉಪಸ್ಥಿತರಿದ್ದರು.
